ETV Bharat / state

ಧಾರವಾಡದಲ್ಲಿ ಈವರೆಗೆ ಹೊರ ರಾಜ್ಯಗಳಿಂದ 768 ಜನರ ಆಗಮನ: 3,080 ಜನರ ನಿರ್ಗಮನ - ಧಾರವಾಡ ಜಿಲ್ಲೆಗೆ ಹೊರ ರಾಜ್ಯಗಳಿಂದ ಈವರೆಗೆ 768 ಜನರ ಆಗಮನ

ಮೇ. 7ರಿಂದ ಮೇ. 14ರವರೆಗೆ ಆಂಧ್ರ ಪ್ರದೇಶ- 42, ಗೋವಾ-194, ಗುಜರಾತ್-66, ಕೇರಳ-2, ಮಹಾರಾಷ್ಟ್ರ-340, ರಾಜಸ್ಥಾನ-22, ತಮಿಳುನಾಡು-51, ತೆಲಂಗಾಣ-41, ಮದ್ಯಪ್ರದೇಶ-02, ಉತ್ತರ ಪ್ರದೇಶ-08 ಜನ ಸೇರಿ ಒಟ್ಟು 768 ಜನರು ಧಾರವಾಡ ಜಿಲ್ಲೆಗೆ ಆಗಮಿಸಿದ್ದಾರೆ.

outside states 768 people  arrived
ಧಾರವಾಡ ಜಿಲ್ಲೆಗೆ ಹೊರ ರಾಜ್ಯಗಳಿಂದ ಈವರೆಗೆ 768 ಜನರ ಆಗಮನ
author img

By

Published : May 14, 2020, 10:13 PM IST

ಧಾರವಾಡ: ಲಾಕ್‍ಡೌನ್ ಅವಧಿಯಲ್ಲಿ ವಿಶೇಷ ಪರವಾನಗಿ ಪಡೆದು ಜಿಲ್ಲೆಗೆ ಈವರೆಗೆ ಹೊರ ರಾಜ್ಯಗಳಿಂದ 768 ಜನರು ಆಗಮಿಸಿದ್ದಾರೆ. ಕಳೆದ ಎರಡು ದಿನಗಳಿಂದ ವಿಶೇಷ ರೈಲುಗಳ ಮೂಲಕ 2,830 ಜನ ಸೇರಿ ಒಟ್ಟು 3,080 ಜನರು ಹೊರ ರಾಜ್ಯಗಳಿಗೆ ನಿರ್ಗಮಿಸಿದ್ದಾರೆ.

ಮೇ. 7ರಿಂದ ಮೇ. 14ರವರೆಗೆ ಆಂಧ್ರ ಪ್ರದೇಶ- 42, ಗೋವಾ-194, ಗುಜರಾತ್-66, ಕೇರಳ-2, ಮಹಾರಾಷ್ಟ್ರ-340, ರಾಜಸ್ಥಾನ-22, ತಮಿಳುನಾಡು-51, ತೆಲಂಗಾಣ-41, ಮದ್ಯಪ್ರದೇಶ-02, ಉತ್ತರ ಪ್ರದೇಶ-08 ಜನ ಸೇರಿ ಒಟ್ಟು 768 ಜನರು ಜಿಲ್ಲೆಗೆ ಆಗಮಿಸಿದ್ದಾರೆ. ಅವರಲ್ಲಿ 248 ಜನ ಹೋಟೆಲ್​ ಕ್ವಾರಂಟೈನ್ ಹಾಗೂ 505 ಜನ ಸಾಂಸ್ಥಿಕ ಕ್ವಾರಂಟೈನ್​ಗೆ ಒಳಪಟ್ಟಿದ್ದಾರೆ. ಆಗಮಿಸುವ ಎಲ್ಲಾ ಜನರ ನೋಂದಣಿ, ಆರೋಗ್ಯ ತಪಾಸಣೆ ಮತ್ತು ಗಂಟಲು ದ್ರವ ಸಂಗ್ರಹಣಾ ಕಾರ್ಯ ಧಾರವಾಡ ಕೃಷಿ ವಿವಿ ಆವರಣ ಹಾಗೂ ಹುಬ್ಬಳ್ಳಿಯ ತಡಸ ಕ್ರಾಸ್ ಬಳಿ ಚೆಕ್‍ ಪೋಸ್ಟ್​​ನಲ್ಲಿ ನಡೆಯುತ್ತಿದೆ. ಅವಳಿ ನಗರದ ಎಲ್ಲಾ ಸರ್ಕಾರಿ ಹಾಸ್ಟೆಲ್‍ಗಳು, ಕರ್ನಾಟಕ ವಿವಿ ಮತ್ತು ಕೃಷಿ ವಿವಿಯ ವಿದ್ಯಾರ್ಥಿ ನಿಲಯಗಳನ್ನು ಸಾಂಸ್ಥಿಕ ಕ್ವಾರಂಟೈನ್‍ಗೆ ಗುರುತಿಸಲಾಗಿದೆ.

ಇನ್ನು ಹೋಟೆಲ್​ಗಳಲ್ಲಿ ಸ್ವಂತ ವೆಚ್ಚ ಭರಿಸಿ ಕ್ವಾರಂಟೈನ್ ಇರಬಯಸುವವರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ನೋಡಲ್ ಅಧಿಕಾರಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮೋಹನ್ ಹಂಚಾಟೆ ತಿಳಿಸಿದ್ದಾರೆ. ಮೊದಲ ಹಂತದಲ್ಲಿ ಜಿಲ್ಲೆಯಿಂದ ರಾಜ್ಯದೊಳಗಿನ ವಿವಿಧ ಜಿಲ್ಲೆಗಳಿಗೆ ಸುಮಾರು 2,000 ಜನರನ್ನು ಕಳುಹಿಸಲಾಗಿದೆ. ಇದೀಗ ಹೊರ ರಾಜ್ಯಗಳಿಗೆ ಶ್ರಮಿಕ್​ ಎಕ್ಸ್‍ಪ್ರೆಸ್ ರೈಲಿನ ಮೂಲಕ ಮೇ. 13ರಂದು 1,452 ಹಾಗೂ ಮೇ. 14ರಂದು 1,378 ಜನರನ್ನು ಕಳುಹಿಸಲಾಗಿದೆ. ಇದಲ್ಲದೆ ಬಸ್‍ಗಳ ಮೂಲಕ ಈಗಾಗಲೇ 250 ಜನರು ಸೇರಿ ಹೊರ ರಾಜ್ಯಗಳಿಗೆ ಈವರೆಗೆ ಒಟ್ಟು 3,080 ಜನರು ನಿರ್ಗಮಿಸಿದ್ದಾರೆ ಎಂದು ನೋಡಲ್ ಅಧಿಕಾರಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಎನ್.ಆರ್. ಪುರುಷೋತ್ತಮ ಹೇಳಿದ್ದಾರೆ.

ಮೇ. 17ರಂದು ಉತ್ತರ ಪ್ರದೇಶ, ಬಿಹಾರ ಹಾಗೂ ಮೇ. 19ರಂದು ಜಾರ್ಖಂಡ್‍ಗೆ ವಿಶೇಷ ರೈಲು: ಹುಬ್ಬಳ್ಳಿ ರೈಲು ನಿಲ್ದಾಣದಿಂದ ಮೇ. 17ರಂದು ಉತ್ತರಪ್ರದೇಶದ ಮೂಲಕ ಬಿಹಾರದ ಕಟಿಯಾರ ರೈಲು ನಿಲ್ದಾಣಕ್ಕೆ ಹಾಗೂ ಮೇ. 19ರಂದು ಜಾರ್ಖಂಡ್ ರಾಜ್ಯಕ್ಕೆ ವಿಶೇಷ ಶ್ರಮಿಕ್​ ಎಕ್ಸ್​‍ಪ್ರೆಸ್ ರೈಲುಗಳು ಹೊರಡಲಿವೆ. ಈಗಾಗಲೇ ಸೇವಾ ಸಿಂಧು ವೆಬ್‍ ಪೋರ್ಟಲ್ ಮೂಲಕ ನೋಂದಾಯಿಸಿಕೊಂಡಿರುವವರು ಹಾಗೂ ಅರ್ಜಿ ತಿರಸ್ಕೃತಗೊಂಡವರು ಕೂಡಾ ಈ ಸೌಲಭ್ಯ ಬಳಸಿಕೊಂಡು ತಮ್ಮ ತವರು ರಾಜ್ಯಗಳಿಗೆ ತೆರಳಬಹುದು. ನಿಗದಿತ ದಿನಾಂಕಗಳಂದು ಮುಂಜಾನೆ ಅಗತ್ಯ ದಾಖಲೆಗಳೊಂದಿಗೆ ರೈಲು ನಿಲ್ದಾಣಕ್ಕೆ ಆಗಮಿಸಿ ಹೆಸರು ನೋಂದಾಯಿಸಿಕೊಂಡು ಟಿಕೆಟ್ ಪಡೆದು ಪ್ರಯಾಣಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.