ಹುಬ್ಬಳ್ಳಿ: ಸಾಮಾನ್ಯವಾಗಿ ಮೊದಲ ಬಾರಿಗೆ ಗರ್ಭವತಿಯಾದ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ ಮಾಡುವುದನ್ನು ಕೇಳಿದ್ದೇವೆ, ನೋಡಿದ್ದೇವೆ. ಆದರೆ ಇಲ್ಲೊಂದು ಕುಟುಂಬದವರು ಮನೆಯಲ್ಲಿದ್ದ ತಮ್ಮ ಶ್ವಾನಕ್ಕೆ ಸೀಮಂತ ಕಾರ್ಯಕ್ರಮ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಓದಿ: ಕಿಚ್ಚ ಸುದೀಪ್ಗೆ ಸಿಕ್ತು ಮತ್ತೊಂದು ಬಿರುದು
ಕುಂದಗೋಳ ತಾಲೂಕಿನ ಸಂಶಿ ಗ್ರಾಮದಲ್ಲಿ ಇಂತಹ ವಿಶೇಷ ಕಾರ್ಯಕ್ರಮ ನಡೆದಿದೆ. ಗ್ರಾಮದ ಸಾರಿಗೆ ನೌಕರ ರಮೇಶ ಪಡತೇರ ಎಂಬುವರು ತಮ್ಮ ಮನೆಗೆ ಕಳೆದ ವರ್ಷ ಶ್ವಾನವೊಂದನ್ನು ತಗೆದುಕೊಂಡು ಬಂದಿದ್ದರು. ಅದಕ್ಕೆ ಲೂಸಿ ಎಂದು ನಾಮಕರಣ ಮಾಡಿದ್ದರು. ನಂತರ ಅದು ಈಗ ಗರ್ಭ ಧರಿಸಿದ್ದು, ಹೀಗಾಗಿ ಮನೆಯಲ್ಲಿ ಗರ್ಭಿಣಿ ಮಹಿಳೆಯರಿಗೆ ಮಾಡುವಂತೆ ನಾಯಿಗೂ ಸೀಮಂತ ಮಾಡಲಾಯಿತು.
ಸಾರಿಗೆ ನೌಕರ ರಮೇಶ ಪಡತೇರ ಅವರ ಪುತ್ರ ಪೃಥ್ವಿರಾಜ ಪಡತೇರ ಮತ್ತು ಕುಟುಂಬದವರು ಅದ್ದೂರಿಯಾಗಿ ಶ್ವಾನಕ್ಕೆ ಸೀಮಂತ ಕಾರ್ಯಕ್ರಮ ಮಾಡಿದರು. ಬಳೆ ಹಾಕಿ, ಸೀರೆ ಉಡಿಸಿ, ಹೂವಿನ ಮಾಲೆ ಹಾಕಿ, ಮೊದಲ ಬಾರಿಗೆ ಗರ್ಭವತಿಯಾದ ಶ್ವಾನಕ್ಕೆ ಸೀಮಂತ ಕಾರ್ಯಕ್ರಮ ಮಾಡಿ ಬಡಾವಣೆಯ ಜನ ಮತ್ತು ಪಡತೇರ ಕುಟುಂಬದವರು ಖುಷಿಪಟ್ಟರು.