ಧಾರವಾಡ: ಕಳೆದ ರಾತ್ರಿ ಹಾಗೂ ಇವತ್ತು ಬೆಳಗ್ಗೆ ದೇಶದ ಹಲವು ರಾಜ್ಯ ಹಾಗೂ ನಮ್ಮ ರಾಜ್ಯದ ಜಿಲ್ಲೆಗಳಲ್ಲಿ ಎನ್ಐಎ ಪೊಲೀಸರು ಹಾಗೂ ಇಡಿಯವರು ಎಸ್ಡಿಪಿಐ ಹಾಗೂ ಪಿಎಫ್ಐ ಕಚೇರಿಗಳ ಮೇಲೆ ಮತ್ತೆ ದಾಳಿ ಮಾಡಿದ್ದಾರೆ. ಇದು ಅಪಾಯಕಾರಿ ಸಂಗತಿ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಈ ಎರಡು ಸಂಘಟನೆ ದೇಶದ್ರೋಹಿ ಸಂಘಟನೆ ಎಂದು ಜಗಜ್ಜಾಹೀರು ಆಗಿದೆ. ಎರಡನೇ ಬಾರಿಯೂ ಕೂಡಾ ಅವರ ಮನೆ ಹಾಗೂ ಕಚೇರಿ ಮೇಲೆ ದಾಳಿ ಮಾಡಿದ್ದು, ಗಮನಾರ್ಹ ವಿಷಯ. ಆರ್ಎಸ್ಎಸ್ ಹಾಗೂ ಆರ್ಎಸ್ಎಸ್ನವರ ಮೇಲೆ ಟಾರ್ಗೆಟ್ ಇರುವಂತಹ ಪ್ರಕ್ರಿಯೆ ಇತ್ತು.
ಹಿಂದೂ ಹಾಗೂ ಹಿಂದುತ್ವದ ಮೇಲೆ ಇವರ ಟಾರ್ಗೆಟ್ ಇದೆ. ಇತ್ತೀಚೆಗೆ ಆರ್ಎಸ್ಎಸ್ ಕಾರ್ಯಕರ್ತರ ಕಾರಿನ ಮೇಲೆ ಕೊಲೆ ಮಾಡುತ್ತೇವೆ ಎಂದು ಬರವಣಿಗೆ ಬರೆದಿದ್ದಾರೆ. ಇವೆಲ್ಲ ಆತಂಕದ ವಿಷಯ ಎಂದು ಹೇಳಿದರು.
ಕೇಂದ್ರ ಸರ್ಕಾರ ತೆಗೆದುಕೊಂಡ ಕ್ರಮ ಅಭಿನಂದನಾರ್ಹ. ಇನ್ನೂ ಜಾಲಾಡಿದರೆ ಸಾಕಷ್ಟು ವಿಷಯ, ಸಾಕಷ್ಟು ಶಸ್ತ್ರ ಹಾಗೂ ಕಾರ್ಯಕರ್ತರು ಸಿಗ್ತಾರೆ. ಹಲವು ಪತ್ರ ಸಿಗುತ್ತವೆ. ಹಳ್ಳಿಗಳಲ್ಲಿ ಪಸರಿಸಿದ ಈ ಪಿಎಫ್ಐ ಕ್ಯಾನ್ಸರ್ ಆಪರೇಟ್ ಮಾಡಿ ಕೇಂದ್ರ ಸರ್ಕಾರ ಸಂಪೂರ್ಣ ಸುರಕ್ಷತೆ ಕಡೆ ತೆಗೆದುಕೊಂಡು ಹೋಗುತ್ತಿದೆ. ಇದನ್ನ ವಿಸ್ತಾರವಾಗಿ ಮಾಡಬೇಕು ಎಂದರು.