ಹುಬ್ಬಳ್ಳಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ಮಾಡುತ್ತಿರುವವರಿಗೆ ಕಾನೂನು ಏನು ಅನ್ನೋದು ಗೊತ್ತಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳು ಪೌರತ್ವ ಕಾಯ್ದೆ ತಿರುಚುವ ಕೆಲಸ ಮಾಡುತ್ತಿವೆ. ಪ್ರತಿಭಟನಾಕಾರರ ಭಾವನೆ ಕೆರಳಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಇದು ಯಾವುದೇ ನಾಗರಿಕನ ಪೌರತ್ವ ಕಸಿದುಕೊಳ್ಳುವ ಕಾಯ್ದೆಯಲ್ಲ. ಜಗತ್ತಿನ ನಾನಾ ದೇಶಗಳಿಂದ ಭಾರತಕ್ಕೆ ಬರ್ತಾರೆ ಅಂದರೆ ಕಾಂಗ್ರೆಸ್ಗೆ ಹೊಟ್ಟೆ ಉರಿ. ಇದಕ್ಕೆ ಕಾಂಗ್ರೆಸ್ಸಿನವರು ಉತ್ತರ ನೀಡಬೇಕು ಎಂದರು. ಕಾಂಗ್ರೆಸ್ಸಿನವರು ಹಿಂದೂ ವಿರೋಧಿ ಹಾಗೂ ಸ್ವಾರ್ಥಕ್ಕಾಗಿ ಪೌರತ್ವ ಹೋರಾಟ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.