ಹುಬ್ಬಳ್ಳಿ : ಲಾಕ್‌ಡೌನ್ ಉಲ್ಲಂಘನೆ ಮಾಡುವವರಿಗೆ ಕಡಿವಾಣ ಹಾಕಲು ಹುಬ್ಬಳ್ಳಿ-ಧಾರವಾಡ ಪೊಲೀಸ್ ಇಲಾಖೆ ಹೊಸ ತಂತ್ರ ಮಾಡಿದೆ.
ಎಷ್ಟು ಹೇಳಿದರೂ ರಸ್ತೆಯಲ್ಲಿ ಓಡಾಡುವ ಜನರನ್ನು ತಡೆಯಲು ಅವಳಿ ನಗರ ಪೊಲೀಸರು ಹುಬ್ಬಳ್ಳಿಯ ವಿವಿಧ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿದ್ದಾರೆ.
ಅನಗತ್ಯವಾಗಿ ಜನರು ತಿರುಗಾಡುವುದನ್ನ ತಡೆಯಲು ಬ್ಯಾರಿಕೇಡ್ ಮೂಲಕ ನಾಕಾಬಂದಿ ಹಾಕಿ ಜನರ ಓಡಾಟಕ್ಕೆ ಬ್ರೇಕ್ ಹಾಕಲಾಗಿದೆ.
ನಗರದ 21ಕ್ಕೂ ಹೆಚ್ಚು ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ಸಂಪೂರ್ಣ ರಸ್ತೆ ಬಂದ್ ಮಾಡಲಾಗಿದೆ. ಬ್ಯಾರಿಕೇಡ್ ದಾಟಿ ಬೈಕ್ ಅಥವಾ ಕಾರಿನಲ್ಲಿ ಪ್ರಯಾಣ ಮಾಡುತ್ತಿರುವ ಸವಾರರ ವಾಹನ ಸೀಜ್ ಮಾಡುವ ಮೂಲಕ ಬಿಸಿ ಮುಟ್ಟಿಸಲಾಗುತ್ತಿದೆ.