ETV Bharat / state

ಪಿಹೆಚ್​ಡಿ ಪದವೀಧರನಿಂದ ಬದಲಾಯ್ತು ಗ್ರಾಮದ ಚಿತ್ರಣ... ಇಲ್ಲಿದೆ ವಿದ್ಯಾವಂತನ ಪರಿಶ್ರಮದ ಕಥೆ - PhD graduate

ಓರ್ವ ವಿದ್ಯಾವಂತ ಮನಸ್ಸು ಮಾಡಿದರೆ ತನ್ನ ಗ್ರಾಮವನ್ನು ಹೇಗೆಲ್ಲಾ ಬದಲಾವಣೆ ಮಾಡಬಹುದು ಎಂಬುದಕ್ಕೆ ಧಾರವಾಡ ಜಿಲ್ಲೆಯ ಇಂಗಳಗಿ ಗ್ರಾಮದ ಪ್ರಭುಗೌಡ ಮಾದರಿಯಾಗಿದ್ದು, ಇದೀಗ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ.

Ph.D. graduate
ಪಿ ಎಚ್ ಡಿ‌ ಪದವೀಧರ ಗ್ರಾಪಂ ಅಧ್ಯಕ್ಷ
author img

By

Published : Jul 2, 2020, 5:12 PM IST

Updated : Jul 2, 2020, 7:56 PM IST

ಹುಬ್ಬಳ್ಳಿ: ಪ್ರಸ್ತುತ ದಿನಗಳಲ್ಲಿ ಉನ್ನತ ವಿದ್ಯಾಭ್ಯಾಸ ಮಾಡಿದ ಅದೆಷ್ಟೋ ಯುವಕರು ತಮ್ಮ ಗ್ರಾಮದತ್ತ ಮುಖಮಾಡುವುದು ತೀರಾ ಕಡಿಮೆ. ಇಂದು ಸಾಕಷ್ಟು ಯುವಕರು ತಮ್ಮ ಪ್ರತಿಷ್ಠೆಗೋ ಅಥವಾ ಹೆಗ್ಗಳಿಕೆಗೋ ಎಂಬಂತೆ ತಮ್ಮೂರಿನಿಂದ ಬಹಳಷ್ಟು ದೂರವೇ ಉಳಿದು ಬಿಡುತ್ತಾರೆ. ಆದರೆ ಇಲ್ಲೊಬ್ಬ ವಿದ್ಯಾವಂತ ಮಾತ್ರ ಮನಸ್ಸು ಮಾಡಿದರೆ ಗ್ರಾಮದ ಚಿತ್ರಣವನ್ನು ಹೇಗೆ ಬದಲಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಹೌದು, ಓರ್ವ ವಿದ್ಯಾವಂತ ಗ್ರಾಮ ಪಂಚಾಯತ್ ಅ​ಧ್ಯಕ್ಷನಾಗುವ ಮೂಲಕ ಇಡೀ ಗ್ರಾಮವನ್ನೇ ಮಾದರಿ ಊರನ್ನಾಗಿಸಿ ಎಲ್ಲರಿಂದ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಅಲ್ಲದೇ ಡಾಕ್ಟರೇಟ್ ಪದವಿ ಪಡೆದ ರಾಜ್ಯದ ಏಕೈಕ ಗ್ರಾಮ ಪಂಚಾಯತ್​​ ಅಧ್ಯಕ್ಷ ಎಂಬ ಹೆಗ್ಗಳಿಕೆಗೂ ಇವರು ಪಾತ್ರರಾಗಿದ್ದಾರೆ.

ಧಾರವಾಡ ಜಿಲ್ಲೆಯ ಇಂಗಳಗಿ ಗ್ರಾಮದ ಪ್ರಭುಗೌಡ ಗ್ರಾಮ ಪಂಚಾಯತ್​​​ ಅಧ್ಯಕ್ಷರಾದ ಮೇಲೆ ಇಡೀ ಊರಿನ ಚಿತ್ರಣವೇ ಬದಲಾಗಿದೆ. ಕನ್ನಡ ಭಾಷಾಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಕನ್ನಡ ವಿಷಯದಲ್ಲೇ ಹಂಪಿ ವಿವಿಯಲ್ಲಿ ಪಿ ಹೆಚ್ ಡಿ ಸಹ ಮಾಡಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ.

ಉನ್ನತ ಪದವಿಯನ್ನ ಪಡೆದ ಇವರಿಗೆ ಊರಿನ ಸ್ಥಿತಿಯನ್ನ ಕಂಡು ಹೃದಯ ಕರಗದೆ ಹೋಗಲಿಲ್ಲ. ಗ್ರಾಮದ ಸಮಸ್ಯೆಯನ್ನು ನಿತ್ಯವೂ ಆಲಿಸುತ್ತಿದ್ದ ಪ್ರಭುಗೌಡರಿಗೆ ಇವುಗಳನ್ನು ಎಂ ಎಲ್ ಎ, ಎಂ ಪಿ ಗಳ ಬಳಿ ಹೇಳಿ ಹೇಳಿ ಸಾಕಾಗಿತ್ತು. ಹೀಗಾಗಿ ಇದಕ್ಕೇನಾದ್ರು ನಾವೇ ಪರಿಹಾರ ಹುಡುಕಬೇಕು ಅಂದುಕೊಂಡು ಊರಿನ ಜನರ ನಿರ್ಧಾರದ ಮೇಲೆ ಚುನಾವಣೆಗೆ ನಿಂತಿದ್ದರು. ಅಲ್ಲದೆ ಅವಿರೋಧವಾಗಿ ಅಧ್ಯಕ್ಷ ಸ್ಥಾನವನ್ನ ಸಹ ಅಲಂಕರಿಸಿ ಊರಿನ ಜನರ ವಿಶ್ವಾಸವನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗ್ರಾಪಂ ಅಧ್ಯಕ್ಷನಿಂದ ಬದಲಾಯ್ತು ಗ್ರಾಮದ ಚಿತ್ರಣ

ಕಾಂಕ್ರೀಟ್​ ಗ್ರಾಮ: ಗ್ರಾಮ ಪಂಚಾಯತ್​ಗೆ ಬರುವ ಲಕ್ಷಾಂತರ ಅನುದಾನವನ್ನ ಹೇಗೆ ಪಡೆಯಬೇಕು ಅನ್ನೋದನ್ನ ಅರಿತಿದ್ದ ಪ್ರಭುಗೌಡ, ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರಸ್ತೆ ಕಾಮಗಾರಿಗೆ ಡಾಂಬರ್​​ ಹಾಕದೆ ಇಡೀ ಗ್ರಾಮವನ್ನ ಕಾಂಕ್ರೀಟ್ ಗ್ರಾಮವನ್ನಾಗಿ ಮಾಡಿದ್ದಾರೆ. ಹಳೆಯ ಪಂಚಾಯತ್​​​ನ್ನು ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಶಾಲೆಯ ಮೇಲ್ಛಾವಣಿ ಸೇರಿದಂತೆ ಕಾಂಪೌಂಡ್ ಸಹ ನಿರ್ಮಿಸಿ ನೋಡುಗರ ಹುಬ್ಬೇರುವಂತೆ ಮಾಡಿದ್ದಾರೆ.

ಭಗೀರಥನಾದ ಗ್ರಾಮ ಪಂಚಾಯತ್​ ಅಧ್ಯಕ್ಷ: ಊರಲ್ಲಿ ವಿದ್ಯುತ್ ಕೊರತೆ ನೀಗಿಸಿರುವ ಇವರು, ಪ್ರತಿ ಮನೆಗೂ ಪೈಪ್​ಲೈನ್ ಮೂಲಕ 24x7 ನೀರಿನ ಸೌಲಭ್ಯವನ್ನು ಒದಗಿಸಿ ಕೊಟ್ಟು ಊರಿಗೆ ಭಗೀರಥರಾಗಿದ್ದಾರೆ. ಊರಿನ ಬಗ್ಗೆ ಕಾಳಜಿ ಇರುವ ಪ್ರಭುಗೌಡರ ಕಾರ್ಯಕ್ಕೆ ಜನರು ಸಹ ಸೈ ಅಂದಿದ್ದು, ಇಂತಹ ಅಧ್ಯಕ್ಷರು ಪ್ರತಿ ಗ್ರಾಮ ಪಂಚಾಯತ್​ನಲ್ಲಿದ್ದರೆ ಗ್ರಾಮ ಉದ್ಧಾರವಾಗುವುದರಲ್ಲಿ ಅನುಮಾನವೇ ಇಲ್ಲವೆಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

Last Updated : Jul 2, 2020, 7:56 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.