ಧಾರವಾಡ: ದಿನದಿಂದ ದಿನಕ್ಕೆ ಶಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಕೊರೊನಾ ಸೋಂಕಿತರನ್ನು ಪತ್ತೆ ಹಚ್ಚಲು ಜಿಲ್ಲೆಯಲ್ಲಿ ಮತ್ತೊಂದು ಪ್ರಯೋಗಾಲಯ ಪ್ರಾರಂಭಿಸಲಾಗಿದೆ.
ಶಂಕಿತರ ಮಾದರಿಗಳನ್ನು ಬೇಗ ಪರೀಕ್ಷೆ ಮಾಡುವ ದೃಷ್ಟಿಯಿಂದ ಡಿಮ್ಹಾನ್ಸ್ ಆಸ್ಪತ್ರೆಯಲ್ಲಿ ಮತ್ತೊಂದು ಕೊರೊನಾ ವೈರಸ್ ಪತ್ತೆ ಮಾಡಲು ಮತ್ತೊಂದು ಪ್ರಯೋಗಾಲಯ ಪ್ರಾರಂಭವಾಗಿದೆ. ಇದರಿಂದ ಶಂಕಿತರ ಮಾದರಿಗಳನ್ನು ಬೇಗ ಪತ್ತೆ ಮಾಡಬಹುದಾಗಿದೆ. ಡಿಮ್ಹಾನ್ಸ್ನಲ್ಲಿ 2016 ರಲ್ಲಿ ಆರಂಭವಾಗಿದ್ದ ಪ್ರಯೋಗಾಲಯ ಈಗ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ.
ರಾಜ್ಯದಲ್ಲಿ ಕೊರೊನಾ ಶಂಕಿತರು ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಕೇಂದ್ರ ಸರ್ಕಾರದ ಅನುದಾನದಲ್ಲಿ ಲ್ಯಾಬ್ ಆರಂಭಿಸಲಾಗಿದೆ. ದಿನಕ್ಕೆ 100ಕ್ಕೂ ಹೆಚ್ಚು ಪರೀಕ್ಷೆ ನಡೆಸಬಹುದಾಗಿದ್ದು, ಜಿಲ್ಲೆಯಲ್ಲಿ ಇದು ಎರಡನೇ ಕೋವಿಡ್ ಪ್ರಯೋಗಾಲಯವಾಗಿದೆ.