ಧಾರವಾಡ : ನಟ ಪುನೀತ್ ರಾಜ್ಕುಮಾರ್ ನಿಧನಕ್ಕೆ ಆರ್ಎಸ್ಎಸ್ ಸಂತಾಪ ಸೂಚಿಸಿದೆ. ಆರ್ಎಸ್ಎಸ್ ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿ ಬೈಠಕ್ನಲ್ಲಿ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಸುದ್ದಿಗೋಷ್ಠಿ ಮೂಲಕ ನುಡಿನಮನ ಸಲ್ಲಿಸಿದ್ದಾರೆ.
ಇದು ದುಃಖದ ಸಂಗತಿಯಾಗಿದೆ. ಕನ್ನಡ ಚಿತ್ರರಂಗದ ಲೋಕಪ್ರಿಯ ನಟ ಪುನೀತ್ ಅಕಾಲಿಕ ನಿಧನ ದುಃಖ ತಂದಿದೆ. ಅವರು ವರನಟ ರಾಜಕುಮಾರ ಅವರ ಸುಪುತ್ರ, ಅವರ ನಿಧನಕ್ಕೆ ನಮ್ಮ ಬೈಠಕ್ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ್ದೇವೆ. ಆರ್ಎಸ್ಎಸ್ ಕಡೆಯಿಂದಲೂ ಶ್ರದ್ಧಾಂಜಲಿ ಸಲ್ಲಿಸುತ್ತೇವೆ. ಅವರ ಆತ್ಮಕ್ಕೆ ಸದ್ಗತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.
ನಾಗಲ್ಯಾಂಡ್ ಮತ್ತು ಮಿಜೋರಾಂದಲ್ಲಿ ಹಿಂದೂಗಳ ಸಂಖ್ಯೆ ಕಡಿಮೆ : ನಾಗಲ್ಯಾಂಡ್ ಮತ್ತು ಮಿಜೋರಾಂದಲ್ಲಿ ಹಿಂದೂಗಳ ಸಂಖ್ಯೆ ಕಡಿಮೆಯಿದೆ. ಹೀಗಾಗಿ, ಅಲ್ಲಿ ಶಾಖೆಗಳು ಕಡಿಮೆಯಿವೆ. ಮೇಘಾಲಯದಲ್ಲಿ ಸೇವಾ ಕಾರ್ಯಗಳು ಇವೆ. ಲಡಾಖ್‌ನಲ್ಲಿ ಸಂಘದ ಶಾಖೆ ಇದೆ. ಲಕ್ಷ ದ್ವೀಪದಲ್ಲಿ ಸಾಪ್ತಾಹಿಕ ಮಿಲನ್ ಮಾತ್ರ ಇದೆ. ಇಲ್ಲಿ ಜನರ ಸಂಖ್ಯೆ ಕಡಿಮೆ ಇದೆ. ಹೀಗಾಗಿ, ಆಗಿಲ್ಲ ಎಂದರು.
ಜನಸಂಖ್ಯೆ ನಿಯಂತ್ರಣ ಕಾಯಿದೆ ವಿಚಾರ : ಜನಸಂಖ್ಯೆ ನಿಯಂತ್ರಣ ಕಾಯಿದೆ ವಿಚಾರದ ಬಗ್ಗೆ ಮಾತನಾಡಿದ ಅವರು, ಪ್ರತಿ ದೇಶಕ್ಕೂ ತನ್ನದೆಯಾದ ಜನಸಂಖ್ಯೆ ಕಾಯಿದೆ ಇದೆ. ಜನಸಂಖ್ಯೆ ಕಾಯಿದೆ ಬಗ್ಗೆ ನಾವೂ ಈ ಹಿಂದೆಯೇ ಠರಾವ್ ಮಾಡಿದ್ದೇವೆ. ಸಂಘದ ಹಿಂದಿನ ಬೈಠಕ್‌ಗಳಲ್ಲಿಯೇ ಠರಾವ್ ಮಾಡಿದ್ದೇವೆ. ಐದಾರು ವರ್ಷಗಳ ಹಿಂದೆಯೇ ಠರಾವ್ ಮಾಡಿದ್ದೇವೆ, ಮೊದಲೇ ಹೇಳಿದ್ದೇವೆ ಎಂದರು.
ಅದನ್ನೇ ಇತ್ತೀಚೆಗೆ ಮೋಹನ ಭಾಗವತ್ ಪುನರ್‌ಮನನ ಮಾಡಿದ್ದಾರೆ. ಏಕರೂಪ ನಾಗರಿಕ ಸಂಹಿತೆ ವಿಚಾರ ಸರ್ಕಾರವೆ ಈ ಸಂಹಿತೆ ಬಗ್ಗೆ ಮಾತನಾಡಿದೆ. ಅವರು ಮಾಡುತ್ತಾರೋ ನೋಡೊಣ ಎಂದರು.
ದೀಪಾವಳಿಗೆ ಪಟಾಕಿ ಹೊಡೆಯಬಾರದೆಂಬ ವಿಚಾರ : ದೀಪಾವಳಿಗೆ ಪಟಾಕಿ ಹೊಡೆಯಬಾರದೆಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪರಿಸರ ಮಾಲಿನ್ಯ ಹೆಸರಿನಲ್ಲಿ ಪಟಾಕಿ ಬೇಡ ಅಂತಾರೆ. ಆದರೆ, ಇದು ದೀಪಾವಳಿಗೆ ಮಾತ್ರವೇ ಯಾಕೆ ವಿಚಾರ ಬರುತ್ತದೆ. ಅನೇಕ ವಿದೇಶಗಳಲ್ಲಿಯೂ ಪಟಾಕಿಗಳಿವೆ.
ಅಲ್ಲಿಯೂ ಸಂಭಮ್ರಗಳಿದ್ದಾಗ ಪಟಾಕಿ ಹೊಡಿತಾರೆ. ಆದರೆ, ಭಾರತದಲ್ಲಿ ದೀಪಾವಳಿ ಬಂದಾಗ ಮಾತ್ರ ಯಾಕೆ ಬ್ಯಾನ್ ಅಂತಾರೆ. ಪಟಾಕಿ ಮಾಡಿ, ಮಾರಾಟಕ್ಕೆ ಹಂಚಿಕೆಯಾದ ಮೇಲೆ ಬ್ಯಾನ್ ಅಂತಾರೆ. ಜನರ ಕೈಗೆ ಪಟಾಕಿ ಬಂದ ಬಳಿಕ ಬ್ಯಾನ್ ಅಂತಾರೆ. ಪರಿಸರ ಮಾಲಿನ್ಯ ವಿಷಯ ಮಹತ್ವವೇ ಇದೆ.
ಆದರೆ, ಪಟಾಕಿ ತಯಾರಕರ ಜೀವನದ ಬಗ್ಗೆಯೂ ಚಿಂತನೆ ಮಾಡಬೇಕಲ್ಲ. ಪಟಾಕಿ ಬ್ಯಾನ್ ಮಾಡಿದ್ರೆ ಆ ಕಾರ್ಮಿಕರಿಗೆ ಏನು ಮಾಡುತ್ತಾರೆ. ಅವರ ಪುನರ್‌ವಸತಿಗೆ ಏನು ದಾರಿಗಳಿವೆ. ಈ ಎಲ್ಲವೂಗಳ ಬಗ್ಗೆಯೂ ಚಿಂತನೆ ಮಾಡಬೇಕಲ್ಲ ಎಂದು ತಿಳಿಸಿದರು.
ಮತಾಂತರ ಕಾಯಿದೆಗೆ ವಿರೋಧ ವಿಚಾರ : ಮತಾಂತರ ಕಾಯಿದೆಗೆ ವಿರೋಧ ವಿಚಾರ ಅಲ್ಪಸಂಖ್ಯಾತರು ಇದಕ್ಕೆ ವಿರೋಧ ಮಾಡುತ್ತಿದ್ದಾರೆ. ಯಾಕೆ ವಿರೋಧ ಮಾಡ್ತಾರೆ ಅನ್ನೋದ್ರಲ್ಲೇ ಅದರ ಹಿನ್ನೆಲೆ ಇದೆ. ಈಗಾಗಲೇ 10 ರಾಜ್ಯಗಳು ಮತಾಂತರ ತಡೆ ಕಾಯಿದೆ ಮಾಡಿವೆ. ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರದ ಇದ್ದಾಗಲೇ ಕಾಯಿದೆ ಆಗಿದೆ. ಅಲ್ಲಿ ಕಾಂಗ್ರೆಸ್‌ನವರೇ ಕಾಯಿದೆ ಮಾಡಿದ್ದಾರೆ. ಮತಾಂತರ ಕಾಯಿದೆ ಬರಲಿ ಬಂದ ಮೇಲೆ ತಿದ್ದುಪಡಿ ಇದ್ದರೇ ಮಾಡಬಹುದು. ಆದರೆ, ಕಾಯಿದೆ ಬರುವ ಮುಂಚೆಯೇ ವಿರೋಧ ಸರಿಯಲ್ಲ, ಮತಾಂತರ ನಿಲ್ಲಬೇಕಿದೆ ಸಂಘದ ಧೋರಣೆಯೂ ಇದೇ ಆಗಿದೆ ಎಂದು ಸ್ಪಷ್ಟಪಡಿಸಿದರು.
ಪ್ರಧಾನಿ ಮೋದಿ ರೋಂನಲ್ಲಿ ಪೋಪ್ ಭೇಟಿ ವಿಚಾರ : ಪ್ರಧಾನಿ ಮೋದಿ ರೋಂನಲ್ಲಿ ಪೋಪ್ ಭೇಟಿ ವಿಚಾರಕ್ಕೆ ಮಾತನಾಡಿದ ಅವರು, ಒಂದು ದೇಶದ ಹೆಡ್ ಆಫ್ ಡಿಪಾರ್ಟ್‌ಮೆಂಟ್ ಮತ್ತೊಂದು ರಾಷ್ಟ್ರದ ಹೆಡ್ ಆಫ್ ಡಿಪಾರ್ಟ್‌ಮೆಂಟ್‌ಗೆ ಭೇಟಿ ಅಷ್ಟೇ ಸರ್ಕಾರದ ನಿರ್ಣಯ ಅದು. ಯಾರು ಯಾರನ್ನಾದರೂ ಭೇಟಿ ಮಾಡಬಹುದು.
ವ್ಯಾಟಿಕನ್ ಅನ್ನೋದು ಒಂದು ರಾಜ್ಯ ಜಗತ್ತಿನ ಒಂದು ನಾಗರಿಕ ವ್ಯವಸ್ಥೆಯಲ್ಲಿ ಬೇರೆಯವರನ್ನು ಭೇಟಿ ಮಾಡುವುದು ತಪ್ಪಲ್ಲ. ನಾವು ಎಲ್ಲ ಧರ್ಮದ ಜನರನ್ನ ಭೇಟಿ ಮಾಡುತ್ತೇವೆ. ನಮ್ಮ ದೇಶದ ಪ್ರಧಾನಿ ಜಗತ್ತಿನ ಪ್ರಮುಖ ವ್ಯಕ್ತಿಗಳನ್ನ ಭೇಟಿ ಮಾಡಿ ನಮ್ಮ ದೇಶದ ಗೌರವವನ್ನು ಅಲ್ಲಿ ಹೆಚ್ಚಿಸುವುದು ಸಂತೋಷ ಎಂದರು.