ಹುಬ್ಬಳ್ಳಿ: ಆನ್‌ಲೈನ್‌ನಲ್ಲಿ ಹಣ ಹೂಡಿಕೆ ಹೆಸರಲ್ಲಿ ಲಕ್ಷಾಂತರ ರೂಪಾಯಿ ವಂಚಿಸಿರುವುದು ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ. ನಕಲಿ ಜಾಹೀರಾತು ನಂಬಿ ನಾಲ್ವರು ಹೂಡಿಕೆ ಮಾಡಿ 1.56 ಲಕ್ಷ ರೂಪಾಯಿ ಕಳೆದುಕೊಂಡಿರುವ ಕುರಿತು ಹುಬ್ಬಳ್ಳಿ ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿದೆ. ಫೇಸ್‌ಬುಕ್‌ನಲ್ಲಿ ನಕಲಿ ಜಾಹೀರಾತು ನಂಬಿ ಹುಬ್ಬಳ್ಳಿಯ ರೋಹಿತ್ ಬಿ., ರವಿ ಡಿ., ರಾಹುಲ್ ಬಿ. ಮತ್ತು ಅರವಿಂದಕುಮಾರ ಹಣ ಹೂಡಿದ್ದರು.
ಫೇಸ್‌ಬುಕ್‌ನಲ್ಲಿ ಇನ್ವೆಸ್ಟ್ ಆ್ಯಂಡ್ ಮೇಕ್ ಮೋರ್ ಮನಿ ಎಂಬ ಹೆಸರಲ್ಲಿ ನಕಲಿ ಖಾತೆ ಸೃಷ್ಟಿಸಿದ್ದ ಅಪರಿಚಿತರು, ಹಣ ಹೂಡಿಕೆ ಕುರಿತು ಜಾಹೀರಾತು ಹಾಕಿದ್ದರು. ಅದನ್ನು ನಂಬಿದ್ದ ಯುವಕರು ಆರಂಭದಲ್ಲಿ ತಲಾ 500 ಹೂಡಿಕೆ ಮಾಡಿದ್ದರು. ಪ್ರತಿದಿನ 22 ರಂತೆ ಲಾಭಾಂಶ ನೀಡಿದ್ದರು. ಹೆಚ್ಚು ಹಣ ತುಂಬಿಸಿಕೊಂಡಿದ್ದ ಅಪರಿಚಿತರು, ಮರಳಿ ಹಣ ನೀಡದೆ ವಂಚಿಸಿದ್ದಾರೆ. ಈ ಕುರಿತು ದೂರು ದಾಖಲಿಸಿಕೊಂಡ ಹುಬ್ಬಳ್ಳಿ ಸೈಬರ್ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ:ಅಣ್ಣ ಹಣ ಜೋಪಾನವೆಂದು ಅಕೌಂಟ್ನಲ್ಲಿದ್ದ 45,600 ಹಣ ಎಗರಿಸಿದ ಅಪರಿಚಿತ!