ETV Bharat / state

ವಿಚಾರಣೆಗೆಂದು ಬಂದಿದ್ದ ಭೂಗತ ಪಾತಕಿ ಧಾರವಾಡದ ಲಾಡ್ಜ್​​ನಲ್ಲಿ ಪ್ರೇಯಸಿಯೊಂದಿಗೆ ಸರಸ - ಈಟಿವಿ ಭಾರತ ಕನ್ನಡ

ಲಾಡ್ಜ್​​ನಲ್ಲಿ ಪ್ರೇಯಸಿಯೊಂದಿಗೆ ಸರಸದಲ್ಲಿದ್ದಾಗ ಭೂಗತ ಪಾತಕಿ ಬಚ್ಚಾಖಾನ್ ಮೇಲೆ ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಪೊಲೀಸರು ದಾಳಿ ಮಾಡಿದ್ದಾರೆ.

police-raid-on-criminal-bachcha-khan-in-dharawad
ವಿಚಾರಣೆಗೆಂದು ಬಂದಿದ್ದ ಭೂಗತ ಪಾತಕಿ ಲಾಡ್ಜ್​​ನಲ್ಲಿ ಪ್ರೇಯಸಿಯೊಂದಿಗೆ ಸರಸ
author img

By

Published : Aug 20, 2022, 8:38 PM IST

ಧಾರವಾಡ: ಬಳ್ಳಾರಿಯಿಂದ ಧಾರವಾಡದ ಕೋರ್ಟ್​​ಗೆಂದು ಬಂದಿದ್ದ ಭೂಗತ ಪಾತಕಿ ಬಚ್ಚಾಖಾನ್ ಮೇಲೆ ಪೊಲೀಸ್​ ದಾಳಿ ಮಾಡಿದ್ದು, ಈ ವೇಳೆ ಆತ ತನ್ನ ಪ್ರೇಯಸಿಯೊಂದಿಗೆ ಸರಸದಲ್ಲಿ ತೊಡಗಿದ್ದ ಎಂಬ ಅಂಶ ಬಯಲಾಗಿದೆ. ಈ ಮೂಲಕ ವಿಚಾರಣೆಗೆ ಬಂದ ಆರೋಪಿಗೆ ಪೊಲೀಸರು ಆತಿಥ್ಯ ನೀಡಿದ್ದಾರೆ ಎಂಬ ಆರೋಪ ಸಹ ಕೇಳಿಬಂದಿದೆ.

ವಿಚಾರಣೆಗೆಂದು ಬಂದಿದ್ದ ಭೂಗತ ಪಾತಕಿ ಧಾರವಾಡದ ಲಾಡ್ಜ್​​ನಲ್ಲಿ ಪ್ರೇಯಸಿಯೊಂದಿಗೆ ಸರಸ

ಧಾರವಾಡದ ಕೋರ್ಟ್​​ಗೆ ಬಚ್ಚಾಖಾನ್​ ಬಳ್ಳಾರಿ ಪೊಲೀಸರೊಂದಿಗೆ ಬಂದಿದ್ದರು ಎನ್ನಲಾಗ್ತಿದೆ. ಆದರೆ, ರಾಯಾಪುರದ ಬಳಿಯಿರುವ ಖಾಸಗಿ ಲಾಡ್ಜ್​​ನಲ್ಲಿ ಮೊದಲೇ ಬಂದು ಆತನ ಪ್ರೇಯಸಿ ಕಾಯುತ್ತಿದ್ದರು. ಪ್ರೇಯಸಿಯೊಂದಿಗೆ ಸರಸಕ್ಕೆ ಪೊಲೀಸರು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಮಾಹಿತಿ ಆಧರಿಸಿ ಇಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಲಾಬೂರಾಮ್ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿ, ಬಚ್ಚಾಖಾನ್‌ನನ್ನು ವಶಕ್ಕೆ ಪಡೆದಿದ್ದಾರೆ. ಲಾಡ್ಜ್​​ನಿಂದ ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ.

ಇದನ್ನೂ ಓದಿ: ಕುಟುಂಬ ವಿರೋಧಿಸಿ ಪ್ರೀತಿ.. ಮಗಳ ಮೇಲೆ ಗುಂಡಿನ ಸುರಿಮಳೆಗೈದ ಪಾಪಿ ತಂದೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.