ಹುಬ್ಬಳ್ಳಿ: ಜಗದೀಶ್ ಶೆಟ್ಟರ್ಗೆ ಟಿಕೆಟ್ ಸಿಗುತ್ತೆ ಅನ್ನೋ ವಿಶ್ವಾಸ ಇದೆ. ನಾನು ಹಾಗೂ ಶೆಟ್ಟರ್ ರಾಷ್ಟ್ರೀಯ ಅಧ್ಯಕ್ಷರೊಂದಿಗೆ ಮಾತನಾಡಿದ್ದೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ನಗರದಲ್ಲಿಂದು ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಶೆಟ್ಟರ್ಗೆ ಟಿಕೆಟ್ ಸಿಗತ್ತೆ ಅನ್ನೋ ನೀರಿಕ್ಷೆ ಇದೆ. ನಮ್ಮ ಅಭಿಪ್ರಾಯ ಹೇಳಿದ್ದೇವೆ. ಎಲ್ಲವೂ ಸುಲಲಿತವಾಗಿ ಪರಿಹಾರ ಆಗುತ್ತೆ ಎಂಬ ವಿಶ್ವಾಸವಿದೆ ಎಂದರು.
ಭಾರತೀಯ ಜನತಾ ಪಾರ್ಟಿಯಲ್ಲಿ 52 ಜನ ಹೊಸ ಮುಖಗಳಿಗೆ ಟಿಕೆಡ್ ಕೊಡಲಾಗಿದೆ. ಕಾಂಗ್ರೆಸ್ನಂತೆ ವಂಶಕ್ಕೆ ಟಿಕೆಟ್ ಕೊಡಲ್ಲ. ಅಪ್ಪಮಕ್ಕಳಿಗೆ ಟಿಕೆಟ್ ಕೊಡುವುದಿಲ್ಲ. ಲಕ್ಷಣ ಸವದಿ ಕಾಂಗ್ರೆಸ್ಗೆ ಹೋಗಬಾರದು ಅನ್ನೋದು ನಮ್ಮ ಅಪೇಕ್ಷೆ ಇದೆ. ಸವದಿ ಅವರಿಗೆ ನಮ್ಮ ಪಾರ್ಟಿ ಎಲ್ಲವನ್ನು ಕೊಟ್ಟಿದೆ. ಕಾಂಗ್ರೆಸ್ ಯುಸ್ ಆ್ಯಂಡ್ ಥ್ರೋ ಪಾರ್ಟಿ. ಸವದಿ ಅವರನ್ನು ನಮ್ಮ ಪಾರ್ಟಿ ಉಪಮುಖ್ಯಮಂತ್ರಿ ಮಾಡಿದ್ದೇವೆ. ಇಲ್ಲಿ ಅವರಿಗೆ ಉತ್ತಮ ಭವಿಷ್ಯ ಇತ್ತು. ದಯವಿಟ್ಟು ಅಲ್ಲಿಗೆ ಹೋಗುವುದು ಬೇಡ ಎಂದರು.
ಇದನ್ನೂ ಓದಿ: ರಾಜ್ಯದಲ್ಲಿ ಕಳೆದ 5 ವರ್ಷದಲ್ಲಿ ನಡೆದ ಚುನಾವಣೆ, ಉಪಚುನಾವಣೆ; ಗೆದ್ದವರ‍್ಯಾರು, ಸೋತವರ‍್ಯಾರು?
ಬಿಜೆಪಿಯಲ್ಲಿ ಟಿಕೆಟ್ ಬಹಳ ರಶ್ ಇತ್ತು. ಹಾಗಾಗಿ ಕೆಲ ಕಡೆ ಗೊಂದಲ ಆಗಿದೆ. ಯಾವ ಪಾರ್ಟಿ ಗೆಲ್ಲುತ್ತೆ, ಅಲ್ಲಿ ಆಕಾಂಕ್ಷಿಗಳು ಜಾಸ್ತಿ ಇರುತ್ತಾರೆ. 90 ಪರ್ಸೆಂಟ್ ಸಮಸ್ಯೆ ಬಗೆಹರಿಯುತ್ತೆ. ಇಂದು ನಾಳೆಯೊಳಗೆ ಈ ಸಮಸ್ಯೆ ಬಗೆಹರಿಯುತ್ತದೆ. ಭಾರತೀಯ ಜನತಾ ಪಾರ್ಟಿ ಎಮೋಷನಲ್ ಕಾರ್ಯಕರ್ತರು ನಮ್ಮ ಜೊತೆ ಇರ್ತಾರೆ ಎಂದರು.
ಇದೇ ವೇಳೆ, ನಾಡಿನ ಜನತೆಗೆ ಅಂಬೇಡ್ಕರ್ ಜಯಂತಿಯ ಶುಭಾಶಯ ತಿಳಿಸಿದ ಅವರು, ಅಂಬೇಡ್ಕರ್ ಬಲವಾದ ಆರ್ಥಿಕ ಬುನಾದಿ ಹಾಕಿದ್ದಾರೆ. ಅಂಬೇಡ್ಕರ್ ಅವರಿಗೆ ಸಿಗಬೇಕಾದ ಪ್ರಾಶಸ್ತ್ಯ ಕಾಂಗ್ರೆಸ್ ಕಾಲದಲ್ಲಿ ಸಿಕ್ಕಿರಲಿಲ್ಲ. ನಾವು ಅಂಬೇಡ್ಕರ್ ಹುಟ್ಟಿದ ಸ್ಥಳ , ಅಧ್ಯಯನ ಸ್ಥಳ ಅಭಿವೃದ್ಧಿ ಮಾಡಿದ್ದೇವೆ. ಅವರಿಗೆ ಗೌರವ ಕೊಡೋ ಕೆಲಸ ನಮ್ಮ ಸರ್ಕಾರ ಮಾಡಿದೆ. ದೇಶದಲ್ಲಿ ಉತ್ತಮ ಸರ್ಕಾರ ಇದೆ. ನರೇಂದ್ರ ಮೋದಿ ಪ್ರಧಾನಿ ಆಗಲು ಬಾಬಾ ಸಾಹೇಬ್ ಅಂಬೇಡ್ಕರ್ ಕಾರಣ ಎಂದರು.
ನನಗೆ ಟಿಕೆಟ್ ಪಕ್ಕಾ- ಜಗದೀಶ್ ಶೆಟ್ಟರ್: ಬಿಜೆಪಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ಸಿಗುತ್ತಾ ಇಲ್ಲವಾ ಎಂಬ ವಿಚಾರ ರಾಜಕೀಯ ರಂಗದಲ್ಲಿ ಕುತೂಹಲ ಮೂಡಿಸಿದೆ. ಇದುವರೆಗೆ ಬಿಜೆಪಿ ಪಕ್ಷವು ಅಳೆದು ತೂಗಿ ತನ್ನ ಪಕ್ಷದ ಚುನಾವಣಾ ಅಭ್ಯರ್ಥಿಗಳ ಒಟ್ಟು 2 ಪಟ್ಟಿಯನ್ನೇನೋ ಬಿಡುಗಡೆ ಮಾಡಿದೆ. ಇನ್ನೂ ಮೂರನೇ ಪಟ್ಟಿಗಾಗಿ ಬಾಕಿ ಇರುವ ಟಿಕೆಟ್ ಆಕಾಂಕ್ಷಿಗಳು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ.
ಇವರಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕೂಡ ಒಬ್ಬರು. ಈ ಕುರಿತು ಸ್ವತಃ ಶೆಟ್ಟರ್ ಅವರೇ ನಿನ್ನೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದು, ನನಗೆ ಎರಡು ದಿನಗಳಲ್ಲಿ ಟಿಕೆಟ್ ಸಿಗುತ್ತದೆ. ನಾನು ಬೇರೆಯವರಿಗೆ ಟಿಕೆಟ್ ಕೊಡಿ ಎಂದು ಕೇಳಲಿಲ್ಲ. ನನ್ನ ಮಗನ ಹೆಸರೂ ಕೂಡ ಹೇಳಲಿಲ್ಲ. ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ನಡ್ಡಾ ಅವರ ಜೊತೆ ಸುದೀರ್ಘ ಮೀಟಿಂಗ್ ಆಗಿದೆ. ಎಲ್ಲವನ್ನೂ ಓಪನ್ ಆಗಿಯೇ ಹೇಳಿದ್ದೇನೆ ಎಂದು ತಿಳಿಸಿದ್ದರು.
ಇದನ್ನೂ ಓದಿ: ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆಯಿಂದ ಪಕ್ಷಕ್ಕೆ ಶಕ್ತಿ: ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್