ETV Bharat / state

ಮತೀಯವಾದಿಗಳ ವಿರುದ್ಧ ಎರಡನೇ ಸ್ವಾತಂತ್ರ್ಯ ಸಂಗ್ರಾಮ: ಉಗ್ರಪ್ಪ - second freedom moment against fascism

ಬ್ರಿಟಿಷರ ವಿರುದ್ಧ ನಡೆದದ್ದು ಪ್ರಥಮ ಸ್ವಾತಂತ್ರ್ಯ ಸಂಗ್ರಾಮ. ಈಗ ಮತೀಯವಾದಿಗಳ ವಿರುದ್ಧ ನಡಿಯುತ್ತಿರುವುದು ಎರಡನೇಯ ಸ್ವಾತಂತ್ರ್ಯ ಸಂಗ್ರಾಮ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಪರೋಕ್ಷವಾಗಿ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ವಿರುದ್ಧ ಹರಿಹಾಯ್ದಿದ್ದಾರೆ.

farmer mp urgappa
ಮಾಜಿ ಸಂಸದ ಉಗ್ರಪ್ಪ
author img

By

Published : Dec 26, 2019, 5:16 PM IST

ಧಾರವಾಡ: ಬ್ರಿಟಿಷರ ವಿರುದ್ಧ ನಡೆದದ್ದು ಪ್ರಥಮ ಸ್ವಾತಂತ್ರ್ಯ ಸಂಗ್ರಾಮ. ಈಗ ಮತೀಯವಾದಿಗಳ ವಿರುದ್ಧ ನಡಿಯುತ್ತಿರುವುದು ಎರಡನೇಯ ಸ್ವಾತಂತ್ರ್ಯ ಸಂಗ್ರಾಮ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಪರೋಕ್ಷವಾಗಿ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ವಿರುದ್ಧ ಹರಿಹಾಯ್ದಿದ್ದಾರೆ.

ಮಾಜಿ ಸಂಸದ ಉಗ್ರಪ್ಪ

ಇಲ್ಲಿನ ಕಡಪಾ ಮೈದಾನದಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಈಗ ಸೂರ್ಯಗ್ರಹಣ ಬಿಟ್ಟಿದೆ. ಮೋದಿ ಮತ್ತು ಅಮಿತ್​ ಶಾ ರಾಹು-ಕೇತು ಇದ್ದಂತೆ. ಅವರಿಬ್ಬರಿಂದ ದೇಶಕ್ಕೆ ಗ್ರಹಣ ಹಿಡಿದಿದೆ. ಕಾಂಗ್ರೆಸ್​ ಮುಕ್ತ ಮಾಡುತ್ತೇವೆ ಎಂದು ಅಬ್ಬರಿಸುತ್ತಿದ್ದವರಿಗೆ ಮತದಾರರು ಬಿಜೆಪಿ ಮುಕ್ತ ಮಾಡುವ ಎಲ್ಲಾ ಸೂಚನೆಗಳನ್ನು ವಿಧಾನಸಭೆ ಚುನಾವಣೆಗಳಲ್ಲಿ ನೀಡುತ್ತಿದ್ದಾರೆ ಎಂದು ಹೇಳಿದರು.

ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಂಘ ಪರಿವಾರದವರು ಬ್ರಿಟಿಷರ ಜೊತೆ ಇದ್ದರು. ಒಂದು ಧರ್ಮ, ಸಂಸ್ಕೃತಿ ನಮ್ಮದಲ್ಲ. ವಿವಿಧತೆಯಲ್ಲಿ ಏಕತೆ ಕಾಣುವಂತಹ ಸಂವಿಧಾನ ಅಂಬೇಡ್ಕರ್ ಕೊಟ್ಟಿದ್ದಾರೆ. ಅಪಾಯಕಾರಿ ಮನುಧರ್ಮ ಶಾಸ್ತ್ರ ಜಾರಿಗೆ ತರಲು ಮೋದಿ, ಅಮಿತ್ ಶಾ ಹೊರಟಿದ್ದಾರೆ ಎಂದು ಕಿಡಿಕಾರಿದರು.

Intro:ಧಾರವಾಡ: ಇದು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಮೊದಲ ಸ್ವಾತಂತ್ರ್ಯ ಸಂಗ್ರಾಮ ವಿದೇಶಿಗರ ವಿರುದ್ಧ ನಡಿದಿತ್ತು.‌ ಇವತ್ತು ಮತಿಯವಾದಿಗಳ ವಿರುದ್ಧ ನಡೀತಾ ಇರೋದು ಎರಡನೆಯ ಸ್ವಾತಂತ್ರ್ಯ ಸಂಗ್ರಾಮ ಎಂದು ಧಾರವಾಡದಲ್ಲಿ ಕಾಂಗ್ರೆಸ್ ಮುಖಂಡ ವಿ.ಎಸ್. ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಧಾರವಾಡದ ಕಡಪಾ ಮೈದಾನದಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯಿದೆ ವಿರೋಧದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಈಗ ಸೂರ್ಯಗ್ರಹಣ ಬಿಟ್ಟಿದೆ. ಮೋದಿ ಮತ್ತು ಅಮಿತ ಷಾ ರಾಹು ಕೇತು ಇದ್ದಂತೆ. ಅವರಿಬ್ಬರಿಂದ ದೇಶಕ್ಕೆ ಗ್ರಹಣ ಹಿಡಿದಿದೆ ಎಂದು ಹರಿಹಾಯ್ದರು.

ಪ್ರಧಾನಿ ಎಚ್ಚರಗೊಳ್ಳದಿದ್ದರೆ ಬಿಜೆಪಿ ಹಾನಿಯಾಗುತ್ತೆ ಅಂತಾ ಸುಬ್ರಹ್ಮಣ್ಯ ಸ್ವಾಮಿಯೇ ಹೇಳಿದ್ದಾರೆ. ದೇಶದ ರಕ್ಷಣೆ ಮಾಡುವ ಸೈನಿಕರಿಗೆ ಕೊಡುವ ಅನುದಾನದಲ್ಲಿ ೧ ಲಕ್ಷ ಕೋಟಿ ಕಡಿಮೆ ಮಾಡಿದ್ದಾರೆ. ಪಂಕ್ಚರ ಹಾಕೋದು ಕೂಡ ಒಂದು ಕರ್ತವ್ಯ ಚಹಾವಾಲಾ ಪ್ರಧಾನಿ ಆಗ್ತಾನೆ ಅಂತೀರಿ. ಆದರೆ ಪಂಕ್ಚರ ಹಾಕೋರ ಬಗ್ಗೆ ಮಾತನಾಡುತ್ತೀರಿ ನಿಮಗೆ ಮನುಷ್ಯತ್ವ ಇದೆಯಾ ಮನುಷ್ಯನನ್ನು ಮನುಷ್ಯನಾಗಿ ನೋಡುವ ದೃಷ್ಟಿ ಇಲ್ಲ ಎಂದು ಹೇಳಿದರು.

ಸಂವಿಧಾನವನ್ನು ಕಿತ್ತು ಒಗೆಯುವ ವ್ಯವಸ್ಥಿತ ಸಂಚು ನಡೆಯುತ್ತಿದೆ. ಅಮಿತಾ ಷಾ, ಮೋದಿ ಏನಾದ್ರೂ ಸಂವಿಧಾನ ಓದಿದಾರಾ? ಮೋದಿ ಮತ್ತು ಅಮಿತಾ ಷಾ ದೇಶದ ಏಕತೆ, ಆರ್ಥಿಕತೆ ಕಾಪಾಡುವಲ್ಲಿ ವಿಫಲವಾಗಿದ್ದಾರೆ‌. ದೇಶದ ರಕ್ಷಣೆ ಮಾಡುವ ಬದ್ಧತೆ ಇವರಿಗಿಲ್ಲ ಎಂದು ದೂರಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಸಂಘ ಪರಿವಾರದವರು ಬ್ರಿಟಿಷರ ಜೊತೆ ಇದ್ದರು. ದೇಶದಲ್ಲಿ ಮಾತ ಎತ್ತಿದ್ರೆ ಮೋದಿ ಅಂತಾರೆ. ಕಾಂಗ್ರೆಸ್ ಮುಕ್ತ ಭಾರತ ಮಾಡತೇನಿ ಅಂತಾ ಹೇಳಿದ್ರು, ದೇಶದ ಯುವಕರು ಮೋದಿ ಮತ್ತು ಅಮಿತ್ ಷಾ ರಾಷ್ಟ್ರ ಮಾಡಲು ಹೊರಟಿದ್ದಾರೆ. ವಿವಿಧತೆಯಲ್ಲಿ ಏಕತೆ ಕಾಣುವಂತಹ ಸಂವಿಧಾನ ಅಂಬೇಡ್ಕರ್ ಕೊಟ್ಟಿದ್ದಾರೆ. ಮನು ಧರ್ಮ ಶಾಸ್ತ್ರ ಜಾರಿಗೆ ತರಲು ಹೊರಟಿದ್ದಾರೆ. ಮೋದಿ, ಅಮಿತ ಷಾಗೆ ಬದ್ಧತೆ ಇದ್ದಲ್ಲಿ ಇಂತಹ ಕಾನೂನು ತರೋ ಕಾರ್ಯ ಮಾಡಿದ್ದಕ್ಕೆ ದೇಶದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.Body:ಇವರು ಈ ಕಾನೂನು ವಾಪಸ್ ಪಡೆಯಬೇಕು. ಈ ಹೋರಾಟಗಳು ಅಂತ್ಯವಲ್ಲ ಇದು ಆರಂಭ ಎಂದು ತಿಳಿಸಿದರು. ಮಾಜಿ ಶಾಸಕ ಎನ್‌.ಎಚ್.ಕೊನರೆಡ್ಡಿ, ಮಾಜಿ ಸಚಿವ ಆಲ್ಕೋಡು ಹನುಮಂತಪ್ಪ, ಮುಸ್ಲಿಂ ಹಾಗೂ ಕ್ರೈಸ್ತ ಮುಖಂಡರು ಮೌಲ್ವಿಗಳು ಮಾತನಾಡಿದರು. ಪ್ರಗತಿಪರ ಚಿಂತಕ ಶಂಕರ್ ಹಲಗತ್ತಿ ಕ್ರಾಂತಿಗೀತೆ ಹಾಡಿದರು..ನೂರಾರು ಸಂಖ್ಯೆಯಲ್ಲಿ ಮುಸ್ಲಿಂ ಬಾಂದವರು ಭಾಗವಹಿಸಿ ಸಿಎಎ ಹಾಗೂ ಎನ್‌ಆರಸಿ ವಾಪಸ್ಸು ಪಡೆಯುವಂತೆ ಒತ್ತಾಯಿಸಿದರು...

ಬೈಟ್: ವಿ.ಎಸ್. ಉಗ್ರಪ್ಪ, ಕಾಂಗ್ರೆಸ್ ಮುಖಂಡConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.