ETV Bharat / state

ಲಿಂಗಾಯತ ಜಾತಿ ಪ್ರಮಾಣಪತ್ರದಲ್ಲಿನ ದೋಷ ಸರಿಪಡಿಸುವಂತೆ ಒತ್ತಾಯ - Lingayata dharma maha saba

ಲಿಂಗಾಯತ ಸಮುದಾಯಕ್ಕೆ ನೀಡುತ್ತಿರುವ ಜಾತಿ ಪ್ರಮಾಣಪತ್ರದಲ್ಲಿ ವೀರಶೈವ ಲಿಂಗಾಯತ ಎಂದು ಬರುತ್ತಿದ್ದು, ಕೂಡಲೇ ಇದನ್ನು ಸರಿಪಡಿಸುವಂತೆ ಆಗ್ರಹಿಸಿ ಲಿಂಗಾಯತ ಧರ್ಮ ಮಹಾಸಭಾದಿಂದ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆ
ಪ್ರತಿಭಟನೆ
author img

By

Published : Sep 18, 2020, 12:57 PM IST

ಹುಬ್ಬಳ್ಳಿ: ಲಿಂಗಾಯತ ಸಮುದಾಯಕ್ಕೆ ನೀಡುತ್ತಿರುವ ಜಾತಿ ಪ್ರಮಾಣಪತ್ರದಲ್ಲಿ ಲೋಪದೋಷಗಳು ಕಂಡು ಬರುತ್ತಿದ್ದು, ಕೂಡಲೇ ಸರಿಪಡಿಸುವಂತೆ ಆಗ್ರಹಿಸಿ ಲಿಂಗಾಯತ ಧರ್ಮ ಮಹಾಸಭಾದಿಂದ ನಗರದ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಲಾಯಿತು.

ದಾಖಲಾತಿಯಲ್ಲಿ ಲಿಂಗಾಯತ ಎಂದು ಬರೆಸಿದರೂ ಕೂಡ ಹೊಸ ಎಸ್​​ಎಟಿಎಸ್ ತಂತ್ರಾಂಶದಲ್ಲಿ ಲಿಂಗಾಯತ ಬದಲಿಗೆ ವೀರಶೈವ ಲಿಂಗಾಯತ ಎಂದು ಬರುತ್ತಿದೆ. ಕೂಡಲೇ ಈ ಗೊಂದಲವನ್ನು ಬಗೆಹರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ವೀರಶೈವ ಲಿಂಗಾಯತ ಎಂದು ಬರುತ್ತಿರುವುದರಿಂದ ನಮಗೆ ತೀವ್ರ ಮುಜುಗುರವಾಗುತ್ತಿದೆ. ವೀರಶೈವ ಲಿಂಗಾಯತ ಬದಲಿಗೆ ಕೇವಲ‌ ಲಿಂಗಾಯತ ಎನ್ನುವ ಜಾತಿ ಪ್ರಯಾಣಪತ್ರ ನೀಡುವ ಮೂಲಕ ನ್ಯಾಯ ಒದಗಿಸುವಂತೆ ಒತ್ತಾಯಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.