ETV Bharat / state

ಗರಗ ಪೊಲೀಸರ ಬಲೆಗೆ ಬಿದ್ದ ಅತ್ಯಾಚಾರ ಆರೋಪಿ - rapist

ಬಾಲಕಿ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದ ಆರೋಪಿಯನ್ನು ಹೆಡೆಮುರಿ ಕಟ್ಟುವಲ್ಲಿ ಗರಗ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

police arrested the rapist
ಅತ್ಯಾಚಾರಿಯನ್ನು ಬಂಧಿಸಿದ ಗರಗ ಠಾಣೆ ಪೊಲೀಸರು
author img

By

Published : Aug 3, 2020, 6:07 PM IST

ಧಾರವಾಡ: ತಾಲೂಕಿನ 14 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದ ಆರೋಪಿಯನ್ನು ಗರಗ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಶಿಂಗನಹಳ್ಳಿ ಗ್ರಾಮದ ಬಸೀರ್ ಗಡದಾರಿ ಬಂಧಿತ ಆರೋಪಿ. ಕಳೆದ ಗುರುವಾರ ಹೊಲಕ್ಕೆ ಪೂಜೆ ಮಾಡಲು ಹೋದ ಸಂದರ್ಭದಲ್ಲಿ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ. ಇದರಿಂದ ಮನನೊಂದ ಬಾಲಕಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿದ್ದ ಗರಗ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದರು.

ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಅವರು ಆರೋಪಿ ಪತ್ತೆಗಾಗಿ, ಮೂರು ಪ್ರತ್ಯೇಕ ತಂಡಗಳನ್ನು ರಚನೆ ಮಾಡಿದ್ದರು. ನಿನ್ನೆ ರಾತ್ರಿ ಖಾನಾಪುರದ ಬಳಿ ಆರೋಪಿ ಬಸೀರ್​ನನ್ನು ಗರಗ ಠಾಣೆ ಪಿಎಸ್ಐ ನೇತೃತ್ವದ ತಂಡ ಬಂಧಿಸಿದೆೆ ಎಂದು ಡಿವೈಎಸ್​​ಪಿ ರವಿ ನಾಯಕ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.