ETV Bharat / state

ನಮ್ಮ ಹೋರಾಟ ನಿಂತಿಲ್ಲ, ಜ.9ಕ್ಕೆ ಹುಬ್ಬಳ್ಳಿಯಲ್ಲಿ ಮತ್ತೆ ಬೃಹತ್ ಪ್ರತಿಭಟನೆ: ಆರ್ ಅಶೋಕ್​

''ನಮ್ಮ ಹೋರಾಟ ನಿಂತಿಲ್ಲ, ಜನವರಿ 9ಕ್ಕೆ ಹುಬ್ಬಳ್ಳಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು'' ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿದ್ದಾರೆ.

ಆರ್ ಅಶೋಕ್  ಬೃಹತ್ ಪ್ರತಿಭಟನೆ  Massive protest  R Ashok
ಆರ್. ಅಶೋಕ್
author img

By ETV Bharat Karnataka Team

Published : Jan 3, 2024, 8:51 PM IST

Updated : Jan 3, 2024, 10:33 PM IST

ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಪ್ರತಿಕ್ರಿಯೆ

ಹುಬ್ಬಳ್ಳಿ: ''ಕಾಂಗ್ರೆಸ್ ಸರ್ಕಾರ ನಾಲ್ವರು ಹಿಂದೂಗಳನ್ನು ಬಂಧಿಸಿ ಹೆದರಿಸೋಕೆ ನೋಡ್ತಿದೆ. ಸರ್ಕಾರದ ಗೊಡ್ಡು ಬೆದರಿಕೆಗೆ ಹೆದರೋರು ಯಾರೂ ಇಲ್ಲ'' ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿದ್ದಾರೆ.

ಹಿಂದೂ ಕಾರ್ಯಕರ್ತ ಶ್ರೀಕಾಂತ್​ ಪೂಜಾರಿ ಮನೆಗೆ ಭೇಟಿ ನೀಡಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ''ಹಿಂದೂ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಬಂಧನಕ್ಕೊಳಗಾದವರ ಆರೋಗ್ಯ ಸರಿಯಿರಲಿಲ್ಲ. ಅವರ ಎರಡು ಕೈ ಆಪರೇಶನ್ ಆಗಿವೆ. ಮೂರು ದಿನ ಕಾಲ ಕೋರ್ಟ್ ರಜೆ ಇರುವ ಸಮಯದಲ್ಲಿ ಬಂಧನ ಮಾಡಿ ಜೈಲಿಗೆ ಹಾಕಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗುತ್ತಿರೋದಕ್ಕೆ ಹೊಟ್ಟೆ ಕಿಚ್ಚಿನಿಂದ ಕಾಂಗ್ರೆಸ್​ನವರು ನಾಲ್ಕು ಜನ ಹಿಂದೂಗಳನ್ನು ಒಳಗೆ ಹಾಕಿದರೆ, ಯಾರು ಬರಲ್ಲ ಎಂದುಕೊಂಡಿದ್ದಾರೆ. ಕೂಡಲೇ ಶ್ರೀಕಾಂತ್ ಪೂಜಾರಿಯನ್ನು ಬಿಡುಗಡೆಗೊಳಿಸಬೇಕು. ಇನಸ್ಪೆಕ್ಟರ್ ಅಮಾನತು ಆಗಬೇಕು. ಬಿ ಕೆ ಹರಿಪ್ರಸಾದ ಅವರಿಗೆ ಮತಿಭ್ರಮಣೆ ಆಗಿದೆ'' ಎಂದರು.

''ದೇಶದಲ್ಲಿ ಬಿಜೆಪಿ ಸರ್ಕಾರ ಇದೆ. ನಾವು ಯಾವುದಕ್ಕೂ ಹೆದರಲ್ಲ. ನಮ್ಮ ವಕೀಲರು ಕೋರ್ಟ್​ನಲ್ಲಿ ಬೇಲ್​ಗಾಗಿ ಅರ್ಜಿ ಸಲ್ಲಿಸುತ್ತಾರೆ. ಪೊಲೀಸ್ ಅಧಿಕಾರಿ ದೌರ್ಜನ್ಯ ಮಾಡಿ ಹಿಂದೂ ಕಾರ್ಯಕರ್ತನನ್ನು ಬಂಧಿಸಿದ್ದಾರೆ. ಮತ್ತೆ ಜನವರಿ 9ರಂದು ದೊಡ್ಡ ಹೋರಾಟವನ್ನು ಮಾಡುತ್ತೇವೆ. ಪೊಲೀಸ್ ಅಧಿಕಾರಿಯನ್ನು ವರ್ಗಾವಣೆ ಮಾಡಿದ್ರೆ ಸಾಲದು. ಸಸ್ಪೆಂಡ್ ಮಾಡಲೇಬೇಕು. ನಮ್ಮ ಬೇಡಿಕೆ‌ ಈಡೇರದಿದ್ದರೆ, ಮತ್ತೆ ಹೋರಾಟವನ್ನು ಮುಂದುವರೆಸುತ್ತೇವೆ ಎಂದು ಅಶೋಕ್​ ತಿಳಿಸಿದರು.

''ಇದು ಹಿಂದೂ ದೇಶ, ನಾವು ಭಾರತೀಯರು. ಈ ಹಿಂದೆ ಬೆಂಗಳೂರಲ್ಲಿ ದಲಿತ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ​ ಅವರ ಮನೆಗೆ ಬೆಂಕಿ ಬಿದ್ದಾಗ ಇವರು ಅವರ ಪರವಾಗಿ ನಿಲ್ಲಲಿಲ್ಲ. ಜನ ಇವರಿಗೆ ಸರಿಯಾದ ಪಾಠವನ್ನು ಕಲಿಸುತ್ತಿದ್ದಾರೆ '' ಎಂದು ಹರಿಹಾಯ್ದರು.

''ಸಿದ್ದರಾಮಯ್ಯ ಅವರಿಂದ ಕಾನೂನು ಬಗ್ಗೆ ಕಲಿಯೋದು ಏನೂ ಇಲ್ಲ. ವಿಧಾನಸೌಧದ ಬಾಗಿಲಿಗೆ ಒದ್ದಾಗ ಇವರ ಕಾನೂನು ಜ್ಞಾನ ಎಲ್ಲಿತ್ತು. ಅವರು ಹೋರಾಟ ಮಾಡುವ ಮೂಲಕ ಕಾನೂನಿಗೆ ಅಗೌರವ ತೋರಿದ್ದರು. ಸಿದ್ದರಾಮಯ್ಯ ಅವರು ವಿಧಾನಸೌಧವನ್ನು ಕಾಲಲ್ಲಿ ಒದ್ದರಲ್ಲ. ಅವಾಗ ಕಾನೂನು ಜ್ಞಾನ ಇರಲಿಲ್ಲ. ಕಾನೂನು ಕೈಗೆ ತೆಗೆದುಕೊಂಡವರು ನೀವು. ಶ್ರೀಕಾಂತ್​ ಪೂಜಾರಿ ಅವರು ಆಟೋ ಚಾಲಕರಾಗಿದ್ದಾರೆ'' ಎಂದು ಆರ್​ ಅಶೋಕ್​ ಹೇಳಿದರು.

ಇದನ್ನೂ ಓದಿ: ಶ್ರೀಕಾಂತ್ ಪೂಜಾರಿಯನ್ನು ಬಂಧಿಸದೇ ಬಿಟ್ಟರೆ ಶ್ರೀರಾಮಚಂದ್ರನೂ ಕ್ಷಮಿಸಲಾರ: ಸಿಎಂ ಸಿದ್ದರಾಮಯ್ಯ

Last Updated : Jan 3, 2024, 10:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.