ETV Bharat / state

ಹರ್ ಘರ್ ತಿರಂಗಾ ಅಭಿಯಾನ ಡೋಂಗಿ ರಾಜಕೀಯ: ಸಿದ್ದರಾಮಯ್ಯ ಟೀಕಾ ಪ್ರಹಾರ - ಭಾರತ ಅಮೃತ ಮಹೋತ್ಸವ

ಆರ್​ಎಸ್​ಎಸ್​ ನವರು ರಾಷ್ಟ್ರ ಧ್ವಜ, ಸಂವಿಧಾನವನ್ನು ವಿರೋಧಿಸಿದ್ದರು. ಆದರೆ, ಇಂದು ಹರ್ ಘರ್ ತಿರಂಗಾ ಅಭಿಯಾನ ಮಾಡುತ್ತಿರುವುದು ಡೋಂಗಿ ರಾಜಕೀಯ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟೀಕೆ ಮಾಡಿದ್ದಾರೆ.

siddaramaiah-statement-against-har-ghar-tiranga-abhiyan
ಹರ್ ಘರ್ ತಿರಂಗಾ ಅಭಿಯಾನ ಡೋಂಗಿ ರಾಜಕೀಯ : ಮಾಜಿ ಸಿಎಂ ಸಿದ್ದರಾಮಯ್ಯ ಟೀಕೆ
author img

By

Published : Aug 10, 2022, 12:22 PM IST

ಹುಬ್ಬಳ್ಳಿ : ಕೇಂದ್ರ ಸರ್ಕಾರ ರಾಷ್ಟ್ರಧ್ವಜ ವಿಚಾರದಲ್ಲಿ ಡೋಂಗಿ ರಾಜಕೀಯ ಮಾಡಬಾರದು. ಬಿಜೆಪಿಯವರ ಹರ್ ಘರ್ ತಿರಂಗಾ ಅಭಿಯಾನ ಡೋಂಗಿ ರಾಜಕೀಯ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

ನಗರದಲ್ಲಿ ಮಾಧ್ಯಮದೊಂದಿಗೆ ಮಾತಾನಾಡಿದ ಅವರು, ನಾನು ಡೋಂಗಿ ರಾಜಕೀಯ ಮಾಡಬಾರದು ಎಂದು ಹೇಳಿದ್ದೇನೆ. ಹಿಂದೆ ಆರ್ ಎಸ್​ಎಸ್​ ಗೋಳ್ವಲ್ಕರ್ ಮತ್ತು ಸಾವರ್ಕರ್ ರಾಷ್ಟ್ರಧ್ವಜ ಬೇಡ ಅಂದಿದ್ದರು. ಅವರು ನಮ್ಮ ರಾಷ್ಟ್ರಧ್ವಜ ಮತ್ತು ಸಂವಿಧಾನವನ್ನು ವಿರೋಧ ಮಾಡಿದ್ದರು. ಆರ್​ಎಸ್​ಎಸ್ ನವರು ನಾಗರಪುರದ ಕಚೇರಿಯ ಮೇಲೆ ತ್ರಿವರ್ಣ ಧ್ವಜ ಹಾರಿಸ್ತಾರಾ ಎಂದು ಪ್ರಶ್ನಿಸಿದರು.

ಹರ್ ಘರ್ ತಿರಂಗಾ ಅಭಿಯಾನ ಡೋಂಗಿ ರಾಜಕೀಯ : ಮಾಜಿ ಸಿಎಂ ಸಿದ್ದರಾಮಯ್ಯ ಟೀಕೆ

ಬಿಹಾರದಲ್ಲಿನ ರಾಜಕೀಯ ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಿದ ಅವರು, ನಿತೀಶ್ ಕುಮಾರ್ ಒಳ್ಳೆಯ ಕೆಲಸ ಮಾಡಿದ್ದಾರೆ. ಅವರು ಇವಾಗ ಎನ್ ಡಿಎ ತೊರೆದಿದ್ದಾರೆ. ಅವರುಗಳ ಮನಸ್ತಾಪದ ಬಗ್ಗೆ ನನಗೆ ಗೊತ್ತಿಲ್ಲ. ಅವರೊಬ್ಬ ಸಮಾಜವಾದಿ ಹಿನ್ನೆಲೆಯಿಂದ ಬಂದಿದ್ದವರು. ಕೋಮುವಾದ ಪಕ್ಷ ಬಿಟ್ಟಿದ್ದು ಒಳ್ಳೆಯದು ಎಂದು ಹೇಳಿದರು.

ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ : ಸಿಎಂ ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಮೂರನೇ ಸಿಎಂ ಆದರೂ ಬರಲಿ, ನಾಲ್ಕನೆಯವರಾದರೂ ಬರಲಿ ನಮಗೇನು ಸಂಬಂಧವಿಲ್ಲ. ಬಿ ಎಸ್ ಯಡಿಯೂರಪ್ಪ ಅವರ ಬದಲಾವಣೆ ಬಗ್ಗೆ ನನಗೆ ಗೊತ್ತಿತ್ತು. ಅದಕ್ಕೆ ನಾನು ಈ ಹಿಂದೆ ಹೇಳಿದ್ದೆ. ಆದರೆ ಬೊಮ್ಮಾಯಿವರ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಹೇಳಿದರು.

ಬಾದಾಮಿಯಲ್ಲಿ ನಾನು ಸ್ಪರ್ಧಿಸುವ ಬಗ್ಗೆ ಇನ್ನು ನಿರ್ಧರಿಸಿಲ್ಲ. ಎಲ್ಲ ಕಡೆ ಎಲೆಕ್ಷನ್‌ ಗೆ ನಿಲ್ಲೊಕ್ಕಾಗುತ್ತಾ...? ಸದ್ಯ ಬಾದಾಮಿಯ ಶಾಸಕ,ಮುಂದಿನ ಚುನಾವಣೆಯ ಎಲ್ಲಿ ನಿಲ್ಲುತ್ತೇನೆ ಎಂದು ನಾನೇ ಹೇಳ್ತೀನಿ ಎಂದು ಹೇಳಿದರು.

ಓದಿ : ಬಾಗಲಕೋಟೆ: ಭಾರಿ ಮಳೆಗೆ 65ಕ್ಕೂ ಅಧಿಕ ಮನೆಗಳು ಕುಸಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.