ಹುಬ್ಬಳ್ಳಿ: ಜಿಲ್ಲೆಯಲ್ಲಿ ಖಾಸಗಿ ಮ್ಯಾಕ್ಸಿಕ್ಯಾಬ್, ಕ್ರೂಸರ್ಮ ತ್ತಿತರ ವಾಹನಗಳ ಮೂಲಕ ತೆರಳುವ ಪ್ರಯಾಣಿಕರ ನಿರ್ಬಂಧಿಸಲಾಗುತ್ತಿದೆ.
ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಲಾಕ್ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ, ಈ ಕ್ರಮ ಕೈಗೊಳ್ಳಲಾಗಿದೆ. ಪೂರ್ವ ವಿಭಾಗದ ಕಚೇರಿಯ ವಾಹನ ನಿರೀಕ್ಷಕರು ಹುಬ್ಬಳ್ಳಿಯ ಕಿತ್ತೂರು ಚನ್ನಮ್ಮ ವೃತ್ತ, ಗಬ್ಬೂರ ಕ್ರಾಸ್ ಮತ್ತಿತರ ಸ್ಥಳಗಳಲ್ಲಿ ಈ ಕಾರ್ಯ ಕೈಗೊಂಡು ವಾಹನ ಸವಾರರಿಗೆ ತಿಳಿವಳಿಕೆ ನೀಡುತ್ತಿದ್ದಾರೆ. ಇನ್ನೂ ಕೆಲವರಿಗೆ ದಂಡ ಸಹ ಹಾಕಿದ್ದಾರೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಅಪ್ಪಯ್ಯ ನಾಲತ್ವಾಡಮಠ ತಿಳಿಸಿದ್ದಾರೆ.