ಧಾರವಾಡ: ಕೊರೊನಾ ಭೀತಿ ಹಿನ್ನೆಲೆ ಸರ್ಕಾರ ಸಾರ್ವಜನಿಕ ಗಣೇಶೋತ್ಸವಕ್ಕೆ ನಿಷೇಧ ಹೇರಿದೆ. ಹಾಗಾಗಿ ಧಾರವಾಡದಲ್ಲಿ ಹಿಂದೂಪರ ಸಂಘಟನೆಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.
ಸರ್ಕಾರದ ವಿರುದ್ಧ ಹಠಕ್ಕೆ ಬಿದ್ದು ಹಿಂದೂಪರ ಸಂಘಟನೆಗಳು ಇಂದು ಕಂಬ ಪೂಜೆ ಮಾಡಿವೆ. ಧಾರವಾಡ ಮಣಿಕಂಠ ನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನ ಬಳಿ ಕಂಬ ಪೂಜೆ ಮಾಡಿವೆ. ಬಜರಂಗದಳ ಕಾರ್ಯಕರ್ತರ ನೇತೃತ್ವದಲ್ಲಿ ಪ್ರಮೋದ್ ಮುತಾಲಿಕ್ ಕಂಬದ ಪೂಜೆ ನೆರವೇರಿಸಿದ್ದಾರೆ. ಬಜರಂಗದಳ, ಶ್ರೀರಾಮ ಸೇನೆ, ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರಿಂದ ಗಣಪತಿ ಕಂಬ ಪೂಜೆ ನೆರವೇರಿದ್ದು, ಗಣಪತಿ ಪೆಂಡಾಲ್ ಕಂಬಕ್ಕೆ ಹಿಂದೂಪರ ಸಂಘಟನೆಗಳು ಪೂಜೆ ಮಾಡಿ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಹಠಕ್ಕೆ ಬಿದ್ದಿವೆ.
ಸರ್ಕಾರ ಈಗಾಗಲೇ ಸಾರ್ವಜನಿಕ ಗಣೇಶೋತ್ಸವ ನಿಷೇಧ ಮಾಡಿದೆ. ಆದ್ರೆ ಇದಕ್ಕೆ ಹಿಂದೂಪರ ಸಂಘಟನೆಗಳು ತೀವ್ರವಾದ ವಿರೋಧ ವ್ಯಕ್ತಪಡಿಸುತ್ತಿವೆ. ಹಬ್ಬಕ್ಕೆ ಇನ್ನೂ ನಾಲ್ಕೈದು ದಿನಗಳು ಬಾಕಿಯಿದ್ದು, ಸರ್ಕಾರ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.