ಹುಬ್ಬಳ್ಳಿ: ನಗರದ ಹೋಟೆಲ್ಗಳಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ನಾಲ್ವರು ಆರೋಪಿಗಳನ್ನು ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ, ದಂಧೆಗೆ ಬಳಸಿಕೊಂಡಿದ್ದ ಮೂವರು ಯುವತಿಯರನ್ನು ರಕ್ಷಣೆ ಮಾಡಲಾಗಿದೆ.
ಹುಬ್ಬಳ್ಳಿ ತಾಲೂಕಿನ ವರೂರು ಗ್ರಾಮದಲ್ಲಿನ ಎಸ್.ಜಿ. ಟವರ್ಸ್ ಹಾಗೂ ಅಮೃತ ಕಂಫರ್ಟ್ ಹೋಟೆಲ್ ಮೇಲೆ ಗ್ರಾಮೀಣ ಪೋಲಿಸರು ದಾಳಿ ನಡೆಸಿದ್ದಾರೆ. ಲಾಡ್ಜ್ ಮಾಲೀಕ ವೆಂಕಟೇಶ ನಾಯ್ಕ, ಮ್ಯಾನೇಜರ್ ವೀರೇಶ ಮುರುಡೇಶ್ವರ, ಕೆ.ಎಮ್.ಪ್ರದೀಪ್ ಗೌಡ, ಮಂಜುನಾಥ್ ಗೌಡ ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಹೊರ ರಾಜ್ಯದಿಂದ ಅಮಾಯಕ ಯುವತಿಯರನ್ನು ಕರೆತಂದು ಈ ದಂಧೆ ನಡೆಸಲಾಗುತ್ತಿತ್ತು. ಆರೋಪಿಗಳು ಆನ್‌ಲೈನ್ ಮೂಲಕ ವ್ಯವಹಾರ ಮಾಡುತ್ತಿದ್ದರು.
ಇದನ್ನೂ ಓದಿ: ಉಕ್ರೇನ್ ಮೇಲೆ ಮುಂದುವರಿದ ರಷ್ಯಾ ಆಕ್ರಮಣ... ಇತರ ದೇಶಗಳ ಮೇಲೂ ಬೀರಿತು ಭಾರಿ ಪರಿಣಾಮ!
ದಾಳಿ ವೇಳೆ ಮೂವರು ಯುವತಿಯರನ್ನು ರಕ್ಷಿಸಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.