ಹುಬ್ಬಳ್ಳಿ : ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ನಿರಂತರವಾಗಿ ಕೈ ಜೋಡಿಸಿದ ಪೊಲೀಸ್ ಇಲಾಖೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಸದುದ್ದೇಶದಿಂದ ಹುಬ್ಬಳ್ಳಿಯ ಯುವಕರ ಪಡೆಯೊಂದು ವಿನೂತನ ಕಾರ್ಯ ಮಾಡುವ ಮೂಲಕ ಸಾರ್ವಜನಿಕ ಪ್ರಶಂಸೆಗೆ ಪಾತ್ರವಾಗಿದೆ.
ನಗರದ ಸಂದೀಪ್ ಪೂಜಾರಿ ಗೆಳೆಯರ ಬಳಗ ಕೊರೊನಾ ವೈರಸ್ ವಿರುದ್ಧ ಸೆಣಸಾಟ ನಡೆಸುತ್ತಿರುವ ಪೊಲೀಸರ ಆರೋಗ್ಯದ ಹಿತದೃಷ್ಟಿಯಿಂದ ಸ್ವಯಂಪ್ರೇರಿತವಾಗಿ ಪೊಲೀಸ್ ಠಾಣೆಗೆ ಸ್ಯಾನಿಟೈಸರ್ ಮಾಡುತ್ತಿದ್ದಾರೆ. ಹುಬ್ಬಳ್ಳಿಯ ವಿದ್ಯಾನಗರದ ಪೊಲೀಸ್ ಠಾಣೆಗೆ ಹಾಗೂ ಪೊಲೀಸ್ ವಾಹನಕ್ಕೂ ಕೂಡ ಸ್ಯಾನಿಟೈಸ್ ಮಾಡಲಾಗಿದೆ.
ಇದೇ ಸಂದರ್ಭದಲ್ಲಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆನಂದ್ ಒಣಕುದರಿ ಅಭಿನಂದನೆ ಸಲ್ಲಿಸಿದರು. ಸಿಬ್ಬಂದಿ ಸುನೀಲ್ ಲಮಾಣಿ, ರಮೇಶ್ ಹಲ್ಲೆ ಹಾಗೂ ಸಂದೀಪ್ ಪೂಜಾರಿ, ಶ್ರೀಧರ್ ಕಂದಗಲ್, ಸಂತೋಷ ಬಾಗಲೆ, ಮುತ್ತುರಾಜ ಗಡ್ಡಿ, ಸುರೇಶ್ ಯಾತಗೇರಿ ಮುಂತಾದವರಿದ್ದರು.