ಹುಬ್ಬಳ್ಳಿ: ಗ್ರಾಮವೊಂದರ ಮಹಿಳೆಯೊಬ್ಬರ ಮೇಲೆ ವ್ಯಕ್ತಿಯೊಬ್ಬ ನಿರಂತರವಾಗಿ ಅತ್ಯಾಚಾರವೆಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಮಹಿಳೆಯ ಗಂಡ ತರಕಾರಿ ವ್ಯಾಪಾರ ಮಾಡುತ್ತ ಊರಿನ ಮೌಲಾಸಾಬ ಹುಲಗೂರ ಎಂಬುವವರ ವಾಹನವನ್ನು ಚಲಾಯಿಸುತ್ತಿದ್ದ. ಇತ್ತ ಸಂತ್ರಸ್ತೆ ಗಂಡ ಬೇರೆ ಊರಿಗೆ ಹೋಗುವುದನ್ನೇ ಕಾಯುತ್ತಿದ್ದ ಆರೋಪಿ ಮೌಲಾಸಾಬ ಹುಲಗೂರ, ಸಂತ್ರಸ್ತೆಗೆ ಜೀವ ಬೇದರಿಕೆ ಹಾಕಿ ನಿರಂತರ ಅತ್ಯಾಚಾರ ಮಾಡಿದ್ದಾನೆ ಎನ್ನಲಾಗ್ತಿದೆ.
ಸುಮಾರು ಎರಡು ತಿಂಗಳ ಕಾಲ ನಿರಂತರ ಅತ್ಯಾಚಾರ ಮಾಡಿರುವ ಮೌಲಾಸಾಬ, ಸಂತ್ರಸ್ತೆಗೆ ಜೀವ ಬೇದರಿಕೆ ಹಾಕಿದ್ದಾನೆ. ಒಂದು ವೇಳೆ ಈ ವಿಷಯವನ್ನು ಯಾರಿಗಾದರೂ ಹೇಳಿದ್ರೆ, ಗಂಡ ಹಾಗೂ ಮಕ್ಕಳನ್ನು ಕೊಲೆ ಮಾಡಿವುದಾಗಿ ಬೆದರಿಸಿದ್ದಾನೆ. ಇನ್ನು ಮಹಿಳೆಗೆ ತನ್ನಲ್ಲಿರುವ ಹಣ ಹಾಗೂ ಬಂಗಾರವನ್ನು ತೋರಿಸುವ ಮೂಲಕ ನನ್ನಲ್ಲಿ ಇಷ್ಟು ದುಡ್ಡಿದೆ ಏನು ಬೇಕಾದರೂ ಮಾಡುತ್ತೇನೆ ಎಂದು ಆವಾಜ್ ಹಾಕಿರುವ ಮೌಲಾಸಾಬ ಮಹಿಳೆಯ ನಗ್ನ ಚಿತ್ರಗಳನ್ನು ಸೆರೆಹಿಡಿದು ಬ್ಲಾಕ್ ಮೇಲ್ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಕುರಿತು ಧಾರವಾಡ ಮಹಿಳಾ ಪೊಲೀಸ್ ಠಾಣೆ ಹಾಗೂ ಕಲಘಟಗಿ ಪೊಲೀಸ್ ಠಾಣೆಗೆ ದೂರು ನೀಡಿ, ಎಫ್ಐಆರ್ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ಹಾವೇರಿ: ಗುಂಡಿನ ದಾಳಿ ಮಾಡಿ ಪರಾರಿಯಾಗಿದ್ದ ಆರೋಪಿ ತಿಂಗಳ ಬಳಿಕ ಬಂಧನ
ಎಫ್ಐಆರ್ ದಾಖಲಾದರೂ, ಇಲ್ಲಿಯ ತನಕ ಆರೋಪಿಯನ್ನು ಮಾತ್ರ ಬಂಧಿಸಿಲ್ಲ. ನಮ್ಮ ಕುಟುಂಬಕ್ಕೆ ನ್ಯಾಯ ಕೊಡಿಸಿ ನಮಗೆ ಜೀವ ಬೆದರಿಕೆ ಇದೆ ಎನ್ನುತ್ತಿದ್ದಾರೆ ಕುಟುಂಬದ ಸದಸ್ಯರು. ಮಹಿಳೆಯ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಿದ ಆರೋಪಿಯನ್ನು ಬಂಧಿಸಲು ಪೊಲೀಸ್ ಇಲಾಖೆ ಮುಂದಾಗಿಲ್ಲ ಎಂಬ ಆರೋಪ ವ್ಯಕ್ತವಾಗಿದೆ.