ETV Bharat / state

ಧಾರವಾಡ: ಮೆಗಾ ಲೋಕ ಅದಾಲತ್​​ನಲ್ಲಿ 342 ಪ್ರಕರಣಗಳ ಇತ್ಯರ್ಥ

ಶನಿವಾರ ಕರ್ನಾಟಕ ಉಚ್ಛ ನ್ಯಾಯಾಲಯ ಧಾರವಾಡ ಪೀಠದ ಹಿರಿಯ ನ್ಯಾಯಮೂರ್ತಿ ಜಿ. ನರೇಂದರ್ ಮಾರ್ಗದರ್ಶನದಲ್ಲಿ ಮೆಗಾ ಲೋಕ ಅದಾಲತ್​, ಇ-ಲೋಕ ಅದಾಲತ್​ನ್ನು ಏರ್ಪಡಿಸಲಾಗಿದ್ದು, ಒಟ್ಟು 935 ಪ್ರಕರಣಗಳನ್ನು ವಿಚಾರಣೆಗೆ ಗುರುತಿಸಿಕೊಳ್ಳಲಾಗಿತ್ತು. ಆ ಪೈಕಿ ಒಟ್ಟು 342 ಪ್ರಕರಣಗಳನ್ನು ರೂ.6,18,42,902/- ಮೊತ್ತಕ್ಕೆ ಇತ್ಯರ್ಥಪಡಿಸಲಾಯಿತು.

dharawad
ಮೆಗಾ ಲೋಕ ಅದಾಲತ್
author img

By

Published : Dec 20, 2020, 9:50 AM IST

ಧಾರವಾಡ: ಜಿಲ್ಲೆಯಲ್ಲಿ ಮೆಗಾ ಲೋಕ ಅದಾಲತ್​, ಇ-ಲೋಕ ಅದಾಲತ್​ನ್ನು ಶನಿವಾರ ಕರ್ನಾಟಕ ಉಚ್ಛ ನ್ಯಾಯಾಲಯ ಧಾರವಾಡ ಪೀಠದ ಹಿರಿಯ ನ್ಯಾಯಮೂರ್ತಿ ಜಿ. ನರೇಂದರ್ ಮಾರ್ಗದರ್ಶನದಲ್ಲಿ ಏರ್ಪಡಿಸಲಾಗಿತ್ತು.

ಅದಾಲತ್‍ನಲ್ಲಿ ನ್ಯಾಯಮೂರ್ತಿಗಳಾದ ಅಶೋಕ ಎಸ್. ಕಿಣಗಿ, ಪ್ರದೀಪ ಸಿಂಗ್​ ಯೆರೂರ, ಎಮ್.ಐ. ಅರುಣ, ರವಿ ವಿ. ಹೊಸಮನಿ, ವಿ. ಶ್ರೀಶಾನಂದ ಹಾಗೂ ಇವರೊಂದಿಗೆ ಲೋಕ ಅದಾಲತ್‍ನ ಸದಸ್ಯರುಗಳಾದ ಎಲ್.ಟಿ. ಮಂಟಗಣಿ, ಎಮ್.ಟಿ. ಬಂಗಿ, ಎಮ್.ಎಮ್. ಕನ್ನೂರ, ಜೆ.ಎಸ್. ಶೆಟ್ಟಿ ಮತ್ತು ಎಸ್.ಎಸ್. ಬಡವಡಗಿ ಸೇರಿದಂತೆ ಒಟ್ಟು 5 ಪೀಠಗಳನ್ನು ಆಯೋಜಿಸಲಾಗಿತ್ತು.

ಅದಾಲತ್‍ನಲ್ಲಿ ಒಟ್ಟು 935 ಪ್ರಕರಣಗಳನ್ನು ವಿಚಾರಣೆಗೆ ಗುರುತಿಸಿಕೊಳ್ಳಲಾಗಿತ್ತು. ಆ ಪೈಕಿ ಒಟ್ಟು 342 ಪ್ರಕರಣಗಳನ್ನು ರೂ.6,18,42,902/- ಮೊತ್ತಕ್ಕೆ ಇತ್ಯರ್ಥಪಡಿಸಲಾಯಿತು ಎಂದು ಕರ್ನಾಟಕ ಉಚ್ಛ ನ್ಯಾಯಾಲಯ ಧಾರವಾಡ ಪೀಠದ ಅಧೀನ ವಿಲೇಖನಾಧಿಕಾರಿ ಮತ್ತು ಉಚ್ಛ ನ್ಯಾಯಾಲಯದ ಕಾನೂನು ಸೇವಾ ಸಮಿತಿಯ ಕಾರ್ಯದರ್ಶಿ ರೋಣ ವಾಸುದೇವ ತಿಳಿಸಿದ್ದಾರೆ.

ಧಾರವಾಡ ಜಿಲ್ಲಾ ನ್ಯಾಯಾಲಯ:

ಶನಿವಾರದ ಮೆಗಾ ಇ-ಲೋಕ ಅದಾಲತ್​​​ನಲ್ಲಿ 8,539 ಚಾಲ್ತಿ ಹಾಗೂ 41 ವ್ಯಾಜ್ಯಪೂರ್ವ ಪ್ರಕರಣಗಳು ಇತ್ಯರ್ಥಗೊಂಡಿವೆ.‌ ಜಿಲ್ಲಾ ನ್ಯಾಯಾಲಯದ ಲೋಕ ಅದಾಲತ್‍ನಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಉಮೇಶ್ ಎಮ್.ಅಡಿಗ ಅವರ ಮಾರ್ಗದರ್ಶನದಲ್ಲಿ ಧಾರವಾಡದಲ್ಲಿ 13 ಪೀಠಗಳನ್ನು, ಹುಬ್ಬಳ್ಳಿಯಲ್ಲಿ 16 ಪೀಠಗಳನ್ನು, ಕುಂದಗೋಳ, ನವಲಗುಂದದಲ್ಲಿ ತಲಾ 02 ಮತ್ತು ಕಲಘಟಗಿಯಲ್ಲಿ 1 ಪೀಠವನ್ನು ಒಟ್ಟು 34 ಪೀಠಗಳನ್ನು ಸ್ಥಾಪಿಸಲಾಗಿತ್ತು.

ವಿವಿಧ ರೀತಿಯ ಸುಮಾರು 14,344 ಕ್ಕಿಂತ ಹೆಚ್ಚು ಪ್ರಕರಣಗಳನ್ನು ತೆಗೆದುಕೊಂಡು ಅವುಗಳ ಪೈಕಿ 8,539 ಚಾಲ್ತಿ ಇರುವ ಪ್ರಕರಣಗಳನ್ನು ಹಾಗೂ 41 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜಿ ಸಂಧಾನ ಮಾಡಿಸಲಾಯಿತು. ಸುಮಾರು 20 ಕೋಟಿಗಿಂತ ಹೆಚ್ಚು ಮೊತ್ತವನ್ನು ವಸೂಲು ಮಾಡಲಾಯಿತು.

ಓದಿ: ಭಾರತದ ಮೇಲೆ ಚೀನಾ ಕಣ್ಗಾವಲು ಆರೋಪ: ಸುಪ್ರೀಂ ಮೊರೆ ಹೋದ ಎನ್​ಜಿಒ

ಲೋಕ ಅದಾಲತ್‍ನಲ್ಲಿ ಧಾರವಾಡ ಜಿಲ್ಲೆಯ ಎಲ್ಲಾ ನ್ಯಾಯಾಧೀಶರು, ವಿವಿಧ ವಿಮೆ ಕಂಪನಿಯ ಅಧಿಕಾರಿಗಳು, ವಿಮೆ ಕಂಪನಿಯ ಪ್ಯಾನಲ್ ವಕೀಲರುಗಳು, ಎನ್.ಡಬ್ಲೂ.ಕೆ.ಆರ್.ಟಿ.ಸಿ. ಅಧಿಕಾರಿಗಳು, ಅರ್ಜಿದಾರರ ಪರ ವಕೀಲರುಗಳು, ಕಕ್ಷಿದಾರರು ಜೊತೆಗೆ ವಿಡಿಯೋ ಕಾನ್ಫರೆನ್ಸ್ ಮುಖಾಂತರ ಭಾಗವಹಿಸಿ ಸದರಿ ಮೆಗಾ ಇ-ಲೋಕ ಅದಾಲತ್‍ನ್ನು ಯಶಸ್ವಿಗೊಳಿಸಿದ್ದಾರೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಚಿಣ್ಣನ್ನವರ್ ಆರ್.ಎಸ್. ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.