ETV Bharat / state

ಲೈಂಗಿಕ ಆರೋಪ ಹಿನ್ನೆಲೆ.. ಶ್ರೀ ಸಿದ್ಧಾರೂಢಮಠದ ಧರ್ಮದರ್ಶಿ ಡಾ.ಬಸವರಾಜ್ ಸಂಕನಗೌಡ ರಾಜೀನಾಮೆ.. - Dr. Basavaraj Sankanagowda resigned

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿ ಮಠ ಟ್ರಸ್ಟ್​ನ ಧರ್ಮದರ್ಶಿ ಡಾ. ಬಸವರಾಜ್ ಸಂಕನಗೌಡ ಮಠದ ಟ್ರಸ್ಟಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಲೈಂಗಿಕ ಆರೋಪ ಹಿನ್ನೆಲೆ: ಧರ್ಮದರ್ಶಿ ಡಾ. ಬಸವರಾಜ್ ಸಂಕನಗೌಡ ರಾಜೀನಾಮೆ
author img

By

Published : Oct 15, 2019, 4:29 PM IST

ಹುಬ್ಬಳ್ಳಿ: ಶ್ರೀ ಸಿದ್ದಾರೂಢ ಸ್ವಾಮಿ ಮಠ ಟ್ರಸ್ಟ್​ನ ಧರ್ಮದರ್ಶಿ ಡಾ.ಬಸವರಾಜ್ ಸಂಕನಗೌಡ ಮಠದ ಟ್ರಸ್ಟಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಮಠದ ಆಡಳಿತಾಧಿಕಾರಿ ಅಂತಿಮ‌ ಮುದ್ರೆ ಹಾಕುವುದೊಂದು ಬಾಕಿ ಇದೆ.

ಡಾ.‌ಬಸವರಾಜ್ ಸಂಕನಗೌಡ ಅವರ ಮೇಲೆ ಲೈಂಗಿಕ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸೋಮವಾರ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಡಾ.‌ಬಸವರಾಜ್ ವೈಯಕ್ತಿಕ ಕಾರಣ ನೀಡಿ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಸ್ವತಃ ರಾಜೀನಾಮೆ ಪತ್ರ ಸಲ್ಲಿಸಿದ್ದು ಅದು ಕ್ರಮಬದ್ದವಾಗಿದೆ. ಮಠದ ಆಡಳಿತಾಧಿಕಾರಿಯಾಗಿರುವ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು ರಾಜೀನಾಮೆ‌ ಅಂಗೀಕಾರ ಮಾಡುವ ಸೂಚನೆ ಇದೆ.

ಆರೋಪ ಮಾಡಿದ ಮಹಿಳಾ ಟ್ರಸ್ಟಿಯೊಬ್ಬರು ಸೋಮವಾರ ಸಭೆಗೆ ಆಗಮಿಸದೆ ಇರುವುದರಿಂದ‌ ಬುಧವಾರ ಮತ್ತೆ ಸಭೆ ಸೇರುವುದಾಗಿ‌ ಮಠದ ಮೂಲಗಳು ತಿಳಿಸಿವೆ. ವ್ಯಕ್ತಿಗಳ ಖಾಸಗಿತನ, ಶ್ರೀಮಠದ ಗೌರವಕ್ಕೆ ಧಕ್ಕೆ ಹಾಗೂ ಭಕ್ತರ ಮನಸ್ಸಿಗೆ ನೋವಾಗುವ ಘಟನೆ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಲಾಗಿದೆ.

Intro:ಹುಬ್ಬಳ್ಳಿ-01

ಇಲ್ಲಿನ‌ ಸಿದ್ದಾರೂಢ ಸ್ವಾಮಿ ಮಠ ಟ್ರಸ್ಟ್ ನ ಧರ್ಮದರ್ಶಿ ಡಾ. ಬಸವರಾಜ್ ಸಂಕನಗೌಡರ ಮಠದ ಟ್ರಸ್ಟಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಮಠದ ಆಡಳಿತಾಧಿಕಾರಿ ಅಂತಿಮ‌ ಮುದ್ರೆ ಹಾಕುವದೊಂದರ ಬಾಕಿ ಇದೆ.
ಡಾ.‌ಬಸವರಾಜ್ ಸಂಕನಗೌಡ ಅವರ ಮೇಲೆ ಆರೋಪ ವ್ಯಕ್ತವಾದ ಹಿನ್ನೆಲೆಯಲ್ಲಿ ಸೋಮವಾರ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಡಾ.‌ಬಸವರಾಜ್ ವೈಯಕ್ತಿಕ ಕಾರಣ ನೀಡಿ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ರಾಜೀನಾಮೆ ಪತ್ರ ಕ್ರಮಬದ್ದವಾಗಿದ್ದು, ಸ್ವತ ರಾಜೀನಾಮೆ ಪತ್ರ ಸಲ್ಲಿಸಿದ್ದು, ಮಠದ ಆಡಳಿತಾಧಿಕಾರಿಯಾಗಿರುವ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು ರಾಜೀನಾಮೆ‌ ಅಂಗೀಕಾರ ಮಾಡುವ ಸೂಚನೆ ಇದೆ. ಆರೋಪ ಬಂದ ಮಹಿಳಾ ಟ್ರಸ್ಟಿಯೊಬ್ಬರು ಸೋಮವಾರ ಸಭೆಗೆ ಆಗಮಿಸದೆ ಇರುವದರಿಂದ‌ ಬುಧವಾರ ಮತ್ತೆ ಸಭೆ ಸೇರುವದಾಗಿ‌ ಮಠದ ಮೂಲಗಳು ತಿಳಿಸಿವೆ. ವ್ಯಕ್ತಿಗಳ ಖಾಸಗಿತನ, ಶ್ರೀಮಠದ ಗೌರವಕ್ಕೆ ಧಕ್ಕೆ ಹಾಗೂ ಭಕ್ತರ ಮನಸ್ಸಿಗೆ ನೋವಾಗುವ ಘಟನೆ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಲಾಗಿದೆ.‌Body:H B GaddadConclusion:Etv hubli
ETV Bharat Logo

Copyright © 2025 Ushodaya Enterprises Pvt. Ltd., All Rights Reserved.