ETV Bharat / state

ಈರುಳ್ಳಿ ದರ ದಿಢೀರ್​ ಇಳಿಕೆ ಖಂಡಿಸಿ ಹುಬ್ಬಳ್ಳಿಯಲ್ಲಿ ರೈತರಿಂದ ರಸ್ತೆ ಬಂದ್ - hubballi onion farmers protest news

ಈರುಳ್ಳಿ ದರದಲ್ಲಿ ದಿಢಿರ್​ ಕುಸಿದಿರುವ ಹಿನ್ನೆಲೆಯಲ್ಲಿ ರೈತರು ಹುಬ್ಬಳ್ಳಿಯ ಎಪಿಎಂಸಿ ಬಳಿ ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದರು.

ಈರುಳ್ಳಿ ದರ ಇಳಿಕೆ ಖಂಡಿಸಿ ಹುಬ್ಬಳ್ಳಿಯಲ್ಲಿ ರೈತರಿಂದ ರಸ್ತೆ ಬಂದ್
author img

By

Published : Nov 5, 2019, 9:44 PM IST

ಹುಬ್ಬಳ್ಳಿ: ಈರುಳ್ಳಿ ದರ ದಿಢೀರ್​​ ಕುಸಿದಿರುವ ಹಿನ್ನೆಲೆಯಲ್ಲಿ ರೈತರು ಇಂದು ಮತ್ತೆ ನಗರದ ಎಪಿಎಂಸಿ ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ನಗರದ ಎಪಿಎಂಸಿ ಎದುರಿಗೆ ಪ್ರತಿಭಟನೆ ನಡೆಸಿದ ರೈತರು, ಹುಬ್ಬಳ್ಳಿ-ಧಾರವಾಡ ರಸ್ತೆ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಗೆ ಮಾಜಿ ಶಾಸಕ ಎನ್.ಹೆಚ್. ಕೋನರೆಡ್ಡಿ ಸಾಥ್ ನೀಡಿದರು. ರೈತರು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

ಈರುಳ್ಳಿ ದರ ಇಳಿಕೆ ಖಂಡಿಸಿ ಹುಬ್ಬಳ್ಳಿಯಲ್ಲಿ ರೈತರಿಂದ ರಸ್ತೆ ಬಂದ್

ನೆರೆ ಹಾವಳಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದರೂ ಕೂಡ ಸರ್ಕಾರ ಈರುಳ್ಳಿ ಬೆಳೆಗಾರರಿಗೆ ಬೆಂಬಲ ಬೆಲೆ ನೀಡುತ್ತಿಲ್ಲ. ಕಳೆದ ದಿನಗಳಲ್ಲಿ ಕ್ವಿಂಟಾಲ್​ಗೆ 4-5 ಸಾವಿರ ಇದ್ದ ಈರುಳ್ಳಿ ಬೆಲೆ‌ ಈಗ ಏಕಾಏಕಿ 1,500 ರೂ.ಗೆ ಕುಸಿದಿರುವುದು ರೈತರಿಗೆ ದೊಡ್ಡ ಹೊಡೆತ ಬಿದ್ದಂತಾಗಿದೆ. ಮಳೆಯಿಂದ ಭಾರಿ ಪ್ರಮಾಣದ ಬೆಳೆ ನಾಶವಾಗಿದ್ದು, ಉಳಿದ ಬೆಳೆಗಳನ್ನು ಮಾರುಕಟ್ಟೆಗೆ ತಂದರೆ ದಲ್ಲಾಳಿಗಳು ದಿಢೀರ್​ ಬೆಲೆ ಕಡಿಮೆ ಮಾಡಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಏಕಾಏಕಿ ರಸ್ತೆ ತಡೆ ನಡೆಸಿದ್ದರಿಂದ ಅರ್ಧ ಗಂಟೆಗೂ ಹೆಚ್ಚು ಹೊತ್ತು ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.

Intro:ಹುಬ್ಬಳ್ಳಿ-04

ಈರುಳ್ಳಿ ದರ ಧೀಡಿರ ಕುಸಿದಿರುವ ಹಿನ್ನೆಲೆಯಲ್ಲಿ ರೈತರು ನಗರದ ಎಪಿಎಂಸಿ ಬಳಿ ರಸ್ತೆ ತಡೆದು ಇಂದು ಮತ್ತೆ ಪ್ರತಿಭಟನೆ ನಡೆಸಿದರು.

ನಗರದ ಎಪಿಎಂಸಿ ಎದುರಿಗೆ ಪ್ರತಿಭಟನೆ ಮಾಡಿದ ರೈತರು.
ಹುಬ್ಬಳ್ಳಿ ಧಾರವಾಡ ರಸ್ತೆ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಇನ್ನೂ ಪ್ರತಿಭಟನೆಗೆ ಮಾಜಿ ಶಾಸಕ ಎನ್.ಹೆಚ್. ಕೋನರೆಡ್ಡಿ ಸಾಥ್ ನೀಡಿದರು.
ಇದೇ ಸಂದರ್ಭದಲ್ಲಿ ರೈತರು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ನೆರೆ ಹಾವಳಿಯಿಂದ ರೈತ ಸಮುದಾಯದ ಸಂಕಷ್ಟಕ್ಕೆ ಸಿಲುಕಿದ್ದರೂ ಕೂಡ ಸರ್ಕಾರ ಈರುಳ್ಳಿ ಬೆಳೆಗಾರರಿಗೆ ಬೆಂಬಲ ಬೆಲೆ ನೀಡುತ್ತಿಲ್ಲ. ಕಳೆದ ದಿನಗಳಲ್ಲಿ 4-5 ಸಾವಿರ ಇದ್ದ ಈರುಳ್ಳಿ ಬೆಲೆ‌ ಈಗ ಏಕಾಏಕಿ 1500 ಮೌಲ್ಯಕ್ಕೆ ಕುಸಿದಿರುವುದು ರೈತರಿಗೆ ದೊಡ್ಡ ಹೊಡೆತ ಬಿದ್ದಂತಾಗಿದೆ ಎಂದು ಪ್ರತಿಭಟನಾನಿರತ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಮಳೆಯಿಂದ ಸುಮಾರು ಪ್ರಮಾಣದ ಬೆಳೆ ನಾಶವಾಗಿದ್ದು, ಉಳಿದ ಬೆಳೆಗಳನ್ನು ಮಾರುಕಟ್ಟೆ ಮಾರಾಟಕ್ಕೆ ತಂದರೆ ದಲ್ಲಾಳರು ದೀಡಿರ್ ಬೆಲೆ ಕಡಿಮೆ ಮಾಡಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಸರಕಾರ ರೈತರ ಪಾಲಿಗೆ ಇಲ್ಲವೆಂದು ಸರ್ಕಾರದ ವಿರುದ್ಧ ಗುಡಿಗಿದರು.

ಪ್ರಯಾಣಿಕರ ಪರದಾಟ; ಏಕಾಏಕಿ ರಸ್ತೆ ತಡೆ ನಡೆಸಿದ್ದರಿಂದ ಬಸ್ ಸಂಚಾರ ಸೇರಿದಂತೆ ಯಾವುದೇ ವಾಹನಗಳು ಅರ್ಧ ಗಂಟೆಗಳ ಕಾಲ ಪ್ರಯಾಣಿಕರು ಪರದಾಡಿದರು.Body:H B GaddadConclusion:Etv hubli
ETV Bharat Logo

Copyright © 2025 Ushodaya Enterprises Pvt. Ltd., All Rights Reserved.