ಹುಬ್ಬಳ್ಳಿ: ಕೊರೊನಾ 3ನೇ ಅಲೆಯ ಓಮಿಕ್ರಾನ್ ಮಹಾಮಾರಿ ಹಿನ್ನೆಲೆ ಮಾಸ್ಕ್, ಸಾಮಾಜಿಕ ಅಂತರ ಸೇರಿದಂತೆ ಹಲವು ನಿಯಮಗಳನ್ನು ರಾಜ್ಯ ಸರ್ಕಾರ ಹೊರಡಿಸಿದೆ. ಅಲ್ಲದೇ, ಮಾಸ್ಕ್ ಧರಿಸದೇ ಇರುವವರಿಗೆ ಪೊಲೀಸರನ್ನು ರಸ್ತೆಗಿಳಿಸಿ ದಂಡ ವಸೂಲಿ ಮಾಡುವಂತೆ ಸೂಚಿಸಿದೆ ಎನ್ನಲಾಗ್ತಿದೆ.
ಅದರಂತೆ ಉಪ ನಗರದ ಠಾಣೆ ಪೊಲೀಸರು ಬೆಳಗ್ಗೆಯಿಂದಲೇ ತಮ್ಮ ಜೀವದ ಹಂಗು ತೊರೆದು ತಮ್ಮ ಕರ್ತವ್ಯದ ನಡುವೆಯೂ ಮತ್ತೆ ಜಾಗೃತಿ ಜೊತೆಗೆ ದಂಡ ವಸೂಲು ಮಾಡುತ್ತಿದ್ದಾರೆ. ಕೊರೊನಾ ತಡೆಗಟ್ಟಲು ಮಾಸ್ಕ್ ಧರಿಸದವರಿಗೆ, ಸಾಮಾಜಿಕ ಅಂತರ ಇಲ್ಲದವರಿಗೆ ಪಾಲಿಕೆ ದಂಡ ವಿಧಿಸುವ ಕಾರ್ಯಕ್ಕೆ ಮುಂದಾಗುವ ಬದಲಿಗೆ ಪೊಲೀಸರನ್ನೇ ಕಣಕ್ಕೆ ಇಳಿಸಿ ಸರ್ಕಾರ ಅವರಿಗೆ ಮತ್ತೊಂದು ಜವಾಬ್ದಾರಿ ವಹಿಸಿ ಈಗ ಪೊಲೀಸರಿಗೆ ಹೊರೆ ಮಾಡಿದ್ದಾರೆ.
ಮಹಾನಗರ ಪಾಲಿಕೆಯು ದಂಡ ವಸೂಲಿಗೆ ಮಾರ್ಷಲ್ಗಳನ್ನು ಕಣಕ್ಕೆ ಇಳಿಸದೇ ರಾಜಕೀಯ ವ್ಯಕ್ತಿಗಳಿಗೆ ರಕ್ಷಣೆ, ಅಪರಾಧ ತಡೆಗೆ, ಸಾರ್ವಜನಿಕ ರಕ್ಷಣೆ ಸೇರಿದಂತೆ ಸಾಕಷ್ಟು ಜವಾಬ್ದಾರಿಯನ್ನು ಪ್ರತಿನಿತ್ಯ ವಹಿಸುವ ಪೊಲೀಸರಿಗೆ ಮತ್ತಷ್ಟು ಜವಾಬ್ದಾರಿ ವಹಿಸಲಾಗಿದೆ. ಇದು ಪೊಲೀಸರಿಗೆ ಹೊರೆಯಾಗಿ ಪರಿಣಮಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಓದಿ: ಮಗುವಿನ ಪಿತೃತ್ವ ಪರೀಕ್ಷೆ: ಅತ್ಯಾಚಾರ ಆರೋಪಿಯ ಡಿಎನ್ಎ ಪರೀಕ್ಷೆ ಆದೇಶ ಎತ್ತಿಹಿಡಿದ ಹೈಕೋರ್ಟ್