ಹುಬ್ಬಳ್ಳಿ: ಆನ್‌ಲೈನ್ ಕ್ಲಾಸ್ ಪ್ರಾರಂಭಿಸಲು ಮತ್ತು ಅನುದಾನರಹಿತ ಶಾಲೆಯ ಶಿಕ್ಷಕರಿಗೆ ಸಂಬಳ ಕೊಡುವ ವಿಷಯಕ್ಕೆ ಸಂಬಂಧಿಸಿದಂತೆ ವಿವಿಧ ಶಾಲಾ ಆಡಳಿತ ಮಂಡಳಿ ಸದಸ್ಯರು ಸಚಿವ ಜಗದೀಶ್ ಶೆಟ್ಟರ್ ಅವರಿಗೆ ಮನವಿ ಸಲ್ಲಿಸಿದರು.
ಅನುದಾನ ರಹಿತ ಶಿಕ್ಷಕರಿಗೆ ಸಂಬಳವನ್ನು ಕೊಡುವಲ್ಲಿ ಆಡಳಿತ ಮಂಡಳಿಗೆ ಹೊರೆಯಾಗುತ್ತಿದೆ. ಅದಕ್ಕಾಗಿಯೇ ಆಡಳಿತ ಮಂಡಳಿಗೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರ ಸಹಕರಿಸಬೇಕು ಎಂದು ಆಡಳಿತ ಮಂಡಳಿಯವರು ಮನವಿ ಮಾಡಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಸಚಿವ ಜಗದೀಶ್ ಶೆಟ್ಟರ್, ಆಡಳಿತ ಮಂಡಳಿಯವರ ಮನವಿಯನ್ನು ಮುಖ್ಯಮಂತ್ರಿ ಅವರ ಗಮನಕ್ಕೆ ತಂದು ಪರಿಹಾರ ನೀಡುವ ಕುರಿತು ಚರ್ಚೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.