ETV Bharat / state

ಅವಳಿನಗರಗಳಲ್ಲಿ ಹೆಚ್ಚಾಗುತ್ತಿದೆ ಕ್ರೈಂ ರೇಟ್​ - ಅವಳಿ ನಗರಗಳಲ್ಲಿ ಹೆಚ್ಚಾಗುತ್ತಿದೆ ಕ್ರೈಂ ರೇಟ್​

ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ದಿನೇದಿನೆ ಕಳ್ಳತನ ಪ್ರಕರಣ ದಾಖಲಾಗುತ್ತಿವೆ. ನಗರದ ಜನತೆಯ ನಿದ್ದೆ ಕೆಡಿಸಿವೆ. ಪೊಲೀಸ್​ ಇಲಾಖೆ ಈ ಕುರಿತು ಸರಿಯಾದ ಕ್ರಮಕೈಗೊಳ್ಳ ಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ..

Rising Crime Rate in Twin Cities
ಅವಳಿ ನಗರಗಳಲ್ಲಿ ಹೆಚ್ಚಾಗುತ್ತಿದೆ ಕ್ರೈಂ ರೇಟ್​
author img

By

Published : Mar 26, 2022, 5:27 PM IST

ಹುಬ್ಬಳ್ಳಿ : ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಎಗ್ಗಿಲ್ಲದೇ ನಡೆಯುತ್ತಿವೆ ಮನೆ ಕಳ್ಳತನ ಪ್ರಕರಣ. ಯಾವುದೇ ಕೆಲಸಕ್ಕೂ ಮನೆಯಿಂದ ಹೊರ ಹೋಗಲು ಹುಬ್ಬಳ್ಳಿ-ಧಾರವಾಡ ಅವಳಿನಗರದ ಜನರು ಭಯ ಪಡುವಂತಾಗಿದೆ. ಮನೆಗೆ ಬೀಗ್ ಹಾಕಿರುವುದನ್ನೇ ಟಾರ್ಗೆಟ್ ಮಾಡುವ ಖದೀಮರು ಅವಳಿನಗರದ ಜನರ ನಿದ್ದೆಗೆಡಿಸಿದ್ದಾರೆ.

ವೇಗವಾಗಿ ಬೆಳೆಯುತ್ತಿರುವ ಹುಬ್ಬಳ್ಳಿಯಲ್ಲಿ ಕ್ರೈಂ ಪ್ರಕರಣ ಅತಿವೇಗವಾಗಿಯೇ ಬೆಳೆಯುತ್ತಿವೆ. ಒಂದಿಲ್ಲೊಂದು ರೀತಿಯಲ್ಲಿ ಕ್ರೈಂ ಪ್ರಕರಣ ಹೆಚ್ಚುತ್ತಿದ್ದು, ಕಡಿವಾಣ ಮಾತ್ರ ಮರಿಚೀಕೆಯಾಗಿದೆ. ಬೀಗ ಹಾಕಿದ್ದ ಮನೆಗಳಲ್ಲಿ ಚಿನ್ನಾಭರಣ, ಮನೆ ಮುಂದೆ ಪಾರ್ಕ್​ ಮಾಡಿದ್ದ ಬೈಕ್​ ಕಳ್ಳತನಗಳು ಸಾಮಾನ್ಯವಾಗಿದೆ. ಅವಳಿನಗರದ ಬಹುತೇಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಸರ್ವೆ ಸಾಮಾನ್ಯವಾಗಿದ್ದು, ಜನರು ಪೊಲೀಸ್ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮನೆಯನ್ನು ವಾಚ್ ಮಾಡುವ ಖದೀಮರು ವ್ಯವಸ್ಥಿತ ರೀತಿಯಲ್ಲಿ ಸ್ಕೆಚ್ ಹಾಕಿ ಕಳ್ಳತನ ಮಾಡುತ್ತಾರೆ. ಅಲ್ಲದೇ ಸಾಕಷ್ಟು ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದರೂ ಪತ್ತೆಯಾಗಿರುವುದು ಮಾತ್ರ ಬೆರಳು ಏಣಿಕೆಯಷ್ಟೇ.. ಕಳ್ಳತನ ಪ್ರಕರಣಗಳಿಗೆ ಕಡಿವಾಣ ಹಾಕಲು ಬೀಟ್ ವ್ಯವಸ್ಥೆ ಹಾಗೂ ಸಿಸಿ ಟಿವಿ ವ್ಯವಸ್ಥೆ ಮಾಡಲಾಗಿದೆ. ಎಲ್ಲ ವ್ಯವಸ್ಥೆ ಇದ್ದರೂ ಕ್ರೈಂ ರೇಟ್ ಮಾತ್ರ ಕಡಿಮೆ ಆಗುತ್ತಿಲ್ಲ. ಹೀಗಿದ್ದರೂ ಕ್ರೈಂ ಪ್ರಕರಣಕ್ಕೆ ಬ್ರೇಕ್ ಹಾಕುತ್ತೇವೆ ಎನ್ನುತ್ತಾರೆ ಪೊಲೀಸ್ ಆಯುಕ್ತರು.

ಖದೀಮರ ಹಾವಳಿಯಿಂದ ಹುಬ್ಬಳ್ಳಿ-ಧಾರವಾಡ ಜನರು ನೆಮ್ಮದಿಯಾಗಿ ನಿದ್ರೆ ಮಾಡುವುದೇ ಕಷ್ಟವಾಗಿದೆ. ಯಾವ ಸಮಯದಲ್ಲಿ ಬೇಕಾದರೂ ಕಳ್ಳತನ ಆಗಬಹುದೆಂಬ ಭಯದಲ್ಲಿಯೇ ಜನರು ಜೀವನ ನಡೆಸಬೇಕಾಗಿದೆ. ಇನ್ನಾದರೂ ಪೊಲೀಸ್ ಇಲಾಖೆ ಮತ್ತಷ್ಟು ಸೂಕ್ತ ಕ್ರಮಗಳನ್ನು ಜರುಗಿಸಿ ಜನರು ನೆಮ್ಮದಿಯಾಗಿ ಉಸಿರು ಬಿಡುವಂತೆ ಮಾಡಬೇಕಿದೆ.

ಇದನ್ನೂ ಓದಿ: ಹೆಂಡ್ತಿ,ಅತ್ತೆ,ಮಾವನ ಮೇಲೆ ಮಾರಣಾಂತಿಕ ಹಲ್ಲೆ.. ಗಂಡನ ಮೃಗೀಯ ವರ್ತನೆ ಸಿಸಿಟಿವಿಯಲ್ಲಿ ಸೆರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.