ಹುಬ್ಬಳ್ಳಿ: ಪದೆಪದೇ ಮನೆಯಿಂದ ಹೊರ ಬರಬೇಡಿ ಎಂದ ಪೊಲೀಸರ ಜೊತೆಗೆ ಸೀಲ್ಡೌನ್ಗೆ ಒಳಗಾದ ಮನೆಯವರು ಅನುಚಿತವಾಗಿ ವರ್ತಿಸಿದ ಘಟನೆ ಹಳೇ ಅರವಿಂದ ನಗರದಲ್ಲಿ ನಡೆದಿದೆ.
ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಎದುರು ಮನೆಯೊಂದನ್ನು ಸೀಲ್ಡೌನ್ ಮಾಡಲಾಗಿದೆ. ಆದರೂ ಆ ಮನೆಯವರು ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದರು. ಅದನ್ನು ಪ್ರಶ್ನಿಸಿದ ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾರೆ.