ETV Bharat / state

ಇಡೀ ಜಗತ್ತು ಯೋಗ ಒಪ್ಪಿಕೊಂಡ ಮೇಲೆ ಕಾಂಗ್ರೆಸ್‌ನವರು ಯೋಗ ಒಪ್ಪಿಕೊಳ್ಳುತ್ತಿದ್ದಾರೆ: ಪ್ರಹ್ಲಾದ್​ ಜೋಶಿ - ಈಟಿವಿ ಭಾರತ ಕನ್ನಡ

ಕ್ರಾಂಗ್ರೆಸ್​ನವರಿಗೆ ಧ್ಯಾನ ಏನು ಅಂತಾನೇ ಗೊತ್ತಿಲ್ಲ. ಅವರಿಗೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯೇ ಧ್ಯಾನ ಇದ್ದಂತೆ ಎಂದು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಹೇಳಿದ್ದಾರೆ.

KN_DWD
ಪ್ರಹ್ಲಾದ್​ ಜೋಶಿ
author img

By

Published : Nov 5, 2022, 10:22 PM IST

ಧಾರವಾಡ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಧ್ಯಾನ ಮಾಡಿಸುವ ವಿಚಾರಕ್ಕೆ ಸಿದ್ದರಾಮಯ್ಯ ಮಾಡಿದ್ದ ಟ್ವೀಟ್​ಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್‌ನವರಿಗೆ ಧ್ಯಾನ ಏನು ಅಂತಾನೇ ಗೊತ್ತಿಲ್ಲ. ಅವರಿಗೆ ಕೇವಲ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯೇ ಧ್ಯಾನ ಇದ್ದಂತೆ ಎಂದು ಹೇಳಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್​ನವರಿಗೆ ಧ್ಯಾನದ ಬಗ್ಗೆ ಗೊತ್ತಿಲ್ಲ. ಶಾಲಾ ಮಕ್ಕಳಿಗೆ ಧ್ಯಾನ ಮಾಡಿಸುವ ಮೂಲಕ ಹಿಂದುತ್ವ ಹೇರುತ್ತಿದ್ದಾರೆ ಎಂಬುದು ಸುಳ್ಳು. ಶಾಲೆಗಳಲ್ಲಿ ಇಂತದ್ದೇ ದೇವರ ಧ್ಯಾನ ಮಾಡಿ ಎಂದು ಹೇಳಿಲ್ಲ. ಒಂದು ಸಮಾಜದ ತುಷ್ಠೀಕರಣ ಮಾಡುವುದಕ್ಕಾಗಿ ಕಾಂಗ್ರೆಸ್​ ಏನು ಬೇಕಾದ್ದು ಮಾಡಿದ್ದಾರೆ.

ತ್ರಿಬಲ್ ತಲಾಕ್ ವಿಷಯದಲ್ಲಿ ಸುಪ್ರೀಂ ಕೋರ್ಟ್‌ನ ಆದೇಶವನ್ನೂ ತಿರುವು ಮುರುವು ಮಾಡಿದ್ದಾರೆ. ಯೋಗ ಮಾಡಿದಾಗಲೂ ಕಾಂಗ್ರೆಸ್‌ನವರು ವಿರೋಧ ವ್ಯಕ್ಯಪಡಿಸಿದ್ದಾರೆ. ಆದರೆ, ಇಡೀ ಜಗತ್ತು ಯೋಗ ಒಪ್ಪಿಕೊಂಡ ಮೇಲೆ ಕಾಂಗ್ರೆಸ್‌ನವರು ಯೋಗ ಒಪ್ಪಿಕೊಳ್ಳುತ್ತಿದ್ದಾರೆ ಎಂದರು

ಪ್ರಹ್ಲಾದ್​ ಜೋಶಿ ಪ್ರತಿಕ್ರಿಯೆ

ಇನ್ನು ಭಾರತೀಯ ಪರಂಪರೆಯನ್ನು ಮತ್ತು ಭಗವದ್ಗೀತೆಯನ್ನು ವಿರೋಧ ಮಾಡುವುದು ಕಾಂಗ್ರೆಸ್‌ನ ಕೆಲಸ. ಅವರು ಯಾವ ದೇವರನ್ನು ಆರಾಧನೆ ಮಾಡುತ್ತಾರೋ ಆ ದೇವರು ಅವರಿಗೆ ಸದ್ಬುದ್ಧಿ ನೀಡಲಿ. ಕಾಂಗ್ರೆಸ್‌ನವರು ಹಣ, ಅಧಿಕಾರದ ಧ್ಯಾನ ಮಾಡುತ್ತಾರೆ ಮಾಡಲಿ. ಆದರೆ, ಶಾಲಾ ಮಕ್ಕಳಲ್ಲಿ ಏಕಾಗ್ರತೆ ಬರಲಿ ಎಂಬ ಕಾರಣಕ್ಕೆ ಧ್ಯಾನ ಮಾಡಿಸುವ ನಿಯಮ ತಂದಿರಬಹುದು. ಆ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇಲ್ಲ. ಕಾಂಗ್ರೆಸ್‌ನವರು ಬೇಜವಾಬ್ದಾರಿತನದ ಹೇಳಿಕೆ ನೀಡುವುದು ಸರಿಯಲ್ಲ ಎಂದರು.

ಇದನ್ನೂ ಓದಿ: ಇಷ್ಟು ದಿನ ಬೂಟ್​ ನೆಕ್ಕಿದ್ದೀರಿ ಎಂದು ಸ್ವಕ್ಷೇತ್ರ ಜನರ ವಿರುದ್ಧವೇ ಶಾಸಕಿಯ ವಿವಾದಿತ ಹೇಳಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.