ETV Bharat / state

ಹುಬ್ಬಳ್ಳಿಯನ್ನು ಮಿನಿ ಪಾಕಿಸ್ತಾನ ಮಾಡಲು ಹೊರಟಿದ್ರು: ಚೈತ್ರ ಕುಂದಾಪುರ - ಈಟಿವಿ ಭಾರತ ಕನ್ನಡ

ಹುಬ್ಬಳ್ಳಿಯನ್ನು ಮಿನಿ ಪಾಕಿಸ್ತಾನ ಮಾಡಲು ಹೊರಟಿದ್ದರು. ಆದರೆ ಇಲ್ಲಿನ ಗಂಡು ಮೆಟ್ಟಿದ ನಾಡಿನ ಜನರು ಹಾಗಾಗದಂತೆ ತಡೆದರು ಎಂದು ಧಾರವಾಡದಲ್ಲಿ ರಾವನದಹನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಿಂದೂಪರ ಹೋರಾಟಗಾರ್ತಿ ಚೈತ್ರ ಕುಂದಾಪುರ ಹೇಳಿದ್ದಾರೆ.

pro-hindu-activist-chaithra-kundapura-speech-at-dharwad
ಹುಬ್ಬಳ್ಳಿಯನ್ನು ಮಿನಿ ಪಾಕಿಸ್ತಾನ ಮಾಡಲು ಹೊರಟಿದ್ರು : ಚೈತ್ರ ಕುಂದಾಪುರ
author img

By

Published : Oct 6, 2022, 4:50 PM IST

Updated : Oct 6, 2022, 5:30 PM IST

ಧಾರವಾಡ : ಹುಬ್ಬಳ್ಳಿಯಲ್ಲಿ ಮಿನಿ ಪಾಕಿಸ್ತಾನ ಮಾಡಲು ಹೊರಟಿದ್ದರು. ರಾಜ್ಯದಲ್ಲಿ ಕೆಲವು ಕಡೆ ಮಿನಿ ಪಾಕಿಸ್ತಾನ ಮಾಡುವುದನ್ನು ತಡೆಯಲು ಆಗಲಿಲ್ಲ. ಆದರೆ ಹುಬ್ಬಳ್ಳಿಯಲ್ಲಿನ ಮೈದಾನವನ್ನು ರಾಣಿ ಚನ್ನಮ್ಮ ಮೈದಾನ ಎಂದು ಪರಿವರ್ತನೆ ಮಾಡಬಹುದಾದರೆ, ಅದಕ್ಕೆ ಗಂಡು ಮೆಟ್ಟಿದ ನಾಡಿನ ಗುಂಡಿಗೆ ಬೇಕಾಗುತ್ತದೆ ಎಂದು ಹಿಂದೂಪರ ಹೋರಾಟಗಾರ್ತಿ ಚೈತ್ರಾ ಕುಂದಾಪುರ ಹೇಳಿದ್ದಾರೆ.

ದಸರಾ ಹಬ್ಬದ ಹಿನ್ನೆಲೆ ನಂದಗೋಕುಲ ಸೇವಾ ಸಂಸ್ಥೆಯಿಂದ ಆಯೋಜಸಿದ ರಾವಣ ದಹನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಮ ನಮ್ಮ ಮನಸ್ಸಿನಲ್ಲಿ ಪ್ರತಿಷ್ಠಾಪನೆ ಆದ ಮೇಲೆ ಹಿಂದುಗಳ ಸಂರಕ್ಷಣೆ ಆದಂತೆಯೇ. ಈ ಮಣ್ಣಿಗೆ ಆ ತಾಕತ್ತು ಇದೆ. ಇಡಿ ಜಗತ್ತು ರಕ್ತಪಾತದಲ್ಲಿ ಮುಳುಗಿದ್ದ ಸಮಯದಲ್ಲಿ ಶಾಂತಿ ಸಾರಿದ ನಾಡಿದು ಎಂದು ಹೇಳಿದರು.

ಹಿಂದೂಗಳ ಕಲ್ಲು ಇತರ ಪ್ರಾರ್ಥನಾ ಮಂದಿರದ ಮೇಲೆ ಬೀಳಲ್ಲ‌ : ಈ ಭೂಮಿಯಲ್ಲಿ ಎರಡು ರೀತಿಯ ಜನ ಇದ್ದಾರೆ. ಒಂದು ಜನಾಂಗದ ಜನ ಒಂದು ಧರ್ಮದ ದೇವಸ್ಥಾನದ ಮೇಲೆ ಕಲ್ಲು ಎಸೆಯುವ ಕೆಲಸ ‌ಮಾಡುತ್ತಾರೆ. ಹಿಂದೂಗಳು ಸುಖಾಸುಮ್ಮನೆ ಯಾರ ಮೇಲೂ ಕಲ್ಲು ಹೊಡೆಯಲ್ಲ. ರಾಮ‌ನವಮಿ ವೇಳೆ ದೇಶದ 11 ಕಡೆ ಕಲ್ಲು ಬೀಳುತ್ತೆ. ಹುಬ್ಬಳ್ಳಿ ಹನುಮನ ಗುಡಿಯ ಮೇಲೂ ಕಲ್ಲು ಬೀಳುತ್ತೆ. ನಾವು ನಿಮ್ಮಂತೆ ದೇವಸ್ಥಾನದ ಮೇಲೆ ಕಲ್ಲು ಎಸೆಯುವವರಲ್ಲ. ಹಿಂದೂಗಳ ಕಲ್ಲು ಇನ್ನೊಂದು ಪ್ರಾರ್ಥನಾ ಮಂದಿರದ ಮೇಲೆ ಬೀಳಲ್ಲ‌ ಎಂದು ಹೇಳಿದರು.

ಹುಬ್ಬಳ್ಳಿಯನ್ನು ಮಿನಿ ಪಾಕಿಸ್ತಾನ ಮಾಡಲು ಹೊರಟಿದ್ರು: ಚೈತ್ರ ಕುಂದಾಪುರ

ರಾವಣನನ್ನು ಭಯೋತ್ಪಾದಕನಂತೆ ಬಿಂಬಿಸಲಾಗಿದೆ : ಎರಡು ದಿನದ ಹಿಂದೆ ಆದಿಪುರುಷ ಎಂಬ ಸಿನೆಮಾದ ಟೀಸರ್​ ಬಿಡುಗಡೆಯಾಗಿದೆ. ಅದರಲ್ಲಿ ರಾವಣನನ್ನು ವಿಚಿತ್ರವಾಗಿ ಬಿಂಬಿಸಲಾಗಿದೆ. ರಾವಣ ಎಂದರೆ ಪಂಡಿತ ಎಂದು ನಂಬಿದ ನಾಡು, ರಾವಣ ಎಂದರೆ ಮಹಾನ್ ಶಿವಭಕ್ತ ಎಂದು ನಂಬಿದ‌ನಾಡು, ಆದರೆ ಆ ಸಿನೆಮಾದಲ್ಲಿ ರಾವಣನಿಗೆ ಕೂದಲೇ ಇರಲಿಲ್ಲ. ಆತನ ಹಣೆ ಮೇಲೆ ವಿಭೂತಿ ಇರಲಿಲ್ಲ.

ತೈಮೂರನ ತಂದೆ ಸೈಫ್​ ಅಲಿಗೆ ಅದರಲ್ಲಿ ರಾವಣನ ಪಾತ್ರಕ್ಕೆ ಬಿಂಬಿಸುವ ಮ‌ೂಲಕ ಭಯೋತ್ಪಾದಕ ತಾಲಿಬಾನಿಯಂತೆ ಬಿಂಬಿಸಿದ್ದಾರೆ. ಈ ಮೂಲಕ ಬಾಲಿವುಡ್ ನಮ್ಮ ಧರ್ಮವನ್ನು ತಿರುಚುವ‌ ಕೆಲಸ ಮಾಡುತ್ತಿದ್ದಾರೆ. ರಾಮಾಯಣ ಮಹಾಭಾರತ ಕಟ್ಟುಕಥೆಯಲ್ಲ. ಇದು ನಮ್ಮ ನಾಡಿನ ಇತಿಹಾಸ. ನಮ್ಮ ಮಕ್ಕಳು ಇತಿಹಾಸ ಎಂದು ಮಕ್ಕಳು ಗಜನಿ, ಘೋರಿ, ಅಕ್ಬರ್, ಟಿಪ್ಪು ನಂತಹ ಹೇಡಿಗಳ ಇತಿಹಾಸ ಓದಿದ್ದಾರೆ. ಇದು ನಮ್ಮ ಇತಿಹಾಸ ಅಲ್ಲ, ನಮ್ಮ ಇತಿಹಾಸ ಪ್ರಭು ಶ್ರೀ ರಾಮ‌ ಕಟ್ಟಿದ ರಾಮರಾಜ್ಯದ ಇತಿಹಾಸ ಎಂದು ಹೇಳಿದರು.

ಹುಬ್ಬಳ್ಳಿಯ ಪೊಲೀಸರಿಗೂ ರಕ್ಷಣೆಯ ಅವಶ್ಯಕತೆ ಇದೆ : ಹುಬ್ಬಳ್ಳಿ ಘಟನೆ ನಂತರ ಪೊಲೀಸರಿಗೆ ಕೂಡ ರಕ್ಷಣೆ ಬೇಕು ಎನ್ನುವಂತಾಗಿದೆ. ನಮ್ಮನ್ನು ರಕ್ಷಣೆ ಮಾಡುವ ಪೊಲೀಸರ ಠಾಣೆಗೆ ಬೆಂಕಿ ಹಚ್ಚುವ ಪ್ರಯತ್ನ ಆಯಿತು ಇದರಿಂದಾಗಿ ಪ್ರತಿ ಹಿಂದೂಗಳೂ ಪೊಲೀಸ್ ಆಗುವ ಅವಶ್ಯಕತೆ ಇದೆ. ಕೈಯಲ್ಲಿ ಲಾಠಿ ಇಲ್ಲದೇ ಇರಬಹುದು, ಕೈಯಲ್ಲಿ ಗನ್ನು ಕೊಡದೇ ಇರಬಹುದು, ಆದರೆ ಸಮಾಜ ರಕ್ಷಣೆಗೆ ಪೊಲೀಸ್ ಆಗಬೇಕಾಗಿದೆ ಎಂದು ಹೇಳಿದರು.

ತಲೆ ಮೇಲೆ ಒಂದು ಬಟ್ಟೆ ಹಾಕುವುದಕ್ಕೆ ಬಿಡಲಿಲ್ಲ ಎಂಬ ಕಾರಣಕ್ಕೆ ಹೆಣ್ಣು ಮಕ್ಕಳು ಹೋರಾಟಕ್ಕೆ ಇಳೀತಾರೆ. ಅವರು ಹಿಂದೂ ಹೆಣ್ಣು ಮಕ್ಕಳ ಹಣೆ ಮೇಲೆ ಇರುವ ಕುಂಕುಮವನ್ನು ಬೊಟ್ಟು ಮಾಡಿ ತೋರಿಸ್ತಾರೆ. ನಮ್ಮ ಬಳೆ ಹಾಗೂ ಕುಂಕುಮದ ಬಗ್ಗೆ ಪ್ರಶ್ನೆ ಮಾಡುವ ಕೆಲಸ ಆಗುತ್ತಿದೆ. ಆದ್ದರಿಂದ ಹಿಂದೂಗಳು ಜಾಗೃತರಾಗಬೇಕೆಂದು ಎಂದು ಹೇಳಿದರು.

ಇದನ್ನೂ ಓದಿ : ಮಂಡ್ಯ ಮಹಾ ಕುಂಭಮೇಳ: ಮಹದೇಶ್ವರನ ಬೆಟ್ಟದಿಂದ ಜ್ಯೋತಿ ಯಾತ್ರೆ ಆರಂಭ

Last Updated : Oct 6, 2022, 5:30 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.