ಹುಬ್ಬಳ್ಳಿ : ಕುಡಿದ ನಶೆಯಲ್ಲಿ ರೆಡಿಯೋ ಜಾಕಿಯ ಸ್ನೇಹಿತರು ಗಲಾಟೆ ಮಾಡಿಕೊಂಡ ಘಟನೆ ನಗರದ ಗೋಕುಲ ರಸ್ತೆಯಲ್ಲಿರುವ ಐಸ್ ಕ್ಯೂಬ್ ಪಬ್ ನಲ್ಲಿ ನಡೆದಿದೆ.
ಪಬ್ ನಲ್ಲಿ RJ ( ರೇಡಿಯೋ ಜಾಕಿ ) ಹಾಗೂ ಸ್ನೇಹಿತರು ಗಲಾಟೆ ಮಾಡಿಕೊಂಡಿದ್ದಾರೆ. ಪ್ಲೇಟ್ ನಲ್ಲಿ ಸಾಸ್ ಹಾಕಿದ್ದಕ್ಕೆ ಗಲಾಟೆ ಶುರುವಾಗಿದೆ. ನಿನ್ನೆ ರಾತ್ರಿ ಕುಡಿದ ನಶೆಯಲ್ಲಿ ಬಾಟಲಿ ತೂರಾಡಿ ಗಲಾಟೆ ಮಾಡಿಕೊಂಡಿದ್ದಾರೆ.
ಆರ್ ಜೆ ಮೇಘಾ, ಪ್ರವೀಣ್, ಕೃತಿಕಾ, ಹರ್ಷ, ಶ್ರೀನಿವಾಸ್, ಶರಣ್ಯ ಹಾಗೂ ಶೈಲೇಶ್ ಎಂಬುವರ ಮಧ್ಯೆ ಮಾರಾಮಾರಿ ನಡೆದಿದೆ. ಕುಡಿದ ನಶೆಯಲ್ಲಿ ಬಿಯರ್ ಬಾಟಲಿ ತೂರಾಡಿ ಪಬ್ ನಲ್ಲಿ ಸ್ನೇಹಿತರು ಗಲಾಟೆ ಮಾಡಿದ್ದಾರೆ.
ಗಲಾಟೆಯಲ್ಲಿ ಪ್ರವೀಣ್ ಸೇರಿದಂತೆ ಮೇಘಾಗೆ ಗಾಯಗೊಂಡಿದ್ದಾರೆ. ಹುಬ್ಬಳ್ಳಿಯ ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿವೆ. ಸಿಸಿ ಟಿವಿ ಕ್ಯಾಮೆರಾ ದೃಶ್ಯ ಒದಗಿಸುವಂತೆ ಪಬ್ ಮಾಲೀಕರಿಗೆ ಪೊಲೀಸರು ಸೂಚನೆ ನೀಡಿದ್ದಾರೆ.