ಹುಬ್ಬಳ್ಳಿ : ಕೋವಿಡ್-19 ತಡೆಗೆ ಲಾಕ್‌ಡೌನ್ ಜಾರಿಗೊಳಿಸಲಾಗಿತ್ತು. ಆದರೆ, ಈಗ ಎಲ್ಲಾ ಚಟುವಟಿಕೆಗಳಿಗೂ ಅವಕಾಶ ನೀಡಿ ಜಿಮ್ ಹಾಗೂ ಫಿಟ್ನೆಸ್ ಸೆಂಟರ್ ತೆರೆಯಲು ಅವಕಾಶ ನೀಡದಿರುವುದನ್ನು ಖಂಡಿಸಿ ಜಿಮ್ ಮಾಲೀಕರು ಹಾಗೂ ಟ್ರೈನರ್‌ಗಳು ಪ್ರತಿಭಟಿಸಿದರು.
ನಗರ ಲ್ಯಾಮಿಂಗ್ಟನ್ ರಸ್ತೆಯಿಂದ ತಹಶೀಲ್ದಾರ್ ಕಚೇರಿವರೆಗೆ ಪ್ರತಿಭಟನೆ ನಡೆಸಿದ ಅವರು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿದರು. ಮೂರು ತಿಂಗಳಿನಿಂದ ಜಿಮ್ ಮಾಲೀಕರು ಹಾಗೂ ಟ್ರೈನರ್‌ಗಳು ಪರದಾಡುತ್ತಿದ್ದಾರೆ. ಜಿಮ್ ಬಾಡಿಗೆ ಕಟ್ಟಲಾರದ ಸ್ಥಿತಿಗೆ ಬಂದಿದ್ದಾರೆ. ಸರ್ಕಾರ ಕೂಡಲೇ ಕೆಲವು ನಿಯಮಗಳನ್ನು ವಿಧಿಸುವ ಮೂಲಕವಾದರೂ ಜಿಮ್ ತೆರೆಯಲು ಅನುಮತಿ ನೀಡುವಂತೆ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.