ಹುಬ್ಬಳಿ: ಕಡ್ಡಾಯ ವರ್ಗಾವಣೆ ಆದೇಶದಿಂದ ಚಿಂತೆಗೀಡಾದ ಶಿಕ್ಷಕರೊಬ್ಬರು ಅಸ್ವಸ್ಥಗೊಂಡು ನಗರದ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಆನಂದ ನಗರದ ನಿವಾಸಿ ಪ್ರೌಢ ಶಾಲಾ ಶಿಕ್ಷಕ ಸುಭಾಷ ತರ್ಲಘಟ್ ಎಂಬುವವರು ಗದಗ ಜಿಲ್ಲೆಯ ಶಿರಹಟ್ಟಿ ಗ್ರಾಮಕ್ಕೆ ವರ್ಗಾವಣೆಗೊಂಡ ಆದೇಶ ಕೇಳಿ ಅವರ ರಕ್ತದೊತ್ತಡ ದಿಢೀರನೆ ಕಡಿಮೆಯಾಗದೆ. ತಕ್ಷಣ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅವೈಜ್ಞಾನಿಕ ರೀತಿಯಲ್ಲಿ ಶಿಕ್ಷಕರ ವರ್ಗಾವಣೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಚರ್ಚಿಸುತ್ತೇನೆ. ಕಡ್ಡಾಯ ವರ್ಗಾವಣೆ ಎನ್ನುವುದು ಶಿಕ್ಷಕ ಪಾಲಿಗೆ ಶಿಕ್ಷೆಯಾಗಿದೆ ಎಂದು ಹುಬ್ಬಳ್ಳಿಯ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ್ ಅಬ್ಬಯ್ಯ ಹೇಳಿದರು.
ಅನಾರೋಗ್ಯಗೊಂಡ ಶಿಕ್ಷಕ ತರ್ಲಘಟ್ ಕುಟುಂಬಕ್ಕೆ ಧೈರ್ಯ ಹೇಳಿ, ವರ್ಗಾವಣೆ ನೀತಿ ಸರಿಪಡಿಸುವ ಭರವಸೆ ನೀಡಿದ್ದಾರೆ.