ಹುಬ್ಬಳ್ಳಿ: ರಾಷ್ಟ್ರಪತಿಗೆ ಹಮ್ಮಿಕೊಂಡಿದ್ದ ಪೌರ ಸನ್ಮಾನ ಕಾರ್ಯಕ್ರಮದಲ್ಲಿ ದುಂದುವೆಚ್ಚ ಮಾಡಲಾಗಿದೆ ಎಂದು ಆರೋಪಿಸಿ ನಗರದ ವಿವಿಧೆಡೆ 'ಪೇ ಮೇಯರ್' ಪೋಸ್ಟರ್‌ಗಳನ್ನು ಅಂಟಿಸಿದ್ದ ಕಾಂಗ್ರೆಸ್ ಮುಖಂಡರಿಗೆ ಮೇಯರ್ ಈರೇಶ ಅಂಚಟಗೇರಿ ಅವರು ಮಾನಹಾನಿ ನೋಟಿಸ್ ಕಳಿಸಿದ್ದಾರೆ.
ಹುಬ್ಬಳ್ಳಿಯ ರಜತ ಉಳ್ಳಾಗಡ್ಡಿಮಠ, ಧಾರವಾಡದ ದೀಪಕ ಚಿಂಚೋರೆ ಹಾಗೂ ಮಂಜುನಾಥ ನಡಟ್ಟಿ ಅವರಿಗೆ ಮಾನಹಾನಿ ನೋಟಿಸ್ ಕಳುಹಿಸಲಾಗಿದೆ. ಮಾನಹಾನಿ ಪರಿಹಾರವಾಗಿ ಪಾಲಿಕೆಗೆ ಮೂವರು ತಲಾ 1 ಕೋಟಿ ರೂ ಸಂದಾಯ ಮಾಡಬೇಕು ಎಂದು ವಕೀಲರ ಮೂಲಕ ಮೇಯರ್ ನೋಟಿಸ್ ಕಳಿಸಿದ್ದಾರೆ.
![ಪೇ ಮೇಯರ್ ಅಭಿಯಾನ](https://etvbharatimages.akamaized.net/etvbharat/prod-images/kn-hbl-04-pay-mayer-notice-av-7208089_04102022130834_0410f_1664869114_71.jpg)
ಏಳು ದಿನಗಳೊಳಗೆ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ, ನಿಮ್ಮ ವಿರುದ್ಧ ಕ್ರಿಮಿನಲ್ ಮತ್ತು ಸಿವಿಲ್ ಪ್ರಕರಣಗಳನ್ನು ದಾಖಲಿಸಲಾಗುವುದು ಎಂದು ಮೇಯರ್ ತಿಳಿಸಿದ್ದಾರೆ.
(ಓದಿ: ಪೇಸಿಎಂ ಹೆಸರಿನಲ್ಲಿ ಬೊಮ್ಮಾಯಿ ತೇಜೋವಧೆ ಸರಿಯಲ್ಲ: ಸಿಎಂ ಪರ ನಿಂತ ಮಠಾಧೀಶರ ಒಕ್ಕೂಟ)