ಹುಬ್ಬಳ್ಳಿ: ರಾಜ್ಯ ಸರ್ಕಾರದ ಅನುದಾನದ ಕೊರತೆ ಹಿನ್ನೆಲೆ ಪೊಲೀಸರಿಗೆ ವೇತನ ವಿಳಂಬವಾಗುವ ಸಾಧ್ಯತೆ ಇದೆ ಎಂದು ಹು - ಧಾ ಪೊಲೀಸ್ ಕಮೀಷನರ್ ಆರ್. ದಿಲೀಪ್ ಎಲ್ಲ ಪೊಲೀಸ್ ಠಾಣೆಗಳಿಗೆ ಫ್ಯಾಕ್ಸ್ ಕಳುಹಿಸಿದ್ದಾರೆ.

ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತವರು ಜಿಲ್ಲೆಯಲ್ಲಿಯೇ ಈ ಸನ್ನಿವೇಶ ಉದ್ಭವವಾಗಿದೆ. ಫೆಬ್ರವರಿ ತಿಂಗಳ ಸಂಬಳ ಅನುದಾನದ ಕೊರತೆ ಹಿನ್ನೆಲೆಯಲ್ಲಿ ವಿಳಂಬವಾಗುತ್ತಿದೆ. ಇಂದು ನಡೆಯುವ ಬ್ರೀಪ್ ಮಿಟಿಂಗ್‌ನಲ್ಲಿ ಅಧಿಕಾರಿಗಳಿಗೆ, ಸಿಬ್ಬಂದಿಗೆ ಸಂಬಳ ವಿಳಂಬವಾಗುವ ಬಗ್ಗೆ ಗಮನಕ್ಕೆ ತರಲು ಡಿಸಿಪಿ, ಎಸಿಪಿ ಮತ್ತು ಪಿಐಗಳಿಗೆ ಪೊಲೀಸ್ ಆಯುಕ್ತರು ಫ್ಯಾಕ್ಸ್ ಮೂಲಕ ಸಂದೇಶ ರವಾನಿಸಿದ್ದಾರೆ.