ETV Bharat / state

ಕಿಮ್ಸ್ ಕೋವಿಡ್ ವಾರ್ಡ್​ನಿಂದ ಪರಾರಿಯಾಗಿದ್ದ ಸೋಂಕಿತನನ್ನು ಬಂಧಿಸಲಾಗಿದೆ: ಹು-ಧಾ ಪೊಲೀಸ್ ಆಯುಕ್ತ - ಪೊಲೀಸ್ ಆಯುಕ್ತ ಆರ್.ದಿಲೀಪ್ ಲೆಟೆಸ್ಟ್​ ನ್ಯೂಸ್​

ಹುಬ್ಬಳ್ಳಿಯ ಕಿಮ್ಸ್ ಕೋವಿಡ್ ವಾರ್ಡ್​ನಿಂದ ಪರಾರಿಯಾಗಿದ್ದ ಕೊರೊನಾ ಸೋಂಕಿತನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಹು-ಧಾ ಪೊಲೀಸ್ ಆಯುಕ್ತ ಆರ್.ದಿಲೀಪ್ ಹೇಳಿದರು.

Police Commissioner Dilip
ಪೊಲೀಸ್ ಆಯುಕ್ತ ಆರ್.ದಿಲೀಪ್
author img

By

Published : Jul 4, 2020, 2:39 PM IST

Updated : Jul 4, 2020, 3:06 PM IST

ಹುಬ್ಬಳ್ಳಿ: ಕಿಮ್ಸ್ ಕೋವಿಡ್ ವಾರ್ಡ್​ನಿಂದ ಪರಾರಿಯಾಗಿದ್ದ ಕೊರೊನಾ ಸೋಂಕಿತನ್ನು ಈಗಾಗಲೇ ಬಂಧಿಸಲಾಗಿದ್ದು, ಕಿಮ್ಸ್​​ನಲ್ಲಿ ಇನ್ನಷ್ಟು ಬಂದೋಬಸ್ತ್ ಕೈಗೊಳ್ಳಲಾಗುವುದು ಎಂದು ಹು-ಧಾ ಪೊಲೀಸ್ ಆಯುಕ್ತ ಆರ್.ದಿಲೀಪ್ ಹೇಳಿದರು.

ಪೊಲೀಸ್ ಆಯುಕ್ತ ಆರ್.ದಿಲೀಪ್
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರು ಸಾರ್ವಜನಿಕರ ಮಧ್ಯೆ ಇರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಹರಡುತ್ತಿದೆ. ಈ ಬಗ್ಗೆ ನಾವು ಹೆಚ್ಚಿನ ಜಾಗೃತಿ ವಹಿಸಲು ಸಿಬ್ಬಂದಿಗೆ ಸೂಚನೆ ನೀಡಿ ಮುಂಜಾಗ್ರತಾ ಕ್ರಮವಾಗಿ ರಕ್ಷಾ ಕವಚಗಳನ್ನು ನೀಡಿದ್ದೇವೆ. ಹಿರಿಯ ಪೊಲೀಸ್​ ಸಿಬ್ಬಂದಿಗೆ ವರ್ಕ್ ಫ್ರಮ್​ ಹೋಮ್ ಮಾಡಿದ್ದೇವೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮಾತ್ರೆಗಳನ್ನು ವಿತರಿಸಿದ್ದೇವೆ ಎಂದರು.ನಾಳೆ ನಗರದಲ್ಲಿ ಕಟ್ಟುನಿಟ್ಟಿನ ಲಾಕ್​ಡೌನ್ ಜಾರಿ ಮಾಡಲಾಗುವುದು. ಈ ವೇಳೆ ಕಾನೂನು ಉಲ್ಲಂಘನೆ ಮಾಡಿದರೆ ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

Last Updated : Jul 4, 2020, 3:06 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.