ಹುಬ್ಬಳ್ಳಿ: ಕಳೆದ ಎರಡೂವರೆ ತಿಂಗಳಿನಿಂದ ಬಂದ್ ಆಗಿದ್ದ ಮಾಲ್‌ಗಳು ಮತ್ತೆ ಇಂದಿನಿಂದ ಪುನಾರಂಭವಾಗಿವೆ.
ನಗರದ ಗೋಕುಲ್ ರಸ್ತೆಯಲ್ಲಿನ ಅರ್ಬನ್ ಒಯಸಿಸ್ ಮಾಲ್ ಇಂದಿನಿಂದ ತೆರೆದಿದ್ದು, ಪೂಜೆ ಮಾಡುವ ಮೂಲಕ ಪುನಾರಂಭ ಮಾಡಿದ್ದಾರೆ.
ಕೋಯಿನ್ ರಸ್ತೆಯಲ್ಲಿನ ಯು ಮಾಲ್ ವಾಪಾರ ವಹಿವಾಟು ಆರಂಭಿಸಿದ್ದು, ಇದಲ್ಲದೆ ಕ್ರೀಡಾ ಸಾಮಗ್ರಿಯ ಮಾಲ್ ಡೆಕಾಥ್ಲಾನ್ ಕೂಡ ತೆರೆದಿದೆ. ಸಾಮಾಜಿಕ ಅಂತರ ಕಾಯುವ ಹಿನ್ನೆಲೆಯಲ್ಲಿ ಮಾಲ್‌ಗಳ ಎದುರು ಚೌಕಾಕಾರದ ಬಾಕ್ಸ್ ಬರೆಯಲಾಗಿದೆ.
ಪ್ರತಿ ಮಳಿಗೆಯಲ್ಲಿ ಒಂದು ಬಾರಿಗೆ ಐವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ. ಮಾಲ್‌ಗಳಲ್ಲಿ ಮಕ್ಕಳು, ಗರ್ಭಿಣಿಯರು, ವೃದ್ಧರಿಗೆ ಪ್ರವೇಶ ನಿಷೇಧಿಸಲಾಗಿದೆ. ಮಾಸ್ಕ್ ಧರಿಸಿ ಮಳಿಗೆಗಳಿಗೆ ಬರುವಂತೆ ಸೂಚನೆ ನೀಡಲಾಗುತ್ತಿದೆ.
ಸರ್ಕಾರ ನೀಡಿರುವ ಮಾರ್ಗಸೂಚಿ ಪಾಲಿಸಲು ಈಗಾಗಲೇ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಪ್ರವೇಶ ದ್ವಾರದಲ್ಲಿ ಥರ್ಮಲ್ ಸ್ಕ್ರೀನಿಂಗ್ ಇಟ್ಟು, ಪ್ರತಿಯೊಬ್ಬರನ್ನು ತಪಾಸಣೆ ನಡೆಸಿಯೇ ಒಳಗೆ ಪ್ರವೇಶ ನೀಡಲಾಗುತ್ತಿದೆ. ಅಲ್ಲದೆ ಸ್ಯಾನಿಟೈಸರ್ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ.
ವಾಣಿಜ್ಯ ನಗರಿಯಲ್ಲಿ ಮಾಲ್‌ಗಳು ಪುನಾರಂಭ: ಶರತ್ತುಗಳು ಅನ್ವಯ - Hubli dharwad news
ಲಾಕ್ ಡೌನ್ ಹಿನ್ನೆಲೆ ರಾಜ್ಯದಲ್ಲಿ ಮುಚ್ಚಲಾಗಿದ್ದ ಮಾಲ್ಗಳನ್ನು ಸರ್ಕಾರದ ಮಾರ್ಗಸೂಚಿಯಂತೆ ತೆರೆಯಲು ಅವಕಾಶ ನೀಡಿದ ಬೆನ್ನಲ್ಲೇ, ಇಂದು ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿಯೂ ಸಹ ಮಾಲ್‌ಗಳು ಆರಂಭವಾಗಿವೆ.