ETV Bharat / state

ಶ್ರೀಕಾಂತ್​ ಪೂಜಾರಿ ಬಂಧನ ಖಂಡಿಸಿ ಪ್ರತಿಭಟನೆ; ಹುಬ್ಬಳ್ಳಿಯಲ್ಲಿ ಆರ್​ ಅಶೋಕ್​​ ಸೇರಿ 43 ಜನರ ವಿರುದ್ಧ ಎಫ್ಐಆರ್ - ಆರ್ ಅಶೋಕ್​

ಹುಬ್ಬಳ್ಳಿ ಶಹರ್​ ಪೊಲೀಸ್​ ಠಾಣೆ ಎದುರು ಹಿಂದೂ ಕಾರ್ಯಕರ್ತ ಶ್ರೀಕಾಂತ್​ ಪೂಜಾರಿ ಬಂಧನ ಖಂಡಿಸಿ ಪ್ರತಿಭಟನೆ ನಡೆಸಿದ ವಿಪಕ್ಷ ನಾಯಕ ಆರ್ ಅಶೋಕ್​ ಸೇರಿ 43 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.

protest-against-arrest-of-srikanth-pujari-fir-filed-against-43-people-including-r-ashok
ಶ್ರೀಕಾಂತ್​ ಪೂಜಾರಿ ಬಂಧನ ಖಂಡಿಸಿ ಪ್ರತಿಭಟನೆ : ಆರ್​ ಅಶೋಕ್​​ ಸೇರಿ 43 ಜನರ ವಿರುದ್ಧ ಎಫ್ಐಆರ್
author img

By ETV Bharat Karnataka Team

Published : Jan 6, 2024, 10:39 PM IST

ಹುಬ್ಬಳ್ಳಿ : 1992ರ ಗಲಭೆ ಪ್ರಕರಣದ ಆರೋಪಿ ಶ್ರೀಕಾಂತ್​ ಪೂಜಾರಿ ಬಂಧನ ಖಂಡಿಸಿ ನಗರದ ಶಹರ್​ ಪೊಲೀಸ್‌ ಠಾಣೆ ಎದುರು ಜನವರಿ 3ರಂದು ಪ್ರತಿಭಟನೆ ನಡೆಸಿದ್ದ ವಿಧಾನಸಭೆ ವಿಪಕ್ಷ ನಾಯಕ ಆರ್‌ ಅಶೋಕ್​ ಸೇರಿ 43 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

ಪ್ರತಿಭಟನೆ ವೇಳೆ ಮುಖ್ಯಮಂತ್ರಿ ವಿರುದ್ಧ ಅವಾಚ್ಯ ಪದಗಳನ್ನು ಬಳಸಿ ಘೋಷಣೆ ಕೂಗಲಾಗಿದೆ ಮತ್ತು ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂಬ ಆರೋಪದ ಮೇಲೆ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಲ್ತಾಫ್‌ ಹಳ್ಳೂರು ಜನವರಿ 5ರಂದು ದೂರು ನೀಡಿದ್ದರು.

ಆರ್‌. ಅಶೋಕ್​ ಎ1 ಆರೋಪಿಯಾಗಿದ್ದರೆ, ಶಾಸಕರಾದ ಅರವಿಂದ ಬೆಲ್ಲದ್​, ಮಹೇಶ ಟೆಂಗಿನಕಾಯಿ ಮತ್ತು ಎಂ ಆರ್‌ ಪಾಟೀಲ ಕ್ರಮವಾಗಿ ಎ2, ಎ3 ಆರೋಪಿಯಾಗಿದ್ದಾರೆ. ವಿಧಾನಪರಿಷತ್‌ ಸದಸ್ಯ ಪ್ರದೀಪ್​ ಶೆಟ್ಟರ್‌ ಎ8 ಆರೋಪಿಯಾಗಿದ್ದಾರೆ. ಪಾಲಿಕೆ ಸದಸ್ಯರಾದ ಸಂತೋಷ್​ ಚವ್ಹಾಣ್‌, ಶಿವು ಮೆಣಸಿನಕಾಯಿ, ರೂಪಾ ಶೆಟ್ಟಿ, ಉಮೇಶಗೌಡ ಕೌಜಲಗಿ, ತಿಪ್ಪಣ್ಣ ಮಜ್ಜಗಿ ಸೇರಿದಂತೆ ಬಿಜೆಪಿಯ ಇತರ ಮುಖಂಡರ ಹಾಗೂ ಕಾರ್ಯಕರ್ತರ ವಿರುದ್ಧ ಎನ್‌ಸಿ(ಸಂಜ್ಞೆ ಅಪರಾಧ-ಗುರುತಿಸಲಾಗದ ಅಪರಾಧಗಳು) ಪ್ರಕರಣ ದಾಖಲಾಗಿವೆ.

ದೂರಿನ ವಿವರ : ಶ್ರೀಕಾಂತ್​ ಪೂಜಾರಿ ಬಂಧನ ವಿರೋಧಿಸಿ ಬಿಜೆಪಿ ಮುಖಂಡರು ಜ. 3ರಂದು ಶಹರ್​ ಪೊಲೀಸ್‌ ಠಾಣೆ ಎದುರು ಪ್ರತಿಭಟನೆ ನಡೆಸುವಾಗ, ಆರು ಕೋಟಿ ಜನರ ಪ್ರತಿನಿಧಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯರ ವಿರುದ್ಧ ಘೋಷಣೆ ಕೂಗಿದ್ದಾರೆ. ಮುಖ್ಯಮಂತ್ರಿಗೆ ಹಾಗೂ ಕಾಂಗ್ರೆಸ್‌ ಪಕ್ಷಕ್ಕೆ ಅವಾಚ್ಯ ಪದಗಳಿಂದ ನಿಂದಿಸಿ ಅವಮಾನ ಮಾಡಿದ್ದಾರೆ. ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿ ನಾಗರಿಕ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ವಿಜಯೇಂದ್ರ ನೀಡಿದ್ದ ಗಡುವಿಗೆ ಕಾಂಗ್ರೆಸ್​ ಸರ್ಕಾರ ಹೆದರಿ ಹಿಂದು ಕಾರ್ಯಕರ್ತನ ಬಿಡುಗಡೆ: ಪಿ ರಾಜೀವ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.