ETV Bharat / state

ಸಿದ್ದರಾಮಯ್ಯ ಬಹಳ ದಿನದಿಂದ ಭವಿಷ್ಯ ಹೇಳುತ್ತಿದ್ದಾರೆ: ಮುನೇನಕೊಪ್ಪ - Siddaramaiah CM change statement

ಸಿದ್ದರಾಮಯ್ಯನವರ ಸಿಎಂ ಬದಲಾವಣೆ ಹೇಳಿಕೆ ವಿಚಾರಕ್ಕೆ ನವಲಗುಂದದಲ್ಲಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದರು.

Minister Shankar Patil Munenakoppa
ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ
author img

By

Published : Dec 9, 2022, 9:26 PM IST

Updated : Dec 10, 2022, 2:33 PM IST

ಧಾರವಾಡ: ಸಿದ್ದರಾಮಯ್ಯನವರ ಸಿಎಂ ಬದಲಾವಣೆ ಹೇಳಿಕೆ ವಿಚಾರ ಕುರಿತು ನವಲಗುಂದದಲ್ಲಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಮಾತನಾಡಿದರು. ಅವರು ಬಹಳ ದಿನದಿಂದ ಭವಿಷ್ಯ ಹೇಳುತ್ತಿದ್ದಾರೆ. ನಾನು ಕೇಳುತ್ತಾ ಬಂದಿದ್ದೇನೆ ಎಂದು ವ್ಯಂಗ್ಯವಾಡಿದರು.

ಸಿ‌ಎಂ ಬೊಮ್ಮಾಯಿ ಒಳ್ಳೆಯ ಆಡಳಿತ ನಡೆಸುತ್ತಿದ್ದು, ಎಲ್ಲಾ ವರ್ಗದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ಅವರಿಗೆ ಬದಲಾವಣೆ ಅವಶ್ಯಕತೆ ಇಲ್ಲ. ಚುನಾವಣೆಗೆ ಬರಲಿ, ಅವರು ಭಾರತೀಯ ಜನತಾ ಪಾರ್ಟಿಯನ್ನು ಗೆಲ್ಲಿಸಿ ಉತ್ತರ ಕೊಡುತ್ತಾರೆ ಎಂದರು.

ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಪ್ರತಿಕ್ರಿಯೆ

ನರೇಂದ್ರ ಮೋದಿ‌ ನಾಯಕತ್ವವನ್ನು ಪ್ರಪಂಚವೇ ಒಪ್ಪಿಕೊಂಡಿದೆ. ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲೂ ಬಿಜೆಪಿಗೆ ಜನ ಆಶೀರ್ವಾದ ಮಾಡುತ್ತಾರೆ. ಟಿಕೆಟ್‌ ನೀಡುವ ಬಗ್ಗೆ ಕೇಂದ್ರದ ನಮ್ಮ ಪಾರ್ಲಿಮೆಂಟರಿ ಬೋರ್ಡ್ ಯಾವ ತೀರ್ಮಾನ ತೆಗೆದುಕೊಳ್ಳುತ್ತೋ ಅದನ್ನು ಸ್ವಾಗತ ಮಾಡುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ : ಸಿಎಂ ಬದಲಾವಣೆ ಹೇಳಿಕೆ ನೀಡಿದ ಮಾಜಿ ಶಾಸಕರಿಗೆ ಸಿಎಂ, ಕಟೀಲ್ ವಾರ್ನಿಂಗ್

Last Updated : Dec 10, 2022, 2:33 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.