ಹುಬ್ಬಳ್ಳಿ: ಕುಂದಗೋಳ ಬಳಿಯ ಟೋಲ್‌ಗೇಟ್ ಸುಂಕ ಸಂಗ್ರಹ ವಿರೋಧಿಸಿ ಇಂದು ವಿವಿಧ ಸಂಘಟನೆಗಳು ಕುಂದಗೋಳ ಬಂದ್ ಗೆ ಕರೆ ನೀಡಿವೆ.
ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಸೇರಿದಂತೆ ಅನೇಕ ಸಂಘಟನೆಗಳಿಂದ ಬಂದ್‌ಗೆ ಕರೆ ನೀಡಲಾಗಿದ್ದು, ಅಂಗಡಿ ಮುಂಗಟ್ಟುಗಳು, ಬಸ್ ಸಂಚಾರ ಸಂಪೂರ್ಣ ಸ್ತಬ್ಧವಾಗಿದೆ. ಅಲ್ಲದೇ ಕುಂದಗೋಳ ಪಟ್ಟಣದಲ್ಲಿರುವ ಎಲ್ಲ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಇತ್ತೀಚೆಗಷ್ಟೆ ಟೋಲ್ ಗೇಟ್ ಸುಂಕ ವಿರೋಧಿಸಿ ನಾಲ್ಕು ಗಂಟೆಗಳ ರಸ್ತೆ ಬಂದ್ ಮಾಡಿ ವಿವಿದ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಇಂದು ಏಕಾ ಏಕಿ ಬಂದ್‌ಗೆ ಕರೆ ನೀಡಲಾಗಿದ್ದು, ಹುಬ್ಬಳ್ಳಿ - ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿ72 ಸಂಪೂರ್ಣವಾಗಿ ಬಂದ್ ಆಗಿದೆ.