ಹುಬ್ಬಳ್ಳಿ: ಶಾಪ್ಕ್ಲೂವ್ ಆ್ಯಪ್ (shopclues app)ನಲ್ಲಿ ಆರ್ಡರ್ ಮಾಡಿದ ವಾಚ್ ಮತ್ತು ಸ್ಕ್ರೂಡ್ರೈವರ್ ಖಚಿತತೆಗೆ 10 ರೂಪಾಯಿ ಕಳುಹಿಸಲು ಹೇಳಿ 1.38 ಲಕ್ಷ ರೂ. ಲಪಾಟಾಯಿಸಿರುವ ಘಟನೆ ನಗರದಲ್ಲಿ ನಡೆದಿದೆ.
ಗೋಪಾಲರಾವ್ ಶಾಪ್‌ಕ್ಲುಸ್ ಆ್ಯಪ್ನಲ್ಲಿ ವಾಚ್ ಮತ್ತು ಸ್ಕ್ರೂಡ್ರೈವರ್ ಆರ್ಡರ್ ಮಾಡಿದ್ದರು. ಹದಿನೈದು ವಾರವಾದರೂ ಅದು ಬರದೇ ಇದ್ದಾಗ, ವೆಬ್‌ಸೈಟ್ ಹುಡುಕಿ ಕಸ್ಟಮರ್ ಕೇರ್ ಸೆಂಟರ್ ನಂಬರ್‌ಗೆ ಕರೆ ಮಾಡಿದ್ದಾರೆ. ನಂತರ ಅವರಿಗೆ ಕರೆ, ಶಾಪ್ಕ್ಲೂವ್ನಿಂದ ಕರೆ ಮಾಡಿರುವುದಾಗಿ ನಂಬಿಸಿದ ವಂಚಕ, ಆರ್ಡರ್ ಖಚಿತ ಪಡಿಸಲು 10 ರೂ. ಕಳುಹಿಸಬೇಕು ಎಂದು ಒಂದು ಲಿಂಕ್ ಕಳುಹಿಸಿದ್ದಾನೆ. ಲಿಂಕ್ ಒಪನ್ ಮಾಡಿಸಿ ಬ್ಯಾಂಕ್ ಖಾತೆಯ ಯುಪಿಐ ಐಡಿ ಸಬ್‌ಮೀಟ್ ಮಾಡಿಸಿಕೊಂಡು ಹಣ ವರ್ಗಾಯಿಸಿಕೊಂಡಿದ್ದಾನೆ.
ಈ ಘಟನೆ ಕುರಿತು ಹುಬ್ಬಳ್ಳಿ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಬಸ್‌ನಲ್ಲಿ ಅಫೀಮು ಸೇವಿಸಿದ್ದ ಇಬ್ಬರ ಬಂಧನ
ಮುಂಬೈನಿಂದ ಬೆಂಗಳೂರಿಗೆ ತೆರಳುತ್ತಿದ್ದ ಎಸ್‌ಆರ್‌ಎಸ್ ಬಸ್‌ನಲ್ಲಿ ಅಫೀಮು ಸೇವನೆ ಮಾಡಿದ ಬೆಂಗಳೂರಿನ ಇಬ್ಬರು ಆರೋಪಿಗಳನ್ನು ಗೋಕುಲ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಶಿವಾಜಿನಗರದ ನಿವಾಸಿಗಳಾದ ಮಹ್ಮದ್ ಶಾಹಿದ್ ಅಸ್ಲಂಖಾನ್ ಮತ್ತು ಸೈಯದ್ ಇಪ್ತಿಕಾರ್ ಸೋಹೆಲ್ ಬಂಧಿತರು. ಧಾರವಾಡದ ನರೇಂದ್ರ ಟೋಲ್‌ನಾಕಾ ಬಳಿ ಉಪಾಹಾರ ಸೇವನೆಗೆ ಬಸ್ ನಿಲ್ಲಿಸಿದಾಗ, ಆರೋಪಿಗಳು ಅಫೀಮು ಸೇವನೆ ಮಾಡಿದ್ದರು. ಬಸ್‌ಲ್ಲಿದ್ದ ಪ್ರಯಾಣಿಕರು ವಿಚಾರಿಸಿದಾಗ ಸಿಗರೇಟ್ ಸೇದಿರುವುದಾಗಿ ಹೇಳಿದ್ದರು. ನಂತರ ಆರೋಪಿಗಳನ್ನು ಗೋಕುಲ ಠಾಣೆಗೆ ಕರೆ ತರುವಾಗ, ಪ್ರಯಾಣಿಕರ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ. ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಅಫೀಮು ಸೇವನೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಗೋಕುಲ ರೋಡ್ ಪೊಲೀಸ್ ಠಾಣೆಯ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.