ETV Bharat / state

ಧಾರವಾಡ ರೈಲು ನಿಲ್ದಾಣಕ್ಕೆ ಪ್ರಹ್ಲಾದ್ ಜೋಶಿ ಭೇಟಿ, ಸಿದ್ಧತಾ ಕಾರ್ಯ ಪರಿಶೀಲನೆ

ನೂತನ ಕಟ್ಟಡ ಉದ್ಘಾಟನೆ ಹಿನ್ನೆಲೆ ಧಾರವಾಡ ರೈಲು ನಿಲ್ದಾಣಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭೇಟಿ ನೀಡಿ ಪರಿಶೀಲಿಸಿದರು.

author img

By

Published : Oct 10, 2022, 10:51 AM IST

dharwad railway station
ಧಾರವಾಡ ರೈಲು ನಿಲ್ದಾಣಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಧಾರವಾಡ: ರೈಲು ನಿಲ್ದಾಣದ ನೂತನ ಕಟ್ಟದ ಉದ್ಘಾಟನೆ ಹಿನ್ನೆಲೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನಿನ್ನೆ ಭೇಟಿ ನೀಡಿ, ಸಿದ್ಧತಾ ಕಾರ್ಯಗಳ ಕುರಿತು ಪರಿಶೀಲಿಸಿದರು.

ಬಳಿಕ ಮಾತನಾಡಿದ ಅವರು, ಧಾರವಾಡ ರೈಲು ನಿಲ್ದಾಣ ಹಾಗೂ ಸಣ್ಣ ರೈಲು ನಿಲ್ದಾಣಗಳ ಅಭಿವೃದ್ಧಿಯಾಗಬೇಕು ಎಂಬ ಕನಸು ಇತ್ತು. ಬಹಳ‌ ಜಗಳ ಮಾಡಿ ಆಗಿನ ಸರ್ಕಾರದ ಜೊತೆ ನಾವು ಹುಬ್ಬಳ್ಳಿಯ ರೈಲು ನಿಲ್ದಾಣ ಮಂಜೂರು ಮಾಡಿಸಿದ್ದು,‌ ಧಾರವಾಡದಲ್ಲಿ ಸ್ಥಳೀಯ ಕಲಾವಿದರ ಜೊತೆ ಸೇರಿ ಉತ್ತಮ ರೈಲು‌‌ ನಿಲ್ದಾಣ ಮಾಡಿದ್ದೇವೆ. ಇದಕ್ಕೆ ಮೋದಿ ಅವರ ಆಶೀರ್ವಾದ ಇದೆ ಎಂದರು.

ಇದನ್ನೂ ಓದಿ: 395.73 ಕೋಟಿ ರೂ. ವೆಚ್ಚದಲ್ಲಿ ಮೈಸೂರು ರೈಲ್ವೆ ನಿಲ್ದಾಣ ವಿಸ್ತರಣೆ: ಪ್ರತಾಪ್ ಸಿಂಹ

ಈ ಹಿಂದೆ ಸುರೇಶ್​ ಅಂಗಡಿ ಅವರು ರೈಲ್ವೆ ಸಚಿವರಾಗಿದ್ದಾಗ ಇಲ್ಲಿಗೆ ಬಂದು ಹೋಗುತ್ತಿದ್ದರು. ಇದೀಗ ಬಹಳ ವರ್ಷಗಳ ನಂತರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಧಾರವಾಡಕ್ಕೆ ಬರುತ್ತಿದ್ದಾರೆ. ರೈಲು ನಿಲ್ದಾಣ ಉದ್ಘಾಟನೆ ಮಾಡಲಿದ್ದಾರೆ‌. ರಾಜ್ಯದ ಪರವಾಗಿ ಅನೇಕ ಬೇಡಿಕೆಗಳನ್ನು ಸಚಿವರಿಗೆ ಈಗಾಗಲೇ ಮನವರಿಕೆ ಮಾಡಿದ್ದೇನೆ. ಬೇಡಿಕೆ ಪಟ್ಟಿಯಲ್ಲಿರುವ ಅಗತ್ಯ ಯೋಜನೆಗಳ ಬಗ್ಗೆ ಘೋಷಣೆ ಮಾಡಲಿದ್ದಾರೆ ಎಂದರು.

ಇದನ್ನೂ ಓದಿ: ಬೆಂಗಳೂರಲ್ಲಿ ದೇಶದ ಮೊದಲ ಎಸಿ ರೈಲು ನಿಲ್ದಾಣ ಆರಂಭ: ಹೇಗಿದೆ ಗೊತ್ತಾ?

ದೆಹಲಿಗೆ ಹುಬ್ಬಳ್ಳಿಯಿಂದ ವಾರಕ್ಕೆ ಒಂದು ರೈಲು ಬಿಡಲಾಗುತ್ತದೆ. ಅಗತ್ಯಕ್ಕೆ‌ ತಕ್ಕಂತೆ ರೈಲು ಬಿಡುತ್ತೇವೆ. ಧಾರವಾಡ ರೈಲು‌ ನಿಲ್ದಾಣ ಚೆನ್ನಾಗಿ ಮೂಡಿಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.