ETV Bharat / state

ಹುಬ್ಬಳ್ಳಿ: ಜಿಲ್ಲಾ ಉಸ್ತವಾರಿ ಕಾರ್ಯದರ್ಶಿ ಗೌರವ್ ಗುಪ್ತಾ ಕಿಮ್ಸ್ ಭೇಟಿ - Gaurav Gupta visits KIMS news

ಕಿಮ್ಸ್ ಆಸ್ಪತ್ರೆಯಲ್ಲಿ ಸ್ಥಾಪಿಸಲಾಗಿರುವ ಕೇಂದ್ರೀಕೃತ ಆಮ್ಲಜನಕ ಸರಬರಾಜು ಘಟಕ ವೀಕ್ಷಿಸಿದ ಗುಪ್ತಾ, ಘಟಕದ ಕಾರ್ಯನಿರ್ವಹಣೆ ಬಗ್ಗೆ ಮಾಹಿತಿ ಪಡೆದುಕೊಂಡರು.

ಗೌರವ್ ಗುಪ್ತಾ ಕಿಮ್ಸ್ ಭೇಟಿ
ಗೌರವ್ ಗುಪ್ತಾ ಕಿಮ್ಸ್ ಭೇಟಿ
author img

By

Published : Aug 21, 2020, 4:50 PM IST

ಹುಬ್ಬಳ್ಳಿ: ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಗೌರವ್ ಗುಪ್ತಾ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಗೌರವ್ ಗುಪ್ತಾ ಕಿಮ್ಸ್ ಭೇಟಿ

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್-19 ರೋಗಿಗಳು ಹಾಗೂ ಕಿಮ್ಸ್ ಲ್ಯಾಬ್​ನಲ್ಲಿ ನಡೆಸುತ್ತಿರುವ ಆರ್​ಟಿಪಿಸಿಆರ್ (RT-PCR) ಟೆಸ್ಟ್​ಗಳ ಬಗ್ಗೆ ಮಾಹಿತಿ ಪಡೆದರು. ಕಿಮ್ಸ್ ಆಸ್ಪತ್ರೆಯಲ್ಲಿ 630 ಬೆಡ್​ಗಳಿಗೆ ಆಕ್ಸಿಜನ್ ಸರಬರಾಜು ವ್ಯವಸ್ಥೆ ಕಲ್ಪಿಸಲಾಗಿದೆ. 100 ವೆಂಟಿಲೇಟರ್ ಸೌಲಭ್ಯದ ಐಸಿಯು ವಾರ್ಡ್ ಸಿದ್ಧಪಡಿಸಲಾಗಿದೆ. ಕೊಪ್ಪಳ, ‌ಹಾವೇರಿ, ಸವದತ್ತಿ, ಗದಗ ಸೇರಿದಂತೆ ಹಲವು ಜಿಲ್ಲೆಗಳಿಂದ ಕೋವಿಡ್ ರೋಗಿಗಳು ಹುಬ್ಬಳ್ಳಿಯ ಕಿಮ್ಸ್ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗುತ್ತಿದ್ದಾರೆ. ಇವರ ಮಾಹಿತಿಯನ್ನು ಆಯಾ ಜಿಲ್ಲಾ ಕಚೇರಿಗಳಿಗೆ ಕಳುಹಿಸಿ ಕೊಡಲಾಗುತ್ತಿದೆ. ಜಿಲ್ಲೆಯಲ್ಲಿ ಕೋವಿಡ್ ರೋಗಿಗಗಳ ಮರಣ ಪ್ರಮಾಣ ಶೇ.5 ರಷ್ಟಿದೆ. ಪ್ರತಿದಿನ 2 ಸಾವಿರಕ್ಕೂ ಅಧಿಕ RAT ಟೆಸ್ಟ್ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಇತರೆ ವಿಭಾಗಳ ವೈದ್ಯರು ಹಾಗೂ‌ ನರ್ಸ್​ಗಳಿಗೆ ಕೋವಿಡ್ ಚಿಕಿತ್ಸೆ ನೀಡುವುದರ ಕುರಿತು ತರಬೇತಿ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಮಾಹಿತಿ ನೀಡಿದರು.

333‌ ಕೋವಿಡ್ -19 ರೋಗಿಗಳು ಕಿಮ್ಸ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 115 ರೋಗಿಗಳು ಸಾರಿ (SARI) ಲಕ್ಷಣಗಳನ್ನು ಹೊಂದಿದ್ದಾರೆ. ಒಟ್ಟು 185 ರೋಗಿಗಳನ್ನು ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಹೇಳಿದರು.

ಕೇಂದ್ರೀಕೃತ ಆಮ್ಲಜನಕ ಸರಬರಾಜು ಘಟಕ ವೀಕ್ಷಣೆ: ಕಿಮ್ಸ್ ಆಸ್ಪತ್ರೆಯಲ್ಲಿ ಸ್ಥಾಪಿಸಲಾಗಿರುವ ಕೇಂದ್ರೀಕೃತ ಆಮ್ಲಜನಕ ಸರಬರಾಜು ಘಟಕ ವೀಕ್ಷಿಸಿದ ಗುಪ್ತಾ, ಘಟಕದ ಕಾರ್ಯನಿರ್ವಹಣೆ ಬಗ್ಗೆ ಮಾಹಿತಿ ಪಡೆದುಕೊಂಡರು. 20 ಕೆ.ಎಲ್ ಸಾಮರ್ಥ್ಯ ವೈದ್ಯಕೀಯ ದ್ರವ ಆಮ್ಲಜನಕ ಘಟಕ ಇದಾಗಿದೆ. ದ್ರವ ರೂಪದ ಆಮ್ಲಜನಕವನ್ನು ಅನಿಲ ರೂಪಕ್ಕೆ‌ ಬದಲಾಯಿಸಿ ಸಬರಾಜು ಮಾಡಲು‌ 400 ಎನ್​ಎಮ್​ಕ್ಯೂ ಸಾಮರ್ಥ್ಯದ ಆವಿ ಪರಿವರ್ತಕವನ್ನು ಅವಳವಡಿಸಲಾಗಿದೆ. ತುರ್ತು ಸಂದರ್ಭದ ಬಳಕೆಗೆ ಆಮ್ಲಜನದ ಸಿಲೆಂಡರ್​ಗಳನ್ನು ಸಿದ್ಧವಿರಸಲಾಗಿದೆ ಎಂದು ಪರಿಸರ ಅಭಿಯಂತರ ಅಖಿಲ್ ಕುಮಾರ್ ವಿವರಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.