ಧಾರವಾಡ: ಯಡಿಯೂರಪ್ಪನವರು ಸ್ವಯಂ ಪ್ರೇರಿತರಾಗಿ ಬಂದು ಹಿರಿಯರಾಗಿ ಕಿರಿಯರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಅದೇ ದಾರಿಯಲ್ಲಿ ನಮ್ಮ ಪ್ರತಿ ಪಕ್ಷದಲ್ಲೂ ಹಿರಿಯರಿದ್ದು, ಕಿರಿಯರಿಗೆ ಅವಕಾಶ ಮಾಡಿಕೊಡಬೇಕು ಎಂದು ಸಚಿವ ಅಶ್ವತ್ಥನಾರಾಯಣ ಹೇಳಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ಸಿಎಂ ಇದ್ದಾಗ ಸಿದ್ದರಾಮಯ್ಯ ಅವರೇ ನಿವೃತ್ತಿ ಬಗ್ಗೆ ಸ್ವಯಂ ಘೋಷಣೆ ಮಾಡಿಕೊಂಡಿದ್ದರು. ಅಧಿಕಾರದ ರುಚಿ ನೋಡಿದ ಮೇಲೆ ಅವರಿಗೆ ಈಗ ಆ ಮಾತೇ ಮರೆತುಹೋಗಿದೆ. ಎಷ್ಟೇ ವಯಸ್ಸಾದರೂ ಅಧಿಕಾರದಲ್ಲಿ ಇರಬೇಕು, ಬೇರೆಯವರಿಗೆ ಅಧಿಕಾರ ಬಿಟ್ಟು ಕೊಡಬಾರದು ಎಂಬ ಆಸೆ ಸಿದ್ದರಾಮಯ್ಯ ಅವರಿಗೆ ಇದೆ ಎಂದು ಸಚಿವ ಅಶ್ವತ್ಥನಾರಾಯಣ ಆರೋಪಿಸಿದರು.
ಪ್ರಧಾನಿಗೆ ಖರ್ಗೆ ರಾವಣ ಪದ ಬಳಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಇದುವರೆಗೆ ಒಂದು ಸ್ಪಷ್ಟವಾದ ನಿಲುವು ಇಟ್ಟುಕೊಳ್ಳದೇ, ಕೇವಲ ಕುಟುಂಬ ರಾಜಕಾರಣ, ಸಮಾಜ ಒಡೆಯುವ ಕೆಲಸ ಮಾಡಿದೆ. ಧರ್ಮ ಆಚರಣೆ, ಭಾವನೆ ಗೌರವಿಸದೇ ಸಮಾಜಕ್ಕೆ ಕಂಟಕವಾಗುವ ಕಾರ್ಯ ಮಾಡಿದ್ದು ಕಾಂಗ್ರೆಸ್ ಪಕ್ಷ. ಖರ್ಗೆ ಅವರು ತಮ್ಮ ಪಕ್ಷ ಏನು ಕೆಲಸ ಮಾಡಿದೆ, ಹೇಗೆ ಮಾಡಿದೆ ಎಂದು ನಡೆದು ಬಂದ ದಾರಿಯ ಅವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಅಪ್ರಸ್ತುತ ಪಕ್ಷ: ಬೇರೆ ಕಡೆ ಬೊಟ್ಟು ಮಾಡಿ ತೋರಿಸುವ ಮೊದಲು ತಮ್ಮ ಪಕ್ಷ ಏನು ಕೆಲಸ ಮಾಡಿದೆ ಏಂದೂ ಮೊದಲು ನೋಡಿಕೊಳ್ಳಬೇಕು. ಅದೊಂದು ಅಪ್ರಸ್ತುತ ಪಕ್ಷ, ಕಾಂಗ್ರೆಸ್ ಯವುದೇ ಪ್ರಯತ್ನಕ್ಕೆ ಸೊಪ್ಪು ಹಾಕುವುದಿಲ್ಲ, ಕಾಂಗ್ರೆಸ್ ಪಕ್ಷವನ್ನು ಆಗಲೇ ಬಯಲಿಗೆ ಏಳೆದಾಗಿದೆ. ಯಾವ ನೆಲೆ ಇಲ್ಲದಂತ ಸ್ಥಿತಿ ಅವರದಾಗಿದೆ. ಹತಾಶರಾಗಿ ಅವರು ಸಂಬಂಧ ಇಲ್ಲದ ಹೇಳಿಕೆ ಕೊಡುತಿದ್ದಾರೆ ಎಂದು ಹೇಳಿದರು.
ಪಕ್ಷದಲ್ಲಿ ಸೈನಿಕರಾಗಿ ಕೆಲಸ ಮಾಡುತ್ತೇವೆ: ಗುಜರಾತ್ ನಲ್ಲಿ ಮಾಡಿದ್ದೇ ರಾಜ್ಯದಲ್ಲಿ ಮಾಡುತ್ತಾರೆ. ಅಂತಾ ಇಲ್ಲಾ ಒಂದೊಂದು ಜಾಗದಲ್ಲಿ ಒಂದೊಂದು ಸ್ಥಿತಿ ಇರುತ್ತದೆ. ಕರ್ನಾಟಕ ಮಾಡೆಲ್ ಕರ್ನಾಟಕನೇ ಗುಜರಾತ್ ಮಾಡೆಲ್ ಗುಜರಾತ್, ನಮ್ಮ ಹಿರಿಯರ ಯಾವ ಸಂದರ್ಭದಲ್ಲಿ ನಿಶ್ಚಯ ಮಾಡಬೇಕು ಮಾಡ್ತಾರೆ. ಎಲ್ಲವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸೈನಿಕರಾಗಿ ನಾವು ಕೆಲಸ ಮಾಡುತ್ತೇವೆ ಅಧಿಕಾರವನ್ನೇ ಬಯಸಿ ನಾವು ಕೆಲಸ ಮಾಡಲ್ಲ, ಸಮಾಜದ ಪರ, ದೇಶದ ಪರ ನಾವು ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ: ಬಾಲಕನ ಮೇಲೆ ಪಿಟ್ಬುಲ್ ನಾಯಿ ದಾಳಿ: ವಿದ್ಯಾರ್ಥಿಗೆ ಗಂಭೀರ ಗಾಯ