ಧಾರವಾಡ : ಜಿಲ್ಲೆಯ ಕೊರೊನಾ ಬ್ಯುಲೆಟಿನ್ ಬಿಡುಗಡೆಯಾಗಿದೆ. 106 ಕೊರೊನಾ ಶಂಕಿತರ ಪೈಕಿ 85 ಜನರ ವರದಿ ನೆಗೆಟಿವ್ ಬಂದಿದೆ. ನಾಲ್ವರ ವರದಿ ಮಾತ್ರ ಪಾಸಿಟಿವ್ ಬಂದಿದೆ.
106ರ ಪೈಕಿ 17 ವರದಿ ಬಾಕಿಯಿದೆ. ಇಂದು ಹೊಸದಾಗಿ 32 ಜನರಲ್ಲಿ ಶಂಕಿತ ಕೊರೊನಾ ಗುಣಲಕ್ಷ್ಮಣ ಪತ್ತೆಯಾಗಿವೆ. ಒಟ್ಟು 49 ಶಂಕಿತರ ವರದಿ ಬರಬೇಕಿದೆ. ಶಂಕಿತರ ಕಫದ ಮಾದರಿ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ. 9 ಜನರಿಗೆ ಆಸ್ಪತ್ರೆಯಲ್ಲಿ ಐಸೋಲೇಷನ್‌ನಲ್ಲಿಡಲಾಗಿದೆ. ಈವರೆಗೆ ಒಟ್ಟು 964 ಜನರ ಮೇಲೆ ನಿಗಾವಹಿಸಲಾಗಿದೆ.
263 ಜನರಿಗೆ 14 ದಿನಗಳ ಹೋಂ ಐಸೋಲೇಷನ್‌ನಲ್ಲಿಡಲಾಗಿದೆ. ಪಾಸಿಟಿವ್ ಬಂದಿರುವ ನಾಲ್ವರು ಪಿ-194ರ ಮನೆ ಸದಸ್ಯರಾಗಿದ್ದಾರೆ. ಅವರೆಲ್ಲರೂ ಹುಬ್ಬಳ್ಳಿಯವರು. ಸದ್ಯ ಜಿಲ್ಲೆಯಲ್ಲಿ ಸದ್ಯ ಕೊರೊನಾ ಪಾಸಿಟಿವ್ ಸಂಖ್ಯೆ 5ಕ್ಕೇರಿದೆ.