ಹುಬ್ಬಳ್ಳಿ: ಬೈಕ್ ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದ ಕಾರಿನ ಚಾಲಕ ಟ್ರ್ಯಾಕ್ಟರ್ ಹಾಗೂ ಬೈಕ್ ಡಿಕ್ಕಿ ಹೊಡೆದ ಘಟನೆ ಶಿರಗುಪ್ಪಿ ಗ್ರಾಮದ ಬಳಿ ನಡೆದಿದೆ.
ಶಿರಗುಪ್ಪಿ ಗ್ರಾಮದ ಬಳಿ ಎದುರಿಗೆ ಬಂದ ಬೈಕ್ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದ ಕಾರಿನ ಚಾಲಕ ಟ್ಯ್ರಾಕ್ಟರ್ ಹಾಗೂ ಬೈಕ್ಗೆ ಡಿಕ್ಕಿ ಹೊಡೆದಿದ್ದು, ಮೂರು ವಾಹನಗಳು ಒಂದಕ್ಕೊಂದು ಗುದ್ದಿ ಕೊಂಡಿವೆ.
ಎಚ್.ಎಸ್. ಜಡಿಯವರ ಎಂಬುವವರಿಗೆ ಸೇರಿದ ಕಾರು ಇದಾಗಿದ್ದು, ಹುಬ್ಬಳ್ಳಿಯಿಂದ ಗದಗ ಹೊರಟ್ಟಿದ್ದ ವೇಳೆ ಘಟನೆ ನಡೆದಿದೆ. ಘಟನೆಯಲ್ಲಿ ಸ್ಥಳೀಯ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಮೂವರಿಗೆ ಸಣ್ಣ ಪ್ರಮಾಣದ ಗಾಯಗಳಾಗಿವೆ.
ಈ ಸಂಬಂಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.