ಧಾರವಾಡ: ರಾಜ್ಯದಲ್ಲಿ ಲಾಕ್‌ಡೌನ್ ಬಗ್ಗೆ ಸಾರ್ವಜನಿಕ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಆ ಹಿನ್ನೆಲೆ ಸಿಎಂ ಜೊತೆ ಸಮಾಲೋಚನೆ ಮಾಡುತ್ತೇವೆ. 12ರವರೆಗೆ ಜನತಾ ಕರ್ಫ್ಯೂ ಇದೆ ಅದಕ್ಕಿಂತ ಎರಡು ದಿನದ ಮುಂಚೆ ಲಾಕ್‌ಡೌನ್ ನಿರ್ಧಾರ ಮಾಡಬೇಕಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪೂರ್ಣ ಲಾಕ್‌ಡೌನ್ ಮಾಡಬೇಕೋ ಬೇಡ್ವೋ ಅನ್ನೋದನ್ನು ನಿರ್ಧಾರ ಮಾಡಬೇಕಾಗುತ್ತೆ ಸಂಘ - ಸಂಸ್ಥೆಗಳು, ವ್ಯಾಪಾರಿ, ಕೈಗಾರಿಕೆಗಳಿಂದಲೂ ಪೂರ್ಣ ಲಾಕ್‌ಡೌನ್ ಅಭಿಪ್ರಾಯ ಬಂದಿದೆ. ನಾನು ಹೇಳುವುದಕ್ಕೇ ಆಗುವುದಿಲ್ಲ ಸದ್ಯ ಸಾರ್ವಜನಿಕ ಅಭಿಪ್ರಾಯ ಕ್ರೋಢೀಕರಣ ಆಗುತ್ತಿದೆ ಎಂದರು.
ಆಕ್ಸಿಜನ್ ಹಂಚಿಕೆ ಬಗ್ಗೆ ಕೇಂದ್ರ ತಕರಾರು ವಿಚಾರ, ಆಕ್ಸಿಜನ್ ಹಂಚಿಕೆ ಬೇಡಿಕೆ ಈಗ ಹೆಚ್ಚಾಗಿದೆ. 1,200 ಮೆಟ್ರಿಕ್ ಟನ್‌ವರೆಗೆ ಹೆಚ್ಚಳಕ್ಕೆ ಒತ್ತಾಯ ಇದೆ ಕೇಂದ್ರ ಸಚಿವರ ಜೊತೆಯೂ ಮಾತನಾಡಲಾಗಿದೆ. ಇನ್ನೊಂದಿಷ್ಟು ಹೆಚ್ಚಳ ಆಗಬೇಕಿದೆ. ಸುಪ್ರೀಂಕೋರ್ಟ್ ಪ್ರಕ್ರಿಯೆಗಳ ಬಗ್ಗೆಯೂ ನಮ್ಮ ವಕೀಲರ ಜೊತೆ ಮಾತನಾಡಿದ್ದೇವೆ ಎಂದು ತಿಳಿಸಿದರು.