ಧಾರವಾಡ: ಜಿಲ್ಲಾಸ್ಪತ್ರೆ ಎದುರು ವೃದ್ಧೆಯೊಬ್ಬರು ನರಳಾಡುತ್ತಿರುವ ಮನಕಲುಕುವ ಘಟನೆ ನಡೆದಿದ್ದು, ದಾರಿ ತಪ್ಪಿ ಹುಬ್ಬಳ್ಳಿಯಿಂದ ನಗರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಮರಿಯವ್ವ ಮೂಲಿಮನಿ ಹಾವೇರಿ ಮೂಲದವರಾಗಿದ್ದು, ಇವರ ಗೋಳು ಕೇಳುವವರಿಲ್ಲದಂತಾಗಿದೆ. ಕಾಲಿಗೆ ಬಲವಾದ ಪೆಟ್ಟಾಗಿದ್ದರೂ ಆಸ್ಪತ್ರೆ ಹೊರಗೆ ವಾಸವಾಗಿದ್ದಾರೆ. ಚುಚ್ಚುಮದ್ದು ಮತ್ತು ಮಾತ್ರೆ ಕೊಟ್ಟು ಜಿಲ್ಲಾಸ್ಪತ್ರೆ ವೈದ್ಯರು ಕೈ ತೊಳೆದುಕೊಂಡಿದ್ದಾರೆ.
ಕಳೆದ ಒಂದು ವಾರದಿಂದ ಆಸ್ಪತ್ರೆ ಆವರಣದಲ್ಲಿ ವೃದ್ದೆ ವಾಸವಾಗಿದ್ದಾರೆ. ಹಾವೇರಿಯಲ್ಲಿರುವ ಮಕ್ಕಳಿಗೂ ಬರಲಾಗದ ಸ್ಥಿತಿ ನಿರ್ಮಾಣವಾಗಿದೆ. ಇತ್ತ ಆಸ್ಪತ್ರೆಯಲ್ಲಿಯೂ ಸೇರಿಸಿಕೊಳ್ಳದ ಕಾರಣ ವೃದ್ಧೆ ಆಸ್ಪತ್ರೆ ಹೊರಗೆ ನರಳಾಡುತ್ತಿದ್ದಾರೆ.