ETV Bharat / state

13 ಬಜೆಟ್ ಮಂಡಿಸಿದ, ಒಮ್ಮೆ ಸಿಎಂ ಆದವರಿಗೆ ಒಂದು ಕ್ಷೇತ್ರ ಹುಡುಕುವ ಯೋಗ್ಯತೆ ಇಲ್ಲ: ಪ್ರಹ್ಲಾದ್ ಜೋಶಿ - ETV Bharath Karnataka

ಸಿಎಂ ಆದವರಿಗೆ ಒಂದು ಕ್ಷೇತ್ರ ಹುಡುಕಲು ಆಗುತ್ತಿಲ್ಲ - ಈ ಬಾರಿ ಸಿದ್ದರಾಮಯ್ಯ ಮನೆಗೆ ಹೋಗುವುದು ಗ್ಯಾರೆಂಟಿ - ಸಿದ್ದರಾಮಯ್ಯ ವಿರುದ್ಧ ಅಚ್ಚರಿ ಅಭ್ಯರ್ಥಿ ಇಳಿಯಲ್ಲ - ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

pralhad joshi and jagadish shettar
ಪ್ರಲ್ಹಾದ್ ಜೋಶಿ , ಜಗದೀಶ್​ ಶೆಟ್ಟರ್​
author img

By

Published : Jan 21, 2023, 4:57 PM IST

13 ಬಜೆಟ್ ಮಂಡಿಸಿದ, ಒಮ್ಮೆ ಸಿಎಂ ಆದವರಿಗೆ ಒಂದು ಕ್ಷೇತ್ರ ಹುಡುಕುವ ಯೋಗ್ಯತೆ ಇಲ್ಲ - ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ: 13 ಬಜೆಟ್ ಮಂಡಿಸಿದ, ಒಮ್ಮೆ ಸಿಎಂ ಆದವರಿಗೆ ಒಂದು ಕ್ಷೇತ್ರ ಹುಡುಕುವ ಯೋಗ್ಯತೆ ಇಲ್ಲ. ಸಿದ್ದರಾಮಯ್ಯರನ್ನು ಈ ಬಾರಿ 100 ಪರ್ಸೆಂಟ್ ಮನೆಗೆ ಕಳಿಸುತ್ತೇವೆ. ನೀವು ಬದಾಮಿಯಲ್ಲಿ‌ ಕೆಲಸ ಮಾಡಿಲ್ಲ. ಹಾಗಾಗಿ ಕೋಲಾರಕ್ಕೆ ಹೋಗುತ್ತಿದ್ದೀರಿ. ನಾವು ಅಚ್ಚರಿ ಅಭ್ಯರ್ಥಿ ಹಾಕಲ್ಲ, ಅಲ್ಲಿದ್ದವರನ್ನೇ ಅಭ್ಯರ್ಥಿ ಮಾಡುತ್ತೇವೆ. ಸಿದ್ದರಾಮಯ್ಯರನ್ನು ಈ ಬಾರಿ ಮನೆಗೆ ಕಳಿಸುತ್ತೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹರಿಹಾಯ್ದಿದ್ದಾರೆ.

ಗಾಳಿಪಟ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹುಬ್ಬಳ್ಳಿ, ಕಲಬುರಗಿ, ಯಾದಗಿರಿ ಕಾರ್ಯಕ್ರಮ ನೋಡಿ ಸಿದ್ದರಾಮಯ್ಯ ಗಾಬರಿ ಆಗಿದ್ದಾರೆ. ಸಿದ್ದರಾಮಯ್ಯ ‌ಮೊದಲು ಡಿ ಕೆ ಶಿವಕುಮಾರ್ ಜೊತೆ ಸೆಟಲ್‌ ಮಾಡಿಕೊಳ್ಳಲಿ. ಬದಾಮಿ ದೂರ ಇದೆ ಅನ್ನೋ ಕಾರಣ ಅಲ್ಲ, ನೀವು ಜನರೊಂದಿಗೆ ಸಂಪರ್ಕ ಇಲ್ಲ. ನನಗೂ ದೆಹಲಿ ದೂರ, ಆದರೂ ನಾನು‌ ಜನರೊಂದಿಗೆ ಸಂಪರ್ಕದಲ್ಲಿದ್ದೇನೆ. ಬದಾಮಿಯಲ್ಲಿ‌ ಸೋಲಿನ ಭಯದಿಂದ ಕೋಲಾರಕ್ಕೆ ಹೋಗಿದ್ದಾರೆ. ಅಲ್ಲೂ ಸಿದ್ದರಾಮಯ್ಯ ಸೋಲಲಿದ್ದಾರೆ ಎಂದು ಪ್ರಹ್ಲಾದ್ ಜೋಶಿ ಭವಿಷ್ಯ ನುಡಿದರು.

ದೇಶದ ಬಹುತೇಕ ರಾಜ್ಯದಲ್ಲಿ ಜನರು ಕಾಂಗ್ರೆಸ್ ಧ್ವನಿ ಅಡಿಗಿಸಿದ್ದು, ಈಗ ಅವರು ಪ್ರಜಾಧ್ವನಿ ಎಂದು ತಮ್ಮದೆ ಧ್ವನಿ ನಡೆಸುತ್ತಿದ್ದಾರೆ. ಕರ್ನಾಟಕ, ಉತ್ತರ ಪ್ರದೇಶ, ಗುಜರಾತ್​ ಸೇರಿ ದೇಶದಲ್ಲಿ ಒಂದೆರಡು ರಾಜ್ಯಗಳು ಬಿಟ್ಟರೆ ಎಲ್ಲ ಕಡೆ ಜನರು ಕಾಂಗ್ರೆಸ್ ಧ್ವನಿ ಅಡಿಗಿದೆ. ಬರುವ ವರ್ಷ ರಾಜಸ್ಥಾನ ಹಾಗೂ ಚತ್ತೀಸಗಡ್​ನಲ್ಲಿಯೂ ಕಾಂಗ್ರೆಸ್​ಗೆ ಸೋಲನುಭವಿಸಲಿದೆ ಎಂದರು.

ಹಣ ಪಡೆದೇ ವಿದ್ಯುತ್ ನೀಡದವರು ಉಚಿತ ಕೊಡ್ತರಾ?: 200 ಯುನಿಟ್ ವಿದ್ಯುತ್ ಉಚಿತ ನೀಡುತ್ತೇನೆ ಎನ್ನುತ್ತಿದ್ದಾರೆ. ತಮ್ಮ ಅಧಿಕಾರ ಅವಧಿಯಲ್ಲಿ ಹಣ ಪಡೆದು ವಿದ್ಯುತ್ ನೀಡಲು ಇವರಿಂದ ಆಗಿಲ್ಲ. ಪ್ರಧಾನಿ ಮೋದಿ ಬರುವರೆಗೆ ದೇಶ ವಿದ್ಯುತ್ ಕೊರತೆ ಅನುಭವಿಸುತ್ತಿತ್ತು. ಈಗ ಎಲ್ಲಿಯೂ ಸಹ ಕೊರತೆಯಾಗದಂತೆ ನೋಡಿಕೊಳ್ಳಲಾಗಿದೆ. ಕಾಂಗ್ರೆಸ್ ಅವರು ಅಧಿಕಾರದಲ್ಲಿರುವರೆಗೆ ಹಳ್ಳಿಗಳಲ್ಲಿ ವಿದ್ಯುತ್ ಇರಲಿಲ್ಲ. ಮತಕ್ಕಾಗಿ ಸುಳ್ಳು ಹೇಳಿ ಜೀವನ ಮಾಡುತ್ತಿದ್ದಾರೆ. ನಾ ನಾಯಕಿ ಎಂದು ರಾಜ್ಯಕ್ಕೆ ಬಂದ ಹೋದ ನಕಲಿ ಗಾಂಧಿ ಕುಡಿಗಳು ರಾಜಸ್ಥಾನದಲ್ಲಿ ಅವರ ಸಹೋದರ ಹೇಳಿದ್ದು ಯಾಕೆ ಮಾಡಿಲ್ಲ ಎನ್ನುವುದಕ್ಕೆ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.

ವಿನೂತನ ತಂತ್ರಗಾರಿಕೆ ಮೂಲಕ ಚುನಾವಣೆ ಎದುರಿಸುತ್ತೇವೆ: ರಾಜ್ಯದಲ್ಲಿ ಗುಜರಾತ್ ಮಾದರಿ ತಂತ್ರಗಾರಿಕೆ ಎಂಬುದಿಲ್ಲ, ಆಯಾ ರಾಜ್ಯಗಳಿಗೆ ತನ್ನದೇ ಮಾದರಿಯಲ್ಲಿ ಚುನಾವಣೆ ಎದುರಿಸಲಾಗಿದೆ. ಅದರಂತೆ ನಮ್ಮ ರಾಜ್ಯದಲ್ಲಿ ಹೊಸ ರೀತಿಯಲ್ಲಿ ಚುನಾವಣೆ ಎದುರಿಸಲಿದ್ದೇವೆ. ಪಕ್ಷದ ಹಿರಿಯ ನಾಯಕರನ್ನು ಕಡೆಗಣಿಸಲಾಗುತ್ತಿದೆ ಎಂಬುದು ಸುಳ್ಳು, ಯಾವುದೇ ಚುನಾವಣೆ ತಂತ್ರಗಾರಿಕೆ ಸಭೆಗಳು ನಡೆದಿಲ್ಲ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟನೆ ಮಾಡಲಾಗುತ್ತಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.

ವಿನೂತನ ತಂತ್ರಗಾರಿಕೆ ಮೂಲಕ ಚುನಾವಣೆ ಎದುರಿಸುತ್ತೇವೆ - ಜಗದೀಶ್ ಶೆಟ್ಟರ್​

ನಗರದ ಗೋಕುಲರಸ್ತೆಯ ಅಕ್ಷಯ ಪಾರ್ಕ್​ನ ಸಮುದಾಯ ಭವನದಲ್ಲಿ ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಪರೇಷನ್‌ ಹಸ್ತ ನಡೆಯುತ್ತಿದೆ ಎಂಬುದು ಸುಳ್ಳು, ಡಿ.ಕೆ.ಶಿವಕುಮಾರ್ ಅವರ ಕನಕಪುರ ಕ್ಷೇತ್ರದಿಂದಲೂ ಕಾಂಗ್ರೆಸ್​ನವರು ಬಿಜೆಪಿ ಸೇರ್ಪಡೆಯಾಗತ್ತಾರೆ ಎಂದರೆ ನಂಬಲು ಸಾಧ್ಯವೇ? ಇವೆಲ್ಲವೂ ಊಹಾಪೋಹಗಳು ಎಂದು ಹೇಳಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಧನೆಯನ್ನು ಜನರ ಮುಂದೆ ತೆಗೆದುಕೊಂಡು ಹೋಗಲು ವಿಜಯ ಸಂಕಲ್ಪ ಅಭಿಯಾನ ಆರಂಭಿಸಲಾಗಿದೆ. ರಾಜ್ಯದಲ್ಲಿ ವಿಜಯಪುರ ಜಿಲ್ಲೆಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿದ್ದಾರೆ. ಅದರಂತೆ ಆಯಾ ಜಿಲ್ಲೆಗಳಲ್ಲಿ ಪಕ್ಷದ ನಾಯಕರು ಚಾಲನೆ ಕೊಡಲಿದ್ದಾರೆ. ಈ ಮೂಲಕ ಕಾರ್ಯಕರ್ತರ ಸಂಘಟನೆಗೆ ಒತ್ತು ಕೊಡಲಾಗುತ್ತಿದೆ. ‌ಮನೆ ಮನೆಗೆ ಕರಪತ್ರ ಹಂಚುವುದು, ಗೋಡೆ ಬರಹ ಬರೆಯುವುದು ಅಭಿಯಾನದ ಭಾಗವಾಗಿದೆ.

ಇದನ್ನೂ ಓದಿ: ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ : ಪರಿಹಾರಕ್ಕೆ ಸಿದ್ದರಾಮಯ್ಯ ಆಗ್ರಹ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.