ಧಾರವಾಡ: ಅಖಿಲ ಭಾರತ ವೀರಶೈವರು ಅಂದ್ರೂ ಒಂದೇ.. ಅಖಿಲ ಭಾರತ ಲಿಂಗಾಯತ ಅಂದ್ರೂ ಒಂದೇ ಎಂದು ನಗರದಲ್ಲಿ ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಶಂಕರ ಬಿದರಿ ಹೇಳಿದ್ದಾರೆ.
ನಗರದ ಲಿಂಗಾಯತ ಭವನದಲ್ಲಿ ನಡೆಯುತ್ತಿರುವ ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ವೀರಶೈವರು, ಲಿಂಗಾಯತರು ಎಲ್ಲರೂ ಒಂದೇ.. ಬೇರೆ ಬೇರೆ ಅಲ್ಲವೇ ಅಲ್ಲ. ಈ ಬಗ್ಗೆ ಭಿನ್ನಾಭಿಪ್ರಾಯವಾಗಲಿ, ಸಂಶಯಗಳಾಗಲಿ ಬೇಡ. ಗುರುಪರಂಪರೆ, ವಿರಕ್ತ ಪರಂಪರೆ, ಶರಣ ಪರಂಪರೆ ಎಂದು ಮೂರು ಭಾಗಗಳು ಇವೆ ಹೊರತು, ಲಿಂಗಾಯತ-ವೀರಶೈವರಲ್ಲಿ ಬೇಧ-ಭಾವ ಇಲ್ಲ ಎಂದರು. ಕ್ರಿಶ್ಚಿಯನ್,ಮುಸ್ಲಿಂರಲ್ಲಿಯೂ ಅನೇಕ ಪಂಗಡಗಳಿವೆ. ಹಾಗೆಯೇ ನಮ್ಮಲ್ಲಿಯೂ ಪಂಗಡಗಳಾಗಿವೆ.
ಸಮಾಜ ದೊಡ್ಡದಾದಂತೆ ವರ್ಗಗಳು ಬೆಳೆಯುತ್ತ ಹೋಗಿವೆ. ಜಗತ್ತಿನ ಯಾವ ಮೂಲೆಯಲ್ಲಿದ್ದರೂ ಲಿಂಗಧಾರಿಗಳೆಲ್ಲ ಒಂದೇ, ವೀರಶೈವ ಲಿಂಗಾಯತದಷ್ಟು ಉದಾತ್ತವಾದ ಧರ್ಮ ಮತ್ತೊಂದಿಲ್ಲ. ದೇಶದ ಎಲ್ಲಾ ಪ್ರಧಾನಿಗಳು ಬಸವಣ್ಣನವರ ವಿಚಾರಗಳನ್ನೇ ಹೇಳುತ್ತ ಬಂದಿದ್ದಾರೆ. ಇದಕ್ಕಿಂತ ಗೌರವ ನಮಗೆ ಬೇರೋಂದಿಲ್ಲ, ಲಿಂಗಾಯತರು ಸಿಎಂ ಆಗಿದ್ದು ಸಮಾಜದ ಜನಸಂಖ್ಯೆ ಹೆಚ್ಚಿದೆ ಅಂತಲ್ಲ, ಅವರಲ್ಲಿ ಎಲ್ಲರನ್ನೂ ಭಾತೃತ್ವದಿಂದ ನೋಡುವಂತಹ ಮನೋಭಾವ, ಸಂಸ್ಕಾರ ಇತ್ತು.
ಎಲ್ಲರಲ್ಲಿಯೂ ಸಮಪಾಲು, ಸಮಬಾಳು ಕಂಡ ನಾಯಕರಾಗಿ ಬೆಳೆದಿರುವುದು ಎಂದರು. ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯಾಧ್ಯಕ್ಷ ಎನ್. ತಿಪ್ಪಣ್ಣ, ಮಠಾಧೀಶರು, ಮಹಾಸಭಾದ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.